ಡಿ.ಕೆ.ಶಿ ಯ ‘ರಾಜಕೀಯ ಗುರು’ ಮತ್ತು ಜ್ಯೋತಿಷಿಗೆ ಅಂಟಿದ ‘ಶನಿ’ ಕಾಟ

ಡಿ.ಕೆ.ಶಿ – ರವರ ಮೇಲೆ ಐ.ಟಿ. ದಾಳಿಯ ಬೆನ್ನಲ್ಲೇ ಅವರ ರಾಜಕೀಯ ಗುರುಗಳು ಮತ್ತು ಜ್ಯೋತಿಷಿಗಳಾದ ಶ್ರೀ ದ್ವಾರಕಾನಾಥ್ ರವರ ನಿವಾಸದ ಮೇಲು ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅತ್ಯಂತ ಪ್ರಭಾವೀ ರಾಜಕೀಯ ನಾಯಕರುಗಳು  ಭೇಟಿ ನೀಡುವ ದ್ವಾರಕಾನಾಥ್ ರವರ ಆರ್.ಟಿ.ನಗರ ಮನೆಗೆ ಡಿ.ಕೆ.ಶಿ ಭೇಟಿ ನೀಡುತಿದ್ದಿದ್ದು ಈಗ ಧೃಡಪಟ್ಟಿದೆ. 
 
 ದೇಶದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಡಿ.ಕೆ.ಶಿವಕುಮಾರ್ ರವರು ಪದೇ ಪದೇ ಭೇಟಿ ನೀಡುತ್ತಿದ್ದ ಆ ಜ್ಯೋತಿಷಿ ಯಾರು? 
 
ರಾಜ್ಯದಲ್ಲೇ ಅತ್ಯಂತ ಪ್ರಭಾವೀ ಗುರೂಜಿ – ಗಳಾದ ಇವರ ಹೆಸರು ದ್ವಾರಕಾನಾಥ್ ಅಂತ. ಮಾಜಿ ಮುಖ್ಯ ಮಂತ್ರಿಗಳಾದ ದೇವರಾಜ್ ಅರಸು, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂದೆ, ಐ.ಟಿ ದಾಳಿಯ ಕೇಂದ್ರ ಬಿಂದುವಾಗಿದ್ದ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್, ಮಾಜಿ ವಿದೇಶಾಂಗ ಸಚಿವ ನಟ್ವರ್   ಸಿಂಗ್, ಪಂಜಾಬ್ ಮುಖ್ಯ ಮಂತ್ರಿ ಅಮರಿಂದರ್ ಸಿಂಗ್, ಉದ್ಯಮಿ ಅನಿಲ್ ಅಂಬಾನಿ ಮತ್ತು ಬಾಲಿವುಡ್ ನಟ-ನಟಿಯರೂ ಇವರ ಶಿಷ್ಯರು. ಅಷ್ಟೇ ಅಲ್ಲದೆ, ಆಂಧ್ರ ಪ್ರದೇಶದ ಮಾಜಿ ಸಿ.ಎಂ. ವೈ.ಎಸ್.ಆರ್, ವಿ.ಬಿ.ರೆಡ್ಡಿ, ಇತ್ತೀಚೆಗಷ್ಟೇ ನಿಧನರಾದ ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳಾದ ದಿವಂಗತ ಧರಮ್ ಸಿಂಗ್, ಎಸ್.ಎಂ.ಕೃಷ್ಣ, ಬಿ.ಕೆ.ಚಂದ್ರಶೇಖರ್ ಮತ್ತು ನಫೀಜ್ ಫಝಲ್ ರವರಿಗೂ ಇವರೇ ಜ್ಯೋತಿಷ್ಯ ಹೇಳುತ್ತಿದ್ದರು. 
 
 
ಅಂದ ಹಾಗೆ, ದ್ವಾರಕಾನಾಥ್ – ರವರ ತಂದೆ ಬೆಳ್ಳೂರು ಶಂಕರ ನಾರಾಯಣರು ಪ್ರಖ್ಯಾತ ಜ್ಯೋತಿಷಿಗಳಾಗಿದ್ದರು. ಇವರು ಎಷ್ಟು ಪ್ರಭಾವಿಯಾಗಿದ್ದರೆಂದರೆ ಚಾಮರಾಜಪೇಟೆಯಲ್ಲಿ ಇವರ ತಂದೆಯವರು ವಾಸವಿದ್ದ ಮನೆಯ ರಸ್ತೆಗೆ ‘ಬಿ.ಎಸ್.ಶಂಕರನಾರಾಯಣ ರಸ್ತೆ’ ಎಂದು ನಾಮಕರಣ ಮಾಡಿಸಿದ್ದರು. ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ದಿವಂಗತ ಧರಮ್ ಸಿಂಗ್ ರವರು, ವಿಲಾಸ್ ರಾವ್ ದೇಶಮುಖ್, ಸುಶೀಲ್ ಕುಮಾರ್ ಶಿಂಧೆ, ನಟವರ್ ಸಿಂಗ್ ಭಾಗವಹಿಸಿದ್ರು. 
ದ್ವಾರಕಾನಾಥ್ – ರವರ ಪುತ್ರ ಮತ್ತು ಪುತ್ರಿ ಇಬ್ಬರೂ ವೈದ್ಯರಾಗಿದ್ದು; ಇಬ್ಬರೂ ವೈದ್ಯರನ್ನೇ ಮದುವೆಯಾಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಇವರ ಮಕ್ಕಳ ಒಡೆತನದ ಆಸ್ಪತ್ರೆಯೊಂದು ಕೋರಮಂಗಲದಲ್ಲಿ ಪ್ರಾರಂಭವಾಗಲಿದೆ. 
 
ಯಾರು ಈ ದ್ವಾರಕಾನಾಥ್ ಗುರೂಜಿ?
ಕರ್ನಾಟಕ ಕರ ಕುಶಲ ಅಭಿವೃದ್ಧಿ ನಿಗಮದಲ್ಲಿ ಗುಮಾಸ್ತರಾಗಿದ್ದ ದ್ವಾರಕಾನಾಥ್ ಗುರೂಜಿ ಯವರು ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಅವ್ಯವಹಾರ ಆರೋಪದಲ್ಲಿ ಈಗಿನ ಎಚ್.ಕೆ.ಪಾಟೀಲ್ ನ ತಂದೆಯಾಗಿರುವ ಕೆ.ಚ್.ಪಾಟೀಲ್ ರವರು ‘ಪವರ್’ ಮಿನಿಸ್ಟರ್ ನ ಆಪ್ತರಾದ ದ್ವಾರಕಾನಾಥರನ್ನು ಅಮಾನತ್ತಿನಲ್ಲಿಟ್ಟಿದ್ದರು. ಕೋರ್ಟ್ ನಲ್ಲಿ ಪ್ರಕರಣ ಖುಲಾಸೆಗೊಂಡ ನಂತರ ತನ್ನ ಸ್ಥಾನಕ್ಕೆ ದ್ವಾರಕಾನಾಥರು ರಾಜೀನಾಮೆ ನೀಡಿದ್ದರು. ರಾಜೀನಾಮೆಯ ನಂತರದ ದಿನಗಳಲ್ಲಿ ‘ಗುರುಗಳು’ ಶೃಂಗೇರಿ ಮಠಕ್ಕೆ ಆಪ್ತರಾದರು. ಹಿಂದುಳಿದ ವರ್ಗಗಳ ‘ಹರಿಕಾರ’ ಮಾಜಿ ಸಿ.ಎಂ ದೇವರಾಜ ಅರಸು -ರವರಿಗೆ ಆಪ್ತರಾದ ದ್ವಾರಕಾನಾಥರು; ಅರಸು ಅವರ ಮೂಲಕ ಇಂದಿರಾ ಗಾಂಧಿ ಯವರಿಗೆ  ಪರಿಚಿತರಾದರು. ತುರ್ತು  ಪರಿಸ್ಥಿತಿಯ ನಂತರ ರಾಜಕೀಯ ಮರುಜೀವ ನೀಡಿದ್ದ ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದರು. ಅವರು ನುಡಿದಂತೆ ಇಂದಿರಾ ಗಾಂಧಿ ಚಿಕ್ಕಮಗಳೂರಿನ ಕ್ಷೇತ್ರದಿಂದ ಜಯಭೇರಿ ಭಾರಿಸಿ ರಾಜಕೀಯ ಮರುಜೀವನ ಪಡೆಯುವಲ್ಲಿ ಯಶಸ್ವಿಯಾದರು. 
 
ಎಸ್.ಜೆ.ಆರ್.ಸಿ ಕಾಲೇಜಿನಲ್ಲಿ ಡಿ.ಕೆ.ಶಿ – ರವರಿಗೆ ಪರಿಚಿತರಾದ ದ್ವಾರಕಾನಾಥ್ ಗುರೂಜಿ
 
ಎಸ್.ಜೆ.ಆರ್.ಸಿ ಕಾಲೇಜಿನಲ್ಲಿ ಡಿ.ಕೆ.ಶಿ – ರವರು ವಿದ್ಯಾರ್ಥಿ ನಾಯಕರಾಗಿದ್ದಾಗ ದ್ವಾರಕಾನಾಥ್ ಗುರೂಜಿ-ಯವರ ಪರಿಚಯವಾಯಿತು.  ದ್ವಾರಕಾನಾಥರ ಮೂಲಕ ಅಂದಕಾಲತ್ತಿಲ್ ಸಿ.ಎಂ ಅರಸು ರವರ ನಂಟು ಸಾಧಿಸಿದರು ಮತ್ತು ತಮ್ಮ 25 ನೇ ವಯಸ್ಸಿನಲ್ಲೇ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಪಡೆಯುವುದರಲ್ಲಿ ಯಶಸ್ವಿಯಾದರು. ‘ಮಣ್ಣಿನ ಮಗ’ ದೇವೆ ಗೌಡರ ವಿರುದ್ಧ ಸ್ಪರ್ದಿಸಿದ್ದ ಡಿ.ಕೆ.ಶಿ ಪರಾಭವಗೊಂಡರೂ; ನಂತರದ ಉಪ ಚುನಾವಣೆಯಲ್ಲಿ ಗೆಲುವು ಕಂಡರು. ತಮ್ಮ ಗುರುಗಳ ಪ್ರಭಾವದೊಂದಿಗೆ ಮೊದಲ ಬಾರಿ ಶಾಸಕರಾದರೂ; ತಮ್ಮ ಗುರುಗಳ ‘ಕೃಪಾಕಟಾಕ್ಷದಿಂದ’ ಬಂಗಾರಪ್ಪನವರ ಮಂತ್ರಿ ಮಂಡಲದಲ್ಲಿ ಬಂಧಿಖಾನೆ ಖಾತೆ ಪಡೆಯುವಲ್ಲಿ ಯಶಸ್ವಿಯಾದರು. ವಿಪರ್ಯಾಸವೇನೆಂದರೆ, ಅಂದು ಬಂಧಿಖಾನೆ ಸಚಿವರನ್ನಾಗಿ ಮಾಡಿಸಿದ ಗುರು-ಶಿಷ್ಯ ರಿಬ್ಬರೂ ಕೂಡ, ಅದೇ ಬಂಧಿ ಖಾನೆಗೆ  ಅತಿಥಿಗಳಾಗುವ ಸಮಯ ಹತ್ತಿರ ಬರುತ್ತಿದೆ.
 
ಗುರುಗಳಿಗೂ ಬಿಡಲಿಲ್ಲ ‘ಶನಿ’ ಕಾಟ 
 
ಅಂದ ಹಾಗೆ ಮೋದಿ ಜಯಭೇರಿ ಬಾರಿಸಿ ಪ್ರಧಾನಿಯಾಗುವುದಲ್ಲದೆ; ಕಾಂಗ್ರೆಸ್ ಹೀನಾಯ ಸೋಲು ಖಚಿತ ಎಂದು ನುಡಿದ ದ್ವಾರಕಾನಾಥರ ನಿವಾಸವನ್ನು ಇದೆ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆಯವರು ‘ಸರ್ಚ್’ ಮಾಡಿದ್ದಾರೆ. 
ಘಟಾನುಘಟಿ ರಾಜಕಾರಣಿಗಳು, ಚಿತ್ರ ನಟ, ನಟಿಯರ ಭವಿಷ್ಯ ನುಡಿಯುತ್ತಿದ್ದ ದ್ವಾರಕಾನಾಥ್ ಗುರುಗಳಿಗೆ ‘ಶನಿ’ ಕಾಟ ಶುರುವಾಗಿರುವುದಂತೂ ಖಚಿತ. 

Comments

comments