ಮಾನವೀಯತೆಯ ಮೇರು-ಪರ್ವತಕ್ಕೆ ಕಲ್ಲು ಹೊಡೆಯುವ ತಿಳಿಗೇಡಿಗಳಿಗೆ ಏನು ಹೇಳೋಣ?

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಆಗ್ರಹಿಸಿ ಸಮಾವೇಶ ಒಂದರಲ್ಲಿ ಭಾಗವಹಿಸಿದ್ದ ‘ಆ ದಿನಗಳು’ ಖ್ಯಾತಿಯ ನಟ ಚೇತನ್ ತನ್ನ ಭಾಷಣದ ಬರದಲ್ಲಿ ಸಿದ್ಧಗಂಗೆಯ ನಡೆದಾಡುವ ದೇವರು, ಅನ್ನ ಬ್ರಹ್ಮ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ‘ಸಾಮಾಜಿಕ ಬದ್ಧತೆ’ ಇಲ್ಲ ಅನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಇವರ ನುಡಿಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದಲ್ಲದೆ ಚೇತನ್ ನಂತ ಮಾರ್ಕೆಟ್ ಇಲ್ಲದ ನಟನಿಗೆ ಇಂತಹ ಪಾಡು ಬರಬಾರ್ದಾಗಿತ್ತು ಇಂತೂ ಇನ್ನು ಕೆಲವರು ತಮ್ಮ ಅಷ್ಟಕ್ಕೇ ತಾವು ಮಾತನಾಡಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಒಳಗಾದ ಚೇತನ್ ರವರ ಮಾತುಗಳನ್ನು ಹಲವರು ಕಟುವಾಗಿ ಟೀಕಿಸಿದ್ದಾರೆ.

ಅಂದ ಹಾಗೆ ಕೆಲಸವಿಲ್ಲದೇ ಸಿಕ್ಕ ಸಿಕ್ಕ ಚಳುವಳಿಗಳಲ್ಲಿ ಸೊ ಕಾಲ್ಡ್ ಪ್ರಗತಿಪರರೊಂದಿಗೆ  ಗುರುತಿಸಿಕೊಂಡು ತನ್ನ ಅಪ್ರಬುದ್ಧ ಮಾತುಗಳನ್ನು ಆಡುವ ಚೇತನ್ ಮಾತನಾಡಿದ್ದು ಮಾನವೀಯತೆಯ ಮಹಾಶಿಖರ, ತ್ರಿವಿಧ ದಾಸೋಹಿ, ಬರಡು ಬೋಳಾಗಿದ್ದ ಗುಡ್ಡವನ್ನು ಆಧ್ಯಾತ್ಮಶಾಲೆಯನ್ನಾಗಿ ಪರಿವರ್ತಿಸಿದ ಮಹಾ ಸಂತ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಬಗ್ಗೆ. ಅಷ್ಟಕ್ಕೂ, ಈ ಚೇತನ್ ಆ ಸಮಾವೇಶದಲ್ಲಿ ಪಾಲ್ಗೊಳ್ಳುವ ಔಚಿತ್ಯವೇನಿತ್ತು ಎಂಬುದು ಈಗಲೂ ಯಾರಿಗೂ ತಿಳಿದಿಲ್ಲ. ಮೈ ಮೇಲೆ ದೇವರು ಬಂದ ಹಾಗೆ  ಮಾತನಾಡಿದ ಈ ವ್ಯಕ್ತಿ ಟೀಕಿಸುವ ಮಹಾ ಸಂತರ  ಪರಿಚಯವಾದರು ಇದೆಯಾ? ಸಮಾಜೋದ್ಧಾರಕ್ಕಾಗಿ ಶ್ರೀಗಳು ಮಾಡಿರುವ ತ್ಯಾಗದ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಈ ‘ಗಂಜಿ ಗಿರಾಕಿಗೆ’ ಜಾಲತಾಣಗಳಲ್ಲಿ ಈಗಾಗಲೇ ಜನರು ವಾಚಾಮಗೋಚರವಾಗಿ ಬಯ್ಯುತ್ತಿದ್ದಾರೆ.

ಸಿದ್ದಗಂಗಾ ಶ್ರೀಗಳಿಗೆ ಸಾಮಾಜಿಕ ಬದ್ಧತೆ ಇಲ್ಲವೆಂದು ನುಡಿದ ಈ ‘ನಟ ಶಿಖಾಮಣಿ’ ತನ್ನ ಭಾಷಣದುದ್ದಕ್ಕೋ ಮತ್ತು ನಂತರ ನಡೆದ ಡ್ಯಾಮೇಜ್ ಕಂಟ್ರೋಲ್ ನಲ್ಲೂ ಚಾನೆಲ್ ಗಳಿಗೆ ನೀಡಿದ ಸಂದರ್ಶನದಲ್ಲಿ ನಮ್ಮ ಸಿದ್ದರಾಮಯ್ಯ ನವರು ಹಾಗೆ ಮಾಡಿದ್ದಾರೆ, ಭಾಗ್ಯ ಗಳ ‘ಹರಿಕಾರ’, ದಲಿತೋದ್ದಾರಕ್ಕೆ, ಅಹಿಂದ ವರ್ಗಗಳಿಗೆ ನೂರಾರು ಭಾಗ್ಯಗಳನ್ನು ಕರುಣಿಸಿದ್ದಾರೆಂದು ಹೇಳುವ ‘ವಿಕೃತ’ ಚೇತನ ಗಮನಿಸಬೇಕಾದದ್ದು ಏನೆಂದರೆ ಪವಿತ್ರ ಸಿದ್ದಗಂಗಾ ಆಶ್ರಮದಲ್ಲಿ ಮುಖ್ಯ ಮಂತ್ರಿಗಳ ಜಾತಿಯವರೇ ಯಾದ ಕುರುಬ ಜಾತಿಗೆ ಸೇರಿದ 1138 ಕ್ಕೂ ಹೆಚ್ಚು ಮಕ್ಕಳಿಗೆ ಇಲ್ಲಿ ಉಚಿತ ಶಿಕ್ಷಣ ಮತ್ತು ಅನ್ನ ದಾಸೋಹ ನೀಡುತ್ತಿರುವುದು. ಕುರುಬ ಮಕ್ಕಳಲ್ಲಾಳದೇ ಅಗಸ, ದೋಬಿ, ಈಡಿಗ, ಮಾರಾಟ, ಕ್ರೈಸ್ತ, ಜೈನ ಮತ್ತು 68  ಕ್ಕೂ ಹೆಚ್ಚು ಮುಸಲ್ಮಾನ ಮಕ್ಕಳಿಗೆ ಊಟ, ವಸತಿ ಮತ್ತು ವಿದ್ಯೆಯನ್ನು ನೀಡುತ್ತಿದೆ ಸಿದ್ಧಗಂಗೆಯ ಪುಣ್ಯ ಕ್ಷೇತ್ರ.

ಹಣದಾಸೆಗೆ ಶ್ರೀ ಗಳ ವಿರುದ್ಧವೇ ಮಾತನಾಡುವ ನಿಮ್ಮಂತ ನೀಚರು ಸಿದ್ದಗಂಗಾ ಶ್ರೀಗಳ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಮೊದಲು ನೀವು ಪ್ರಶ್ನಿಸಿಕೊಳ್ಳಿ? ಕೊಡಗಿನಲ್ಲಿ ಆದಿ ವಾಸಿಗಳ ವಿರುದ್ಧ ಚಳುವಳಿಯಲ್ಲಿ ಭಾಗವಹಿಸಿದಾಗ ಮುಖ್ಯ ಮಂತ್ರಿಗಳನ್ನು ಟೀಕಿಸಿದ ತಾವು, ರಾತ್ರೋ ರಾತ್ರಿಗೆ ಮುಖ್ಯ ಮಂತ್ರಿಗಳು ಈ ರಾಜ್ಯದ ‘ಅಭಿವೃದ್ಧಿಯ ಹರಿಕಾರರು’ ಆಗುತ್ತಾರೆಯೇ?

‘ಅರಲು ಗದ್ದೆಯಲ್ಲಿ ನೆಟ್ಟ ಕಂಬದಂತೆ’ ನಿಮ್ಮ ಹೇಳಿಕೆಗಳು ಎತ್ತ ಬೇಕಾದರೂ ವಾಲುವುದಕ್ಕೆ ನೆನ್ನೆ ನೀವು ಶ್ರೀ ಗಳ ವಿರುದ್ಧ ಮಾತನಾಡಿದ್ದು ಎದ್ದು ತೋರಿಸುತ್ತದೆ.

ಚೇತನರೇ, ‘ಹಣ್ಣಿರುವ ಮರದಲ್ಲಿ ಕೋತಿ ಚೇಷ್ಟೆ’ ಅಂದ ಹಾಗೆ, ನೀವು ಸಮಾಜದಲ್ಲಿ ನಡೆಯುತ್ತಿರುವ ವಿವಾದಗಳನ್ನೇ ಬಳಸಕಿಕೊಂಡು ನಿಮ್ಮ ಸೆಲೆಬ್ರಿಟಿ ಸ್ಟೇಟಸ್ ನಿಂದ ಏನು ಬೇಕಾದರೂ ಮಾತನಾಡಿದರೆ ಅದನ್ನು ಕೇಳಿ ಕೂರುವದಕ್ಕೆ ಯಾರು ಸಿದ್ಧವಾಗಿಲ್ಲ.

ಶ್ರೀ ಸಿದ್ದಗಂಗಾ ಮಠದ ಸರ್ವಾಂಗೀಣ ಪ್ರಗತಿಗೆ ಪೂಜ್ಯರು ಕೈಗೊಂಡ ಕಾರ್ಯಾವು ಆದರಣೀಯವೂ, ಅನುಕರಣೀಯವೂ ಆಗಿದೆ. ತಮ್ಮ ಸತ್ಯಶುದ್ಧ ಕಾಯಕದಿಂದ, ನಿಷ್ಕಾಮ ಸೇವೆಯಿಂದ ವಿದ್ಯಾ ಸಂಸ್ಥೆಯೊಂದನ್ನು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಮಹಾನ್ ಮಾನವತಾವಾದಿ, ದಾರ್ಶನಿಕರು ಶ್ರೀಗಳು.

ಅತ್ಯಂತ ಪ್ರಾಮಾಣಿಕ, ದಕ್ಷ ಮತ್ತು ಕಲೆ, ಸಾಹಿತ್ಯ, ಅತೀವ ಆಸಕ್ತಿಯುಳ್ಳವರಾಗಿದ್ದ ನಿವೃತ್ತ ಐ.ಎ.ಎಸ್ ಡಾ. ಸಿ. ಸೋಮಶೇಖರ್-ರವರು ಶಿವಕುಮಾರ ಸ್ವಾಮೀಜಿ ಯವರ ಕುರಿತು ಹೇಗೆ ಬರೆಯುತ್ತಾರೆ:

“೧೨ನೆಯ ಶತಮಾನದ ಕಲ್ಯಾಣವನ್ನು ನಾವು ಕಂಡಿಲ್ಲ. ಆದರೆ ಇಂದಿನ ಸಿದ್ದಗಂಗಾ ಕ್ಷೇತ್ರವೇ ನಮಗೆ ಪವಿತ್ರ ಕಲ್ಯಾಣ. ನಾವು ಮಹಾನ್ ಮಾನವತಾವಾದಿ ಬಸವಣ್ಣನವರನ್ನು ಕಂಡಿಲ್ಲ. ಇಂದಿನ ಶತಾಯುಷಿ, ಪದ್ಮಭೂಷಣ, ಕರ್ನಾಟಕ ರತ್ನ ಶಿವಕುಮಾರ ಮಹಾಸ್ವಾಮಿಗಳೇ ನಾವು ಕಾಣುತ್ತಿರುವ ಅಂದಿನ ಇಂದಿನ ಬಸವಣ್ಣನವರು. ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಕಾಯಕ, ದಾಸೋಹ, ಜಾತ್ಯತೀತ ಪ್ರಜ್ಞೆ, ಸ್ತ್ರೀ ಸಮಾನತೆ, ಪರಿಸರ ಪ್ರೇಮ, ವೈಚಾರಿಕ ವಿವೇಕ, ಮಾನವ ಪ್ರೇಮ ಮುಂತಾದ ಮಾನವೀಯ ಮೌಲ್ಯಗಳನ್ನು ಅನುಷ್ಠಾನಕ್ಕೆ ತಂದಿರುವ ಒಂದು ಆಧ್ಯಾತ್ಮ ಪ್ರಯೋಗ ಶಾಲೆಯೇ ಶ್ರೀ ಸಿದ್ದಗಂಗಾ ಕ್ಷೇತ್ರ. ”

ದುಡ್ಡಿನಾಸೆಗೆ ಮಹಾನ್ ಮಾನವತಾವಾದಿಯನ್ನು ‘ಸಾಮಾಜಿಕ ಬದ್ಧತೆ’ ಇಲ್ಲದಿರುವ ಸ್ವಾಮೀಜಿ ಎಂದು ಟೀಕಿಸುವ ನಿಮಗೆ ಗೊತ್ತಿಲ್ಲದಿರುವ ವಿಷಯಗಳನ್ನು ತಿಳಿಹೇಳುತ್ತೇವೆ, ಕೇಳಿ: ಹಸಿದ ಹೊಟ್ಟೆಗಳಿಗೆ ಅನ್ನ; ಮನಸ್ಸು-ಹೃದಯಗಳಿಗೆ ಪ್ರೀತಿಯ ಸಿಂಚನ; ನಿಷ್ಕಾಮ ಮಾನವ ಸೇವೆಯ ಭಕ್ತಿಯ ದರ್ಶನ ಮತ್ತು ಅಕ್ಷರ ದೀಕ್ಷೆ. ಕನ್ನಡ ನಾಡಿನ ಪುಣ್ಯಕ್ಷೇತ್ರದ ಮಹಾನ್ ಮಾನವತಾವಾದಿಯನ್ನು ಪ್ರಸಕ್ತ ಪೀಳಿಗೆ ದರ್ಶಿಸುತ್ತಿರುವದೇ ಸೌಭಾಗ್ಯ !

ಶ್ರೀ-ಗಳ ಧ್ವನಿ ಕುಗ್ಗಿರಬಹುದು; ಧ್ವನಿ ತಗ್ಗಿರಬಹುದು ಆದರೆ ಅವರ ಜ್ಞಾನದ ಪಿಪಾಸೆ, ಸೇವಾತತ್ಪರತೆಗೆ  ಕೊನೆಯೇ ಇಲ್ಲ. ಮಠದಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕದ ಬಡ ಮತ್ತು ಅನಾಥ ಮಕ್ಕಳೇ ಇದ್ದಾರೆ. ಮಕ್ಕಳನ್ನು ಸ್ವಂತ ಕುಡಿಗಳಂತೆ ಸಾಕಿ, ಸಲುಹಿ ಅವರನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವ ಮಹತ್ಕಾರ್ಯ ಮಠದಲ್ಲಿ ನಡೆಯುತ್ತಿದೆ. 8  ಸಾವಿರ ಮಕ್ಕಳಿಗೆ ನಿತ್ಯವೂ ಅನ್ನ ದಾಸೋಹ ಮಾಡುವ ಮಠವು ನಿತ್ಯ ಬರುವ ಭಕ್ತರಿಗೂ ಊಟದ ಸೌಲಭ್ಯ ಮಾಡಿದೆ. ಒಂದು ಸರ್ಕಾರ ಮಾಡುತ್ತಿರುವ ಕೆಲಸವನ್ನು ಸ್ವಾಮೀಜಿ ಮಾಡುತಿದ್ದರೆ. ಸರ್ಕಾರಕ್ಕಿರಬೇಕಾದ ಸಾಮಾಜಿಕ ಕಾಳಜಿಯನ್ನು ಸ್ವಾಮೀಜಿ ತೋರುತ್ತಿದ್ದಾರೆ. ಇವೆಲ್ಲ ಸಾಮಾಜಿಕ ಬದ್ದತ್ತೆ ಅಲ್ಲದೆ ಇನ್ನೇನು ಸ್ವಾಮೀ?

ತಮ್ಮ ಬದುಕಿನುದ್ದಕ್ಕೂ ತಮ್ಮ ಅಪರಿಮಿತ ಜ್ಞಾನ, ಉಜ್ವಲವಾದ ವೈರಾಗ್ಯ, ಸಮನ್ವಿತವಾದ ನಿರ್ಮಲ ಕ್ರಿಯೆ, ಸಮಾಜದ ಸಕಲರನ್ನೂ ತಮ್ಮ ಸಾತ್ವಿಕ ಬದುಕಿನ ಕ್ರಮದ ಕಕ್ಷೆಗೆ ಆಕರ್ಷಿಸುವ ಗುಣ ಶ್ರೀಗಳದ್ದು. ಮುಕ್ತಿಗೆ ಜ್ಞಾನ ಕಾರಣವಾದರೂ ಜ್ಞಾನ ಉಡಾಯಿಸಲು ನಿಷ್ಕಾಮ, ನಿರಪೇಕ್ಷ  ಕರ್ಮದ ಜೊತೆಯಲ್ಲಿ ಭಕ್ತಿಯ ಮಹತ್ವವನ್ನು ಜಗತ್ತಿಗೆ ಸಾರಿದವರು.

ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆಕಾವಿಯುಡುಗೆಯನ್ನುಟ್ಟು ನಭವೇ ಕಿರಣ ಹತವೇ ಕಣ್ತೆರೆದಿದೆ ವೆಂಬ ಡಾ . ಜಿ.ಎಸ.ಶಿವರುದ್ರಪ್ಪ -ರವರ ಸಾಲುಗಳು ಸಿದ್ದಗಂಗಾ ಮಠದ ಮಹಾತ್ಮೆಯನ್ನು ಸಾರುತ್ತದೆ.

ಕೊನೆಯದಾಗಿ ಇಂಗ್ಲಿಷ್ ನ ತತ್ವಜ್ಞಾನಿ ಒಬ್ಬ ಹೇಳಿದಂತೆ: The higher we soar, the smaller we appear to those who cannot fly

ನಿಮ್ಮ ಅವಿವೇಕವನ್ನು ಜಗತ್ತಿಗೆ ಸಾರಬೇಡಿ. The World is still wise enough to differentiate…

Comments

comments