ಮಂಗಳೂರು ಚಲೋ : ಬೈಕ್ ಸವಾರಿಗೆ ಹೊರಟ ಬಿಜೆಪಿಯ ಉದ್ದೇಶವೇನು?

ಸೆ.5 ರಿಂದ ಸೆ.7 ವರೆಗೆ ಬಿಜೆಪಿ ಯುವಮೋರ್ಚವು ಮಂಗಳೂರು ಚಲೋ (ಬೈಕ್ ್ಯಾಲಿ) ಹಮ್ಮಿಕೊಂಡಿದೆ. ವಿವಿಧ ಜಿಲ್ಲೆಗಳ ಯುವಕರು ತಮ್ಮ ತಮ್ಮ ಬೈಕ್ ಮೂಲಕ ಮಂಗಳೂರನ್ನು ತಲುಪಲಿದ್ದಾರೆ. ಬಿಜೆಪಿ  ್ಯಾಲಿಯನ್ನು ಈಗ ಯಾಕೆ ಹಮ್ಮಿಕೊಳ್ಳುತ್ತಿದೆ ಎಂದು ಕೇಳಲು ಹೋದರೆ ಬಿಜೆಪಿ ಹೇಳುವುದುಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.) ವನ್ನು ನಿಷೇಧಿಸುವಂತೆ ಒತ್ತಡ ಹೇರುವುದೇ ಇದರ ಉದ್ದೇಶ. ಆದರೆ ಬಿಜೆಪಿ ವಿರೋಧಿಗಳು ಎಂದಿನಂತೆಇದೊಂದು ಪೊಲಿಟಿಕಲ್ ಸ್ಟಂಟ್. ಮಂಗಳೂರು ಏರಿಯಾದಲ್ಲಿ ರಾಜಕೀಯ ಬೇರುಗಳನ್ನು ಗಟ್ಟಿ ಮಾಡಿಕೊಳ್ಳಲು ಇದೆಲ್ಲ ನಾಟಕಎಂಬ ಮಾತು ಹೇಳುತ್ತಿದ್ದಾರೆ. “ಅಮಿತ್ ಶಾ ಚಾಟಿ ಬೀಸಿದ ಮೇಲೆ ಎದ್ದು ಕೂತಿದ್ದಾರೆ. ತಾವು ನಿದ್ದೆಯಿಂದ ಎದ್ದಿದ್ದೇವೆ ಎಂಬುದನ್ನು ಸಾಬೀತುಪಡಿಸಲು  ್ಯಾಲಿಎಂದು ಬಿಜೆಪಿಯ ನಾಲ್ಕೂವರೆ ವರ್ಷದ ನಿದ್ರಾಸಕ್ತಿ ನೋಡಿ ಬೇಸರಗೊಂಡಿರುವ ನಿಷ್ಠಾವಂತ ಮತದಾರರು ಹೇಳುತ್ತಿದ್ದಾರೆ. ಹಾಗಾದರೆ ನಿಜಕ್ಕೂ ಬಿಜೆಪಿಮಂಗಳೂರು ಚಲೋನಡೆಸುತ್ತಿರುವ ಉದ್ದೇಶವೇನು? 2018ರಲ್ಲಿ ಕರ್ನಾಟಕದಲ್ಲಿ ಇರುವ ವಿಧಾನಸಭಾ ಚುನಾವಣೆಯೇಮಂಗಳೂರು ಚಲೋಯೋಜನೆಗೆ ಕಾರಣವಾಯಿತೇ? ಒಂದು ಕ್ಷಣಕ್ಕೆ ಹೌದೆನಿಸುತ್ತದಾದರೂ, ವಾಸ್ತವ ಸಂಗತಿಗಳು ನಿಜಕ್ಕೂ ನಮ್ಮನ್ನು ಯೋಚನೆಗೀಡು ಮಾಡುವಂತಿವೆ. ಬಿಜೆಪಿ ಹಮ್ಮಿಕೊಂಡಿರುವ ್ಯಾಲಿ ಕೇವಲ ಬಿಜೆಪಿ ಅಥವಾ ಅದರ ಅಂಗಸಂಸ್ಥೆ ಯುವಮೋರ್ಚಾಕ್ಕೆ ಸೀಮಿತಗೊಳ್ಳಬೇಕಾದ ್ಯಾಲಿಯೇ? ಅಥವಾ ಅದು ನಿಜವಾಗಿಯೂ ಒಂದಷ್ಟು ಗಂಭೀರ ಪ್ರಶ್ನೆಗಳನ್ನು ಎತ್ತಲಿದೆಯೇ? ಮಂಗಳೂರು ವಲಯದ ಜನ  ್ಯಾಲಿಯ ಮೂಲಕ ಅರಿತುಕೊಳ್ಳಬೇಕಾದ ಸಂಗತಿಗಳೇನು? ಇವನ್ನೆಲ್ಲ ನಾವು ರಾಜಕೀಯವನ್ನು ಬದಿಗಿಟ್ಟು ಚಿಂತಿಸಬೇಕಾಗಿದೆ

 ಕಳೆದ 4 ವರ್ಷಗಳಲ್ಲಿ ಕೊಲೆಯಾದವರು ಬರೋಬ್ಬರಿ 12 ಜನ

 ಒಂದು ಕ್ಷಣಕ್ಕೆ ನಂಬಲು ಆಶ್ಚರ್ಯವಾಗಬಹುದು. ಕಳೆದ ನಾಲ್ಕು ವರ್ಷದಲ್ಲಿ ಇಸ್ಲಾಮಿಕ್ ಮೂಲಭೂತವಾದಕ್ಕೆ ರಾಜ್ಯದಲ್ಲಿ ಬಲಿಯಾದ ಆರೆಸ್ಸೆಸ್, ಬಿಜೆಪಿ, ಭಜರಂಗದಳದ ಕಾರ್ಯಕರ್ತರು ಬರೋಬ್ಬರಿ 12. ಇದು ಸತ್ತವರ ಸಂಖ್ಯೆ. ಮಾರಕಾಸ್ತ್ರಗಳಿಂದ ದಾಳಿಗೊಳಗಾಗಿ ಆಸ್ಪತ್ರೆ ಸೇರಿದವರು ಅನೇಕರಿದ್ದಾರೆ. ಬಹುತೇಕ ಹತ್ಯೆಯಲ್ಲಿ, ಹತ್ಯೆಗಾಗಿ ನಡೆದ ದಾಳಿಗಳಲ್ಲಿ ಇಸ್ಲಾಮಿಕ್ ಮೂಲಭೂತವಾದ ಮತ್ತು ಪಿಐಎಫ್ ಕಾರ್ಯಕರ್ತರ ಪಾಲ್ಗೊಳ್ಳುವಿಕೆ ಇರುವುದು ಸಾಬೀತಾಗಿದೆ. ಪ್ರತಿಯೊಬ್ಬ ಹಿಂದು ಕಾರ್ಯಕರ್ತನ ಕೊಲೆಯಾದಾಗಲೂ ಹತ್ಯೆಯ ಕಾರಣವನ್ನು ತಿರುಚುವ ಪ್ರಯತ್ನಗಳಾದವು. ಉದಾಹರಣೆಗೆ ಶಿವಾಜಿನಗರದ ರುದ್ರೇಶ್ ಕೊಲೆ ಪ್ರಕರಣ. ರಿಯಲ್ ಎಸ್ಟೇಟ್ ವೈಷಮ್ಯವೇ ರುದ್ರೇಶ್ ಕೊಲೆಗೆ ಕಾರಣವಿರುವ ಸಂದೇಹವಿದೆ ಎಂದು ಕಾಂಗ್ರೆಸ್ ಸರ್ಕಾರ ತಿಳಿಸಿತ್ತು. ಆದರೆ ಕೊಲೆಯ ಹಿಂದೆ ಇಸ್ಲಾಮಿಕ್ ಮೂಲಭೂತವಾದದ ಛಾಯೆ ಕಂಡ ಕಾರಣ ರಾಷ್ಟ್ರೀಯ ತನಿಖಾ ದಳ (NIA) ಪ್ರಕರಣವನ್ನು ಕೈಗೆತ್ತಿಕೊಂಡಿತು. ತನಿಖೆಯ ವೇಳೆ ಐಂದು ಮಂದಿಯನ್ನು ಬಂಧಿಸಲಾಯಿತು 

ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿಸುವ ಹುನ್ನಾರ!

 ಇರ್ಫಾನ್ ಪಾಷಾ, ವಸೀಮ್ ಅಹಮದ್, ಮೊಹಮ್ಮದ್ ಸಾದಿಖ್, ಮೊಹ್ಮದ್ ಮುಜೀಮ್ ಉಲ್ಲ, ಆಸಿಮ್ ಶರೀಫ್ ಬಂಧಿತರು. ಇವರೆಲ್ಲರೂ PFI ಮತ್ತು SDPI ಸಂಘಟನೆಗಳ ಸದಸ್ಯರು. ಮಂಗಳೂರಿನ  ಹಿಂದು ಕಾರ್ಯಕರ್ತರ ಕೊಲೆಯಲ್ಲಿ ಭಾಗಿಯಾದವರೂ ಸಂಘಟನೆಯವರೇ. ಶಿವಾಜಿನಗರ ರುದ್ರೇಶ್ ಪ್ರಖರಣದ ತನಿಖೆ ನಡೆಸಿದ NIA ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತು. ರುದ್ರೇಶರನ್ನು ಕೊಲ್ಲಲು PFI ಮತ್ತು SDPI ಸದಸ್ಯರು ಕೊಟ್ಟ ಕಾರಣ ಆತಂಕಕಾರಿ. “ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿಸಲು ಮಾಡಲು ನಡೆಸಿದ ಜಿಹಾದ್ ಇದುಎಂದು ಆರೋಪಿಗಳು ಹೇಳಿಕೆ ಕೊಟ್ಟಿರುವುದಾಗಿ ಚಾರ್ಚ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

ಇದರೊಂದಿಗೆ ನೆನಪಿಡಬೇಕಾದ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಶರತ್ ಮಡಿವಾಳರ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಆರೋಪಿಗಳೂ PFI ಸಂಘಟನೆಯವರೇ..!

 ಎಲ್ಲಾ ಕೊಲೆಗಳಲ್ಲೂ ಸಾಮ್ಯತೆ

 ಹಿಂದು ಕಾರ್ಯಕರ್ತರ ಕೊಲೆಗಳನ್ನು ಸ್ಥೂಲವಾಗಿ ಗಮನಿಸಿದರೆ, ಎಲ್ಲಾ ಕೊಲೆಗಳೂ ಹೊಂಚು ಹಾಕಿ ಸಂಚಿನಿಂದ ಮಾಡಿದ್ದೆಂದು ತಿಳಿಯುತ್ತದೆ. ಹಿಂದು ಸಂಘಟನೆಯ ಯಾವುದಾದರೂ ಒಬ್ಬ ಕಾರ್ಯಕರ್ತನನ್ನು target ಮಾಡಿ, ಆತನ ಚಲನವಲನಗಳನ್ನು ಅಭ್ಯಯಿಸಿ, ವ್ಯವಸ್ಥಿತವಾಗಿ ಆಕ್ರಮಣ ಮಾಡಲಾಗುತ್ತದೆ. ಇಂತಹ ಆಕ್ರಮಣಗಳನ್ನು ನಡೆಸುವ ಮುನ್ನ ಸೂಕ್ತ ತರಬೇತಿಯನ್ನೂ ನೀಡಲಾಗುತ್ತದೆ. ರುದ್ರೇಶ್ ಕೊಲೆ ಪ್ರಕರಣದ ತನಿಖೆಯ ವೇಳೆ ಮಾಹಿತಿಗಳು ಬಹಿರಂಗಗೊಂಡಿವೆ.

ಹತ್ಯೆಗೀಡಾದ 12 ಮಂದಿ ಯಾರು

ಶರತ್ ಮಡಿವಾಳ (7-7-2017, ಬಂಟ್ವಾಳ)

ಕಿತಗಾನಹಳ್ಳಿ ವಾಸು (14-3-2017, ಬೆಂಗಳೂರು)

ಪ್ರಶಾಂತ್ ಪೂಜಾರಿ (9-10-2016, ಮೂಡಬಿದಿರೆ)

ಮಾಗಳಿ ರವಿ (5-11-2016, ಮೈಸೂರು)

ಕುಟ್ಟಪ್ಪ (10-11-2016, ಮಡಿಕೇರಿ)

ಶಿವಾಜಿನಗರ ರುದ್ರೇಶ್ (16-10-2016, ಬೆಂಗಳೂರು)

ಬಂಡಿ ರಮೇಶ್ (23-6-2017, ಬಳ್ಳಾರಿ)

ಪ್ರವೀಣ್ ಪೂಜಾರಿ (14-8-2016, ಕುಶಾಲನಗರ)

ಯೋಗೀಶ್ ಗೌಡರ್ (16-6-2016, ಧಾರವಾಡ)

ಹರೀಶ್ (1-6-2016, ಬೆಂಗಳೂರು)

ರಾಜು (13-3-2016, ಮೈಸೂರು)

ವಿಶ್ವನಾಥ್ (19-2-2015, ಶಿವಮೊಗ್ಗ)

PFI, KFD, NDF ಮತ್ತು SDPI ಸಂಘಟನೆಗಳನ್ನು ಏಕೆ ನಿಷೇಧಿಸಬೇಕು?

  ಸಂಘಟನೆಗಳನ್ನು ಏಕೆ ನಿಷೇಧಿಸಬೇಕು ಎಂಬ ಪ್ರಶ್ನೆಗೆ ಬಿಜೆಪಿ ಕೆಳಗಿನ ಉತ್ತರಗಳನ್ನು ನೀಡುತ್ತದೆ.

1) ಎಲ್ಲ ಸಂಘಟನೆಗಳು ಉಗ್ರಚಟುವಟಿಕೆಗಳಲ್ಲಿ ದೇಶದ್ರೋಹ ಕೃತ್ಯಗಳಲ್ಲಿ ನಿರತವಾಗಿರುವ SIMI ಸಂಘಟನೆಯ ಪ್ರತಿರೂಪವಾಗಿವೆ.

2) ನಿಷೇಧಕ್ಕೊಳಗಾದ SIMI ಸಂಘಟನೆಯು PFI ಎಂಬ ಹೆಸರಿನಲ್ಲಿ ಸಾಮಾಜಿಕ ಹಾಗೂ ರಾಜಕೀಯ ಮುಖವಾಡ ತೊಟ್ಟು ಮರುಸ್ಥಾಪಿತಾಗಿದೆ.

3) ಸಮಾಜದ ಶಾಂತಿಯನ್ನು ಕದಡುವ ಕರ್ನಾಟಕದ KFD, ಕೇರಳದ NDF ಮತ್ತು ತಮಿಳುನಾಡಿನ MNP ಎಂಬ ಮೂರು ಸಂಘಟನೆಗಳು PFI ಎಂಬ ಅಶಾಂತಿಯನ್ನು ಸೃಷ್ಟಿಸುವ ಸಂಘಟನೆಯನ್ನು ಹುಟ್ಟುಹಾಕಿವೆ.

4) 1993ರಲ್ಲಿ 19 ಸದಸ್ಯರನ್ನೊಳಗೊಂಡ NDF ಎಂಬ ಸಂಘಟನೆ ಸ್ಥಾಪಿತವಾಯಿತು. ಸಂಘಟನೆಯಲ್ಲಿ ಸಕ್ರಿಯ ಸದಸ್ಯನಾಗಿದ್ದ ಪಿ.ಕೋಯ, ನಿಷೇಧಕ್ಕೊಳಗಾದ SIMI ಸಂಘಟನೆಯ ಸ್ಥಾಪಕರಲ್ಲೊಬ್ಬ.

5) MNP ಸಂಘಟನೆಯ ಸ್ಥಾಪಕನಾದ ಎಂ.ಗುಲಾಮ್ ನಿಷೇಧಕ್ಕೊಳಗಾದ SIMI ಸಂಘಟನೆಯ ಪ್ರಾಂತೀಯ ಅಧ್ಯಕ್ಷನಾಗಿದ್ದವನು.

6) ಎಲ್ಲ ಸಂಘಟನೆಗಳು ಸಾಮಾಜಿಕ ಮತ್ತು ರಾಜಕೀಯ ಮುಖವಾಡಗಳನ್ನು ತೊಟ್ಟಿದ್ದರೂ ಕೂಡ ಇವುಗಳ ಮೂಲ ಉದ್ದೇಶ SIMI ಸಂಘಟನೆಗಳ ಉದ್ದೇಶವೇ ಆಗಿದೆ.

7) ಮರದ್ ಗಲಭೆಯಲ್ಲಿ PFI ಮತ್ತು NDF ಸಂಘಟನೆಯ 62 ಸದಸ್ಯರು 8 ಹಿಂದು ಮೀನುಗಾರರನ್ನು ಬರ್ಬರವಾಗಿ ಹತ್ಯೆಗೈದಿದ್ದರು. ಇವರಿಗೆ ನ್ಯಾಯಾಲಯವು ಅಜೀವ ಜೈಲುಶಿಕ್ಷೆ ಹೊರಡಿಸಿತ್ತು.

8) ಅದೇ ಮರದ್ ಗಲಭೆಯಲ್ಲಿ ISI ಮತ್ತು ಇರಾನಿನಿಂದ NDF ಮತ್ತು PFI ಸಂಘಟನೆಗಳಿಗೆ ಆರ್ಥಿಕ ನೆರವು ದೊರಕಿತ್ತೆಂದು ನ್ಯಾಯಮಂಡಳಿಯ ತನಿಖೆಯಿಂದ ದೃಢಪಟ್ಟಿದೆ.

 ಮಂಗಳೂರೇ ಯಾಕೆ?

ಬಿಜೆಪಿಯ ಯುವಮೋರ್ಚಾ ಮೇಲಿನ ಕಾರಣಗಳನ್ನು ಮುಂದಿಟ್ಟುಕೊಂಡು ಮಂಗಳೂರು ಚಲೋ ಎಂಬ ್ಯಾಲಿ ನಡೆಸುತ್ತಿದೆ. ಯಾಕೆ ಮಂಗಳೂರು? ರಾಜ್ಯದ ಬೇರಾವುದಾದರೂ ಭಾಗದಲ್ಲಿ ಹಮ್ಮಿಕೊಳ್ಳಬಹುದಿತ್ತಲ್ಲ? ಪ್ರಶ್ನೆಯೇನೋ ಸರಿ. ಆದರೆ ಇಂದು ಕರ್ನಾಟಕದ ಯಾವುದೇ ಭಾಗಕ್ಕಿಂತಲೂ ಮಂಗಳೂರು ಉಗ್ರರ ನೆಲೆಯಾಗುತ್ತ ಸಾಗಿದೆ ಎಂಬುದನ್ನು ನೆನಪಿಡಬೇಕು. ಕೇರಳದ ಕೆಂಪು ಭಯೋತ್ಪಾದನೆ ಕರ್ನಾಟಕವನ್ನು ತನ್ನ ಮುಂದಿನ ಕರ್ಮಭೂಮಿಯಾಗಿಸಿಕೊಳ್ಳಲು ಹಂಚಿಕೆ ಹಾಕುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕೇರಳದಂಥ ಪುಟ್ಟ ರಾಜ್ಯದಲ್ಲಿ ಕಳೆದ ಆರು ದಶಕಗಳಲ್ಲಿ ನಡೆದಿರುವ ರಾಜಕೀಯ ನರಮೇಧಗಳಿಗೆ ಲೆಕ್ಕವಿಲ್ಲ. ಜನರನ್ನು ಆರೆಸ್ಸೆಸ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಹುಚ್ಚುನಾಯಿಯನ್ನು ಅಟ್ಟಾಡಿಸಿ ಕೊಂದಂತೆ ಕೊಂದು ಚೆಲ್ಲಲಾಗಿದೆ. ಕೆಂಪು ಭಯೋತ್ಪಾದನೆ ಕರ್ನಾಟಕಕ್ಕೆ ಎಂಟ್ರಿ ಕೊಟ್ಟರೆ ಮಂಗಳೂರು ಕೇರಳದ ಮುಂದುವರಿದ  ಭಾಗವಾಗುತ್ತದೆ. ಅಲ್ಲಿನ ಮರ್ಡರ್ ಸರಣಿ ಇಲ್ಲಿ ಮುಂದುವರಿಯುತ್ತದೆ. ದೂರದಲ್ಲಿ ಬರ್ಬರರ ಸೇನೆ ಬರುತ್ತಿದೆ ಎನ್ನುವುದು ಕಾಣಿಸಿದಾಗ ಮೊದಲು ದಿಡ್ಡಿಬಾಗಿಲು ಹಾಕುವುದು ಬುದ್ಧಿವಂತಿಕೆ. ಕೆಂಪು ಉಗ್ರವಾದವನ್ನು ಅತ್ಯಂತ ಪರಿಣಾಮಕಾರಿಯಾಗಿ ತಡೆಯಬೇಕಾದರೆ ದಿಡ್ಡಿ ಬಾಗಿಲಿನಂತಿರುವ ಮಂಗಳೂರಲ್ಲಿ ಹಿಂಸಾಚಾರಕ್ಕೆ ಕಡಿವಾಣ ಹಾಕುವುದು ಅತ್ಯಂತ ತುರ್ತು ಅಗತ್ಯ. ರಾಜ್ಯದೊಳಗಿನ ಶಾಂತಿಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯಸರಕಾರ ಸಂಪೂರ್ಣ ವಿಫಲವಾಗಿರುವಾಗ ಅದರ ಜವಾಬ್ದಾರಿಯನ್ನು ನೆನಪಿಸುವುದು ವಿಪಕ್ಷದ ಕೆಲಸ ತಾನೇ?

Comments

comments