ಡಿ.ಕೆ.ಶಿ, ಈಗಲ್ಟಾನ್ ರೆಸಾರ್ಟ್ ಮೇಲೆ ‘ಐ’.ಟಿ ರೇಡ್

ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಇಂಧನ ಸಚಿವರಾದಂತ ಡಿ.ಕೆ.ಶಿವಕುಮಾರ್ -ರವರ ಸದಾಶಿವನಗರ ಮತ್ತು ಕನಕಪುರ ನಿವಾಸದ ಮೇಲೆ ಏಕಕಾಲಕ್ಕೆ ಐ.ಟಿ.ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದ ಹೊರವಲಯದಲ್ಲಿರುವ ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರ ಕೊಠಡಿಯ ಮೇಲೂ ಐ.ಟಿ.ಅಧಿಕಾರಿಗಳು ತಮ್ಮ ಸರ್ಚ್ ಆಪರೇಷನ್ ನಡೆಸಿದ್ದಾರೆ.

ರಾಜ್ಯ ಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಸುರಕ್ಷಿತವಾಗಿಡಲು ಈಗಲ್ ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿಸಲಾಗಿತ್ತು. ಅತಿಥಿಗಳ ಉಸ್ತುವಾರಿಯನ್ನು ‘ಸಂಘಟನಾ ಚತುರ’, ‘ತಂತ್ರಗಾರಿಕಾ ಪ್ರವೀಣ’ ಎಂದೇ ಬಿಂಬಿಸಲ್ಪಡುವ ಡಿ.ಕೆ.ಶಿವಕುಮಾರ್  ಮತ್ತು ಅವರ ಸಹೋದರ ಡಿ.ಕೆ.ಸುರೇಶ ರವರಿಗೆ ವಹಿಸಲಾಗಿತ್ತು.

ಹತ್ತು ಅಧಿಕಾರಿಗಳನ್ನೊಳಗೊಂಡ ಐ.ಟಿ. ತಂಡ ಮತ್ತು ಸಿ.ಆರ್.ಪಿ.ಫ್ ತಂಡ ಮುಂಜಾನೆಯೇ ಏಕಕಾಲಕ್ಕೆ ದಾಳಿಗಿಳಿರುವುದು ಮಾಧ್ಯಮಗಳು ವರದಿ ಮಾಡಿವೆ.

ಐ.ಟಿ. ದಾಳಿಯನ್ನು ಕಟುವಾಗಿ ವಿರೋಧಿಸಿರುವ ಗುಜರಾತಿನ ರಾಜ್ಯ ಸಭಾ ಅಭ್ಯರ್ಥಿ ಮತ್ತು ಸೋನಿಯಾ ಗಾಂಧಿ ಯವರ ಆಪ್ತ ಅಹ್ಮದ್ ಪಟೇಲ್ ‘ಬಿ.ಜೆ.ಪಿ ಪಕ್ಷ ಆದಾಯ ತೆರಿಗೆ ಇಲಾಖೆಯನ್ನು ‘ರಾಜಕೀಯ ಹಗೆತನ’ ಕ್ಕೆ ಉಪಯೋಗಿಸಿಟ್ಟಿರುವುದು ದುರದೃಷ್ಟಕರವೆಂದು ಟ್ವಿಟ್ಟರ್ ಮೂಲಕ ಹೇಳಿದ್ದಾರೆ.

ಅಹ್ಮದ್ ಪಟೇಲ್ ರವರ ವಾದವನ್ನು  ಅಲ್ಲಗೆಳೆದಿರುವ ಬಿ.ಜೆ.ಪಿ ಯಾ ವಕ್ತಾರ ಜಿ.ವಿ.ಎಲ್ ನರಸಿಂಹ ರಾವ್ -ರವರು

“ಕಾಂಗ್ರೆಸ್ ಪಕ್ಷ ತನಿಖಾ ತಂಡಗಳ ಕಾರ್ಯಾಚರಣೆಗಳನ್ನು ರಾಜಕೀಯ ಹಗೆತನ ವೆಂದು ಹೇಳುವುದು ಸರಿಯಲ್ಲ” ಈ ಸರ್ಚ್ ಆಪರೇಷನ್ ಬಗ್ಗೆ ನನಗೆ ಇನ್ನು ಮಾಹಿತಿ ಇಲ್ಲ, ಮಾಹಿತಿ ಬಂದೊಡನೆ ನಾನು ನಿಮ್ಮಲ್ಲಿ ಹಂಚಿಕೊಳ್ಳುವೆ ಎಂದು ಹೇಳಿದ್ದಾರೆ.

Comments

comments