ಡಿ.ಜಿ.ಐ.ಟಿ (ತನಿಖೆ) ರವರಿಂದ ಬಂದಿರುವ ಅಧಿಕೃತ ಪತ್ರಿಕಾ ಪ್ರಕಟಣೆಯ ವಿವರಗಳು.

1] ಆದಾಯ ತೆರಿಗೆ ಕಾಯ್ದೆ, ಸೆಕ್ಷನ್ 132 -ನ ಅಡಿ ನಡೆದ ಸರ್ಚ್ ಆಪರೇಷನ್ ‘ಸಾಕ್ಷ್ಯಾಧಾರಗಳನ್ನು ಕಲೆಹಾಕುವ’ ಕೆಲಸವಾಗಿದ್ದು; ಕಾನೂನಾತ್ಮಕವಾಗಿ ಈ ಪ್ರಕ್ರಿಯೆ ನಡೆದಿರುತ್ತದೆ. ಸದರಿ, ಸರ್ಚ್ ಆಪರೇಷನ್ ತನಿಖೆಯ ಮುಂದುವರೆದ ಭಾಗವಾಗಿದ್ದು; ಇದು ಬಹಳಷ್ಟು ದಿನಗಳಿಂದ ನಡೆಯುತ್ತಾ ಬಂದಿರುತ್ತದೆ

2] ಸದರಿ ಸರ್ಚ್ ಆಪರೇಷನ್ ನ ಸಮಯ ಪೂರ್ವ ನಿರ್ಧಾರಿತವಾಗಿದ್ದು; ಗುಜಾರಾತಿನಿಂದ ಶಾಸಕರು ಬೆಂಗಳೂರಿನ ಈಗಲ್ ಟನ್ ರೆಸಾರ್ಟ್ ಗೆ ಆಗಮಿಸಿರುವ ವಿಷಯ ಅನಿರೀಕ್ಷಿತ/ಆಕಸ್ಮಿಕವಾಗಿರುತ್ತದೆ.

3] ಸಚಿವರೊಬ್ಬರ ಮನೆಯಲ್ಲಿ ಸರ್ಚ್ ನಡೆದಾಗ, ಸದರಿ ಸಚಿವರು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ ಒಂದರಲ್ಲಿ ಗುಜರಾತಿನ ಶಾಸಕರೊಂದಿಗೆ ಇದ್ದರು ಎಂದು ಮಾಹಿತಿಯ ಮೇರೆಗೆ, ಸದರಿ ಸಚಿವರು ತಂಗಿದ್ದ ಕೊಠಡಿಯನ್ನು ಮಾತ್ರ ಐ.ಟಿ. ಅಧಿಕಾರಿಗಳು ತಪಾಸಣೆ ಮಾಡಿರುತ್ತಾರೆ.

4] ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ ನಲ್ಲಿ ಉಳಿದುಕೊಂಡಿರುವ ಶಾಸಕರಿಗೂ; ಇಲಾಖೆಯಿಂದ ನಡೆದ ಶೋಧನೆಗೂ ಯಾವುದೇ ರೀತಿಯಾದ ಸಂಬಂಧವಿಲ್ಲ.

5] ಇಲಾಖೆಯಿಂದ ನಡೆಸಿರುವ ಸರ್ಚ್ ಆಪರೇಷನ್ ಕರ್ನಾಟಕ ಸರ್ಕಾರದ ಸಚಿವರೊಬ್ಬರ ಮೇಲಾಗಿದೆಯಷ್ಟೆ

Comments

comments