ಶ್ರೀಕೃಷ್ಣ ಏಡ್ಸ್ ರೋಗಿಯಂತೆ! ವಿಷ್ಣು ಮೊದಲ ರೇಪಿಸ್ಟ್ ಅಂತೆ! ಏನಾಗ್ತಿದೇರೀ ಸಿದ್ದರಾಮಯ್ಯನ ಕರ್ನಾಟಕದಲ್ಲಿ?!

ಸಿದ್ದರಾಮಯ್ಯನ ರಾಮರಾಜ್ಯ ಕರ್ನಾಟಕದಂಥ ಸುರಕ್ಷಿತ ತಾಣ ಜಗತ್ತಿನಲ್ಲೇ ಬೇರೊಂದಿಲ್ಲ. ಇಲ್ಲಿ ನೀವು ಕಾಂಗ್ರೆಸ್ ಪರವಾಗಿದ್ದೀರಿ, ಅವರು ಕೊಡುವ ಗಂಜಿಗೆ ತಕ್ಕಂತೆ ಭೋಪರಾಕ್ ಕೂಗುತ್ತೀರಿ, ಅಧಿಕಾರಶಾಹಿಯ ಬೂಟು ನೆಕ್ಕಲು ನಿಮ್ಮ ನಾಲಗೆಯನ್ನು ಎಷ್ಟು ಉದ್ದಕ್ಕೂ ಚಾಚಲು ತಯಾರಾಗಿದ್ದೀರಿ ಎಂಬುದನ್ನು ಸಾಬೀತುಪಡಿಸಿದರೆ ಸಾಕು ನಿಮ್ಮನ್ನು ಸಕಲ ರಕ್ಷಣೆ ಕೊಟ್ಟು ಮನೆನಾಯಿಯಂತೆ ಸಾಕಿಕೊಳ್ಳಲಾಗುತ್ತದೆ. ಇದಕ್ಕೆ ಉದಾಹರಣೆ ಬೇಕಾ?
ಮೊನ್ನೆ ಮೊನ್ನೆ ಹರೀಶ್ ಆನುಡಿ ಎಂಬ ವಿವಾದಾತ್ಮಕ ವ್ಯಕ್ತಿ ಹಿಂದೂಗಳ ಆರಾಧ್ಯದೈವ, ಯಾದವಕುಲತಿಲಕ ಶ್ರೀಕೃಷ್ಣ ಜಗತ್ತಿನ ಮೊದಲ ಏಡ್ಸ್ ರೋಗಿ ಅಂತ ಬರೆದ. ಗಲ್ಫ್ ದೇಶದಲ್ಲಿ ಕೂತು ಅಲ್ಲಿನವರ ಪ್ರವಾದಿಯ ಬಗ್ಗೆ ಇಂಥ ಒಂದೇ ಒಂದು ಶಬ್ದ ಬರೆದಿದ್ದರೆ ಅವನನ್ನು ಅಡ್ರೆಸ್ ಸಿಗದಂತೆ ಪಾತಾಳದಲ್ಲಿ ಹುಗಿದುಹಾಕುತ್ತಿದ್ದರು. ಕ್ರಿಶ್ಚಿಯನ್ ದೇಶದಲ್ಲಿದ್ದುಕೊಂಡು ಅವರ ಪ್ರವಾದಿಗೆ ಹೀಗೇನಾದರೂ ಅಂದಿದ್ದರೆ ಬರೆದವನನ್ನೇ ಮೊಳೆ ಹೊಡೆದು ತೋರಣ ಕಟ್ಟುತ್ತಿದ್ದರು. ಆದರೆ ಹರೀಶ ಹೇಳಿದ್ದು ಅಹಿಂದ ಸರಕಾರ ಮೆರೆಯುತ್ತಿರುವ ಕರ್ನಾಟಕದಲ್ಲಿ! ಹಾಗಾಗಿ ಇಂದಿಗೂ ಈ ಅಯೋಗ್ಯ ಆರಾಮಾಗಿ ಓಡಾಡಿಕೊಂಡಿದ್ದಾನೆ. ಹಿಂದೂಗಳ ವಿರೋಧ ಪ್ರಬಲವಾಗಿ ಇನ್ನೇನು ಹೋರಾಟದ ಸ್ವರೂಪ ಪಡೆಯುತ್ತದೆ ಎಂಬುದು ಖಾತರಿಯಾದ ಮೇಲೆ ಪೊಲೀಸರು ಅವನನ್ನು ನಾಮಕೇವಾಸ್ತೆ ಬಂಧಿಸಿ, ವಿಚಾರಣೆಯ ನಾಟಕ ಆಡಿ, ಅವನಿಂದ ಒಂದು ಹಾಸ್ಯಾಸ್ಪದ ಹೇಳಿಕೆ ಪಡೆದು ನಂತರ ಅಲೆಯಲು ಹೊರಗೆ ಬಿಟ್ಟಿದ್ದಾರೆ. ಯಾವುದೋ ಬಸ್ಸಲ್ಲಿ ಓಡಾಡ್ತಿದ್ದೆ, ಆಗ ಅದ್ಯಾವುದೋ ಹಂಪ್ ಬಂದು ಬಸ್ಸು ಎಗರಾಡಿದ ಹೊತ್ತಲ್ಲಿ ಪೋಸ್ಟ್ ಮಾಡಿದ್ದರಿಂದ ಹಾಗೆಲ್ಲ ಬಂತು ಅನ್ನೋ – ಚಿಕ್ಕಮಕ್ಕಳೂ ನಕ್ಕು ಸಾಯುವಂಥ ನಾನ್‍ಸೆನ್ಸ್ ಹೇಳಿಕೆ ಕೊಟ್ಟು ಆ ವ್ಯಕ್ತಿ ಬಚಾವಾಗಿ ಬಂದಿದಾನೆ ಅಂದ್ರೆ ಈ ರಾಜ್ಯದಲ್ಲಿ ಅದೆಂಥ ಲಾ ಆಂಡ್ ಪರಿಸ್ಥಿತಿ ಇದೆ ಎಂಬುದನ್ನು ಅಂದಾಜು ಮಾಡಿ!
ಎರಡು ವರ್ಷದ ಹಿಂದೆ ಈ ರಾಜ್ಯದಲ್ಲಿ ರಂಜನೆ, ಬೋಧನೆ, ಪ್ರಚೋದನೆ ಮಾಡ್ತೇನೆ ಎನ್ನುತ್ತ ಪತ್ರಿಕೆ ನಡೆಸುವ, ಪ್ರಚೋದನೆ ಮಾಡುವುದನ್ನೇ ಜೀವನದ ಏಕೈಕ ಕಾಯಕ ಮಾಡಿಕೊಂಡಿರುವ ಗೌರಿ ಲಂಕೇಶ್ ಎಂಬ ಬುದ್ಧಿಜೀವಿ ಗಣೇಶ ಹಬ್ಬಕ್ಕೆ ಚಂದಾ ಎತ್ತಲು ಬಂದ ಪುಟಾಣಿ ಹುಡುಗರಿಗೆ ವೈಚಾರಿಕ ಭಾಷಣ ಕೊಟ್ಟಿದ್ದರಂತೆ. ಹುಡುಗರಾ! ನೀವು ಪೂಜಿಸೋ ಗಣಪತಿ ಬಂದಿದ್ದೆಲ್ಲಿಂದ ಅಂತ ಗೊತ್ತಾ? ಅವನು ಬಂದದ್ದು ಪಾರ್ವತಿಯ ಮೈಯ ಮಣ್ಣಿಂದ. ಅಂದರೆ ಆಕೆ ಅದೆಷ್ಟು ದಿನದಿಂದ ಸ್ನಾನ ಮಾಡದೆ ಬಿದ್ದಿರಬೇಕು! ಮೈ ಕೆರೆದರೆ ಒಂದು ಮನುಷ್ಯಮೂರ್ತಿಯನ್ನೇ ಮಾಡುವಷ್ಟು ಮಣ್ಣು ಬರಬೇಕಂದ್ರೆ! ಎಂದೆಲ್ಲ ಹೇಳಿ ಹಿಂದೂ ದೇವರನ್ನು ಹೀನಾಮಾನ ಅಪಮಾನಿಸಿ, ಇಂಥ ದೇವರನ್ನೆಲ್ಲ ನೀವು ಪೂಜೆ ಮಾಡೋದು, ಮೂರ್ತಿ ಕೂರಿಸಿ ಉತ್ಸವ ಮಾಡೋದು ಇವೆಲ್ಲ ಚೆನ್ನಾಗಿರೋಲ್ಲ ಎಂದು ಉಪದೇಶ ಕೊಟ್ರಂತೆ. ಕೊಡೋ ಹತ್ತು ರುಪಾಯಿ ಚಂದಾ ಉಳಿಸಲು ಈಕೆ ಹಿಂದೂ ದೇವದೇವತೆಗಳನ್ನು ಅವಮಾನ ಮಾಡಿದ್ದೂ ಅಲ್ಲದೆ ವೈಚಾರಿಕತೆಯ ವಿಷಬೀಜವನ್ನು ಆ ಪುಟ್ಟ ಮಕ್ಕಳ ಮನಸ್ಸಲ್ಲಿ ತುಂಬಿಸಿ ಅವರನ್ನು ಧರ್ಮದ್ರೋಹಿಗಳಾಗಿ ಮಾಡಲು ಕೂಡ ಪ್ರಯತ್ನಪಟ್ಟರು. ಅದನ್ನೇ ಒಂದು ದೊಡ್ಡ ಸಾಧನೆ ಎನ್ನುವಂತೆ ಆಕೆ ಫೇಸ್‍ಬುಕ್‍ನಲ್ಲಿ ಬರೆದುಕೊಂಡದ್ದೂ ಆಯಿತು. ಈ ಹಿರಿಯ ಬುದ್ಧಿಜೀವಿಯೆಂಬ ಲದ್ದಿಜೀವಿಯ ಮೇಲೆ ಕರ್ನಾಟಕವೊಂದರಲ್ಲೇ 60ಕ್ಕೂ ಹೆಚ್ಚು ಪ್ರಕರಣಗಳು, ಎಫ್‍ಐಆರ್‍ಗಳು ದಾಖಲಾಗಿವೆ. ಸಿದ್ದರಾಮಯ್ಯನವರ ಆಪ್ತೆ ಎಂದು ಹೇಳಿಕೊಳ್ಳುವ ಈಕೆ ಅದೇ ಕಾರಣವನ್ನು ಮುಂದಿಟ್ಟುಕೊಂಡು, ತನಗೇನೂ ಆಗೇ ಇಲ್ಲವೆನ್ನುವಂತೆ ಆರಾಮಾಗಿ ಓಡಾಡಿಕೊಂಡಿದ್ದಾರೆ.
ಎರಡು ವರ್ಷದ ಹಿಂದೆ ಯೋಗೇಶ್ ಮಾಸ್ಟರ್ ಎಂಬ ವೈಚಾರಿಕ ವಿಕೃತನೊಬ್ಬ ಡುಂಡಿ ಎಂಬ ಕಾದಂಬರಿ ಬರೆದ. ಅದರಲ್ಲಿ ಗಣೇಶನ ಜನ್ಮ ಜಾಲಾಡುವ ನೆಪದಲ್ಲಿ ಎಲ್ಲಾ ಹಿಂದೂ ದೇವತೆಗಳನ್ನೂ ಬಾಯಿಗೆ ಬಂದಂತೆ ಟೀಕಿಸಿದ. ದೇವತೆಗಳ ಮೇಲೆ ಅಸಹ್ಯ ವರ್ಣನೆಗಳನ್ನು ಹರಿಯಬಿಟ್ಟ. ಬ್ರಹ್ಮನನ್ನು ಅತ್ಯಾಚಾರಿ ಎಂದ. ತನ್ನ ಎಲ್ಲ ತೆವಲುಗಳನ್ನೂ ಕಾದಂಬರಿಯ ಹೆಸರಲ್ಲಿ ತೀರಿಸಿಕೊಂಡ. ಈ ಕಾದಂಬರಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂಥ ಕೆಲಸ ಮಾಡಿದೆ ಎಂದು ಅವನ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿದರೆ, ಅದನ್ನು ತೆಗೆಸಿಹಾಕಲು ಪ್ರಯತ್ನಪಟ್ಟದ್ದು ತುಘಲಕ್, ಟಿಪ್ಪು ಸುಲ್ತಾನ್ ಮುಂತಾದವರನ್ನೆಲ್ಲ ದೇವತೆಗಳೆಂದು ಬಿಂಬಿಸಿಯೇ ತನ್ನ ಜೀವನದಲ್ಲಿ ಗಂಜಿ ಸಂಪಾದಿಸಿಕೊಂಡ ಜ್ಞಾನಪೀಠಿ ಗಿರೀಶ್ ಕಾರ್ನಾಡ್! ಬೆಂಗಳೂರು ಲಿಟರೇಚರ್ ಫೆಸ್ಟಿವಲ್‍ನಲ್ಲಿ ಮಾತಾಡುತ್ತ ಕಾರ್ನಾಡ್ ಹೇಳುತ್ತಾರೆ – ನಮ್ಮದೇ ಗೌರ್ಮೆಂಟ್ ಇರೋದ್ರಿಂದ ನಮಗೆ ಯೋಗೇಶ್ ಮಾಸ್ಟರ್ ಮೇಲೆ ಬಿದ್ದಿದ್ದ ಕೇಸುಗಳನ್ನು ತೆಗೆಸಿಹಾಕೋದಕ್ಕೆ ಸಾಧ್ಯವಾಯಿತು. ಬಿಜೆಪಿ ಗೌರ್ಮೆಂಟ್ ಇದ್ದಿದ್ದರೆ ಇದೆಲ್ಲ ಆಗುತ್ತಿತ್ತಾ? – ಅಂತ! ಅವತ್ತು ಸಿದ್ದರಾಮಯ್ಯ ಸರಕಾರದ ಕೃಪಾಕಟಾಕ್ಷದಿಂದಾಗಿ ಜೈಲಿನ ಕಂಬಿ ಎಣಿಸುವ ಕೆಲಸದಿಂದ ಪಾರಾಗಿ ಬಂದ ಅದೇ ಯೋಗೇಶ್ ಎಂಬ ಅರೆಹುಚ್ಚ ಇದೀಗ ದೇವತೆಗಳ ಬ್ಲೌಸಿನ ಬಗ್ಗೆ ಮಾತಾಡುತ್ತಿದ್ದಾನೆ. ಹಲವು ಕೈಗಳಿರುವ ದೇವತೆಗಳು ಬ್ಲೌಸ್ ಹೇಗೆ ಹಾಕಿಕೊಳ್ಳುತ್ತಾರೆ? ಹುಕ್ ಹೇಗೆ ಬಿಚ್ಚುತ್ತಾರೆ ಎಂಬುದರ ಚಿಂತೆಯಂತೆ ಇವನಿಗೆ!
ಬರೆದಿರುವ ಮೂರು ಮತ್ತೊಂದು ಸಾಲುಗಳನ್ನೇ ಕಾವ್ಯವೆಂದು ತಿಳಿದಿರುವ, ಕಾವ್ಯ ಬರೆದು ತಾನೂ ಬೇಂದ್ರೆ, ಅಡಿಗ ಮುಂತಾದವರ ಸಾಲಿನಲ್ಲಿದ್ದೇನೆಂಬ ಭ್ರಮೆಯಲ್ಲಿ ತೇಲಾಡುತ್ತಿರುವ, ಆದರೆ ವೈಚಾರಿಕವಾಗಿ ದಿವಾಳಿಯಾಗಿರುವ ಇನ್ನೊಂದು ವ್ಯಕ್ತಿ ಚೇತನಾ ತೀರ್ಥಹಳ್ಳಿ. ಮಲ್ಪಿಪಲ್ ಪರ್ಸನಾಲಿಟಿ ಎಂಬ ಮನೋರೋಗವೊಂದು ಮನಃಶಾಸ್ತ್ರದಲ್ಲಿದೆ. ಈಕೆಗೆ ಅದು ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನಾಲ್ಕು ಮತ್ತೊಂದು ಫೇಸ್‍ಬುಕ್ ಅಕೌಂಟುಗಳಂತೂ ಇವೆ. ಒಂದು ಅಕೌಂಟಿಂದ ಪೋಸ್ಟ್ ಹಾಕಿ ಅದನ್ನು ತನ್ನದೇ ಮತ್ತೆ ಮೂರು ಅಕೌಂಟುಗಳಿಂದ ರೀಪೋಸ್ಟ್ ಮಾಡುವ ಖಯಾಲಿಯೂ ಈಕೆಗಿದೆ. ಇರಲಿ, ಅದು ಅವರ ವೈಯಕ್ತಿಕ ತೆವಲುಗಳ ವಿಷಯ, ನಮಗ್ಯಾಕೆ ಎಂದು ಬಿಡಬಹುದು. ಆದರೆ ಈ ವ್ಯಕ್ತಿ ಹಿಂದೂ ದೇವರುಗಳನ್ನು ವಾಚಾಮಗೋಚರ ಬಯ್ಯುವುದನ್ನು ನಾವು ಸಹಿಸಬೇಕೆ? ಈಕೆಯ ಪ್ರಕಾರ ರೇಪ್ ಮಾಡುವ ಸಂಸ್ಕೃತಿಯನ್ನು ಹುಟ್ಟುಹಾಕಿದ್ದೇ ವಿಷ್ಣು ಅಂತೆ! ಹಿರಣ್ಯಕಶಿಪು ತಪಸ್ಸಿಗೆ ಕೂತಾಗ ದೇವತೆಗಳು ಕಯಾದುವನ್ನು ಎಳೆದುಕೊಂಡು ಹೋಗ್ತಿದ್ದರು. ಇಂಥಾ ಗಂಡಸರಿರುವ ನಾಡಿಂದ ಎಂಥಾ ನಿರೀಕ್ಷೆ ಎಂದು ಪೋಸ್ಟ್ ಹಾಕುವ ಈಕೆ ಗಂಡಸರನ್ನು ಬಯ್ಯುವುದೇ ಮಹಿಳಾವಾದ ಎಂದು ತಿಳಿದುಕೊಂಡಂತಿದೆ. ಈಕೆಯ ಮಹಿಳಾವಾದ ಏನಿದ್ದರೂ ತನ್ನದೇ ಬಳಗದ ಹೆಂಗಸರಿಗೆ ಮಾತ್ರ ಸೀಮಿತ. ಬೇರೆ ಸಿದ್ಧಾಂತದಡಿ ಗುರುತಿಸಿಕೊಂಡ ಹೆಂಗಸರು ದೌರ್ಜನ್ಯಕ್ಕೀಡಾದಾಗ ಈಕೆಯದ್ದು ಜಾಣಮೌನ! ಈಕೆಯ ಮಹಿಳಾವಾದದ ಆಳ-ಅಗಲಗಳು ಏನು ಬೇಕಾದರೂ ಇರಲಿ, ಆದರೆ ತನ್ನ ಸಿದ್ಧಾಂತದ ಪ್ರತಿಪಾದನೆಗಾಗಿ ಈಕೆ ಹಿಂದೂ ದೇವತೆಗಳನ್ನು ಅವಮಾನಿಸುವುದನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ. ಹಿಂದೂ ಅನ್ನುವ ಸಮಾಜದಲ್ಲಿ ಹುಟ್ಟಿದ್ದೇವೆ, ಅದಕ್ಕೇ ನಮ್ಮ ಸಮಾಜದ ದೇವತೆಗಳನ್ನು ಟೀಕಿಸುತ್ತೇವೆ ಎಂಬ ಇಂಥ ಎಡಬಿಡಂಗಿಗಳ ವಾದಗಳನ್ನು ನಾವು ನೇರವಾಗಿ ಪ್ರಶ್ನಿಸಬೇಕಾಗಿದೆ. ಇಂಥವರು ಹಿಂದೂ ಧರ್ಮದಲ್ಲಿ ಇರಬೇಕಾದ, ಉಳಿಯಬೇಕಾದ ಅಗತ್ಯ ಇದೆ ಎಂದು ಹಿಂದೂಗಳೇನೂ ಹರಕೆ ಹೊತ್ತುಕೊಂಡಿಲ್ಲ. ಹಿಂದೂ ಎಂದು ಹೇಳಿಕೊಳ್ಳಲು ಕಷ್ಟವಾದರೆ ಇವರೆಲ್ಲ ಬೇರೆ ಮತಗಳಿಗೆ ಮತಾಂತರವಾಗಲು ಸ್ವತಂತ್ರರು. ಹಾಗೆ ಮತಾಂತರವಾದ ಮೇಲೆ ಆಯಾ ಮತಗಳ ಪ್ರವಾದಿಗಳನ್ನು ಟೀಕಿಸಿ ಇವರು ಎಷ್ಟು ದಿನ ಬದುಕಿರುತ್ತಾರೆಂಬುದನ್ನು ನೋಡಬೇಕಾಗಿದೆ.
ಈ ಎಲ್ಲ ಎಡಬಿಡಂಗಿ ಬುದ್ಧಿಜೀವಿ ಗಂಜಿಗಿರಾಕಿಗಳಿಗೆ ಸಂಪೂರ್ಣ ರಕ್ಷಣೆ ಕೊಡುತ್ತಿರುವುದು ಹಿಂದೂಗಳ ಭಾವನೆಗಳನ್ನು ಕೆರಳಿಸುವುದೊಂದೇ ತನ್ನ ಒಂದಂಶದ ಕಾರ್ಯಕ್ರಮ ಎಂಬಂತೆ ನಡೆದುಕೊಳ್ಳುತ್ತಿರುವ ಸಿದ್ದರಾಮಯ್ಯ ಸರಕಾರ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಹಿಂದೂಗಳನ್ನು, ಅವರ ದೇವತೆಗಳನ್ನು ಅವಮಾನಿಸುವ ಒಂದೇ ಒಂದು ಸಂದರ್ಭವನ್ನು ಕೂಡ ಸರಕಾರ ಬಿಟ್ಟಿಲ್ಲ. ಮೈಸೂರಿನಲ್ಲಿ ಚಿಂತಕನೆಂಬ ಸೋಗು ಹಾಕಿಕೊಂಡಿರುವ ಭಗವಾನ್ ಎಂಬ ಅರೆಹುಚ್ಚನಲ್ಲ, ಪೂರ್ಣ ಹುಚ್ಚ ಶ್ರೀರಾಮ ಕುಡೀತಿದ್ದ, ಹೆಂಗಸರ ಸಂಗ ಮಾಡ್ತಿದ್ದ, ಅವನಿಗೆ ಪುರುಷತ್ವ ಇರಲಿಲ್ಲ ಎಂದು ಬಾಯಿಭೇದಿ ಮಾಡಿಕೊಂಡು ತಿರುಗಾಡುತ್ತಿದ್ದರೆ ಸಿದ್ದರಾಮಯ್ಯನವರ ಸರಕಾರ ಅವನ ರಕ್ಷಣೆಗೆಂದು ಪ್ಯಾದೆಗಳನ್ನು ನೇಮಿಸಿದೆ! ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ಜಗತ್ತಿನ ಎಲ್ಲಾದರೂ ನಡೆಯಲು ಸಾಧ್ಯವೇ? ಹಿಂದೂ ದೇವಸ್ಥಾನಗಳಿಗೆ ದಾಳಿ ಮಾಡಿ ಅಲ್ಲಿನ ವಿಗ್ರಹಗಳನ್ನು ಮುರಿದುಹಾಕಿ, ಗರ್ಭಗುಡಿಯ ಚೂರುಗಳನ್ನು ತಮ್ಮ ಮಸೀದಿಗಳ ಮೆಟ್ಟಿಲಲ್ಲಿ ಹಾಕುತ್ತಿದ್ದ ಮತಾಂಧ ದಾಳಿಕೋರರ ಕತೆಗಳನ್ನು ಕೇವಲ ಕೇಳಿದ್ದೆವು; ಸಿದ್ರೆಹಮಾನ್ ಸರಕಾರದಲ್ಲಿ ಅವನ್ನೆಲ್ಲ ಕಣ್ಣಾರೆ ಕಾಣುವ ಭಾಗ್ಯ ನಮಗೆ! ಯಾರಿಗುಂಟು ಯಾರಿಗಿಲ್ಲ, ನೀವೇ ಹೇಳಿ!

Comments

comments