ಶವದ ಎದೆ ಮೇಲೆ ಕೂತು ರಾಜಕೀಯ ಲಾಭಗಳನ್ನೆತ್ತುವ ತಲೆಹಿಡುಕರಿಗೆ ಮೋದಿಯ ಎದೆ ಮೇಲೆ ಕೂತು ನ್ಯಾಯ ಕೇಳುವ ಆಸೆಯಂತೆ!

ಗೌರಿ ಸತ್ತ ಮೂರನೇ ದಿನಕ್ಕೆ ಬೆಂಗಳೂರಿನ ಪ್ರಗತಿಪರ ಜೀವಪರ ತಳಸ್ಪರ್ಶಿ ಚಿಂತನೆಯ ಸಾಕ್ಷಿಪ್ರಜ್ಞೆಗಳೆಲ್ಲ ಸಭೆ ಸೇರಿದರು. ಇವರನ್ನು ಜನಸಾಮಾನ್ಯರ ಭಾಷೆಯಲ್ಲಿ ಗಂಜಿಗಿರಾಕಿಗಳು ಎನ್ನುತ್ತಾರೆ. ಸದಾ ಕಾಂಗ್ರೆಸ್ ಸರಕಾರಕ್ಕೆ ಬಕೆಟ್ ಹಿಡಿಯುವುದು; ಕಾಂಗ್ರೆಸ್ ಸರಕಾರದ ಎಲ್ಲ ಅಪಸವ್ಯಗಳನ್ನೂ ಎಲ್ಲ ಉಪದ್ವ್ಯಾಪಗಳನ್ನೂ ಕಮಕ್ ಕಿಮಕ್ ಎನ್ನದೆ ಸಹಿಸಿಕೊಳ್ಳುವುದು; ಆ ಪಕ್ಷವನ್ನು ಯಾವ ಅತಿಗಾದರೂ ಹೋಗಿ ಸಮರ್ಥಿಸಿಕೊಳ್ಳುವುದು ಈ ಗ್ಯಾಂಗ್‍ನ ಕಾರ್ಯರೂಪ. ಅದಕ್ಕೆ ತಕ್ಕಂತೆ ಕಾಂಗ್ರೆಸ್ ಸರಕಾರ ಕೂಡ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ವರ್ಷವರ್ಷ ತಪ್ಪದೆ ಅವರಿಗೆಲ್ಲ ಒಂದಿಲ್ಲೊಂದು ಪ್ರಶಸ್ತಿ ಕೊಟ್ಟು ಹಾರತುರಾಯಿ ಹಾಕುತ್ತದೆ. ರಾಜ್ಯದ ವಿವಿಧ ಸಂಘ ಸಂಸ್ಥೆಗಳಲ್ಲಿ ಅವರನ್ನು ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹುದ್ದೆಯಲ್ಲಿ ಕೂರಿಸುತ್ತದೆ. ಪೊಲೀಸ್ ಕೇಸ್‍ಗಳಾದಾಗ ಅವರನ್ನು ರಕ್ಷಿಸುತ್ತದೆ. ಬಿಜೆಪಿ ಅಥವಾ ಸಂಘ ಪರಿವಾರದ ವಿರುದ್ಧ ಅವರು ಏನೇ ಮಾತಾಡುವುದಕ್ಕೂ ಸಂಪೂರ್ಣ ಸ್ವಾತಂತ್ರ್ಯ, ಜೊತೆಗೆ ರಕ್ಷಣೆ ಕೊಡುತ್ತದೆ. ಒಟ್ಟಾರೆ ಈ ಚಿಂತಕರು ತಮ್ಮ ಬರವಣಿಗೆ ಮತ್ತು ಮಾತಿನ ಮೂಲಕ ಸಮಾಜದಲ್ಲಿ ಆದಷ್ಟು ಬಿಜೆಪಿ ವಿರುದ್ಧ ಕೆಂಡ ಕಾರುತ್ತಿರಬೇಕು, ಅದಕ್ಕೆ ಬೇಕಾದ ವೇದಿಕೆ ಸಿದ್ಧಪಡಿಸಿಕೊಡುವುದು ತನ್ನ ಜವಾಬ್ದಾರಿ ಎಂಬುದು ಕಾಂಗ್ರೆಸ್‍ನ ಚಿಂತನೆ. ಅಂಥ ಭಟ್ಟಂಗಿ ಅಲಿಯಾಸ್ ಗಂಜಿಗಿರಾಕಿ ಅಲಿಯಾಸ್ ಸಾಕ್ಷಿಪ್ರಜ್ಞೆಗಳು ಮೊನ್ನೆ ಗೌರಿ ಲಂಕೇಶ್ ಸತ್ತ ಮೂರನೇ ದಿನಕ್ಕೆಲ್ಲ ಸಮಾವೇಶಗೊಂಡಿದ್ದರು. ಸಮಾವೇಶದ ಮುಖ್ಯ ಅಜೆಂಡಾ ಏನು? ಗೌರಿ ಲಂಕೇಶ್ ಅವರ ಹತ್ಯೆ ಮಾಡಿದವರ ಶೀಘ್ರ ಬಂಧನ ಆಗಬೇಕು ಎಂದು ಹಕ್ಕೊತ್ತಾಯ ಮಾಡುವುದು. ಹತ್ಯೆಯ ರಹಸ್ಯ ಭೇದಿಸಬೇಕಾದವರು ಪೊಲೀಸರು. ಆದರೆ ಸಮಾವೇಶಕ್ಕೆ ಭದ್ರತೆ ಕೊಡಲೆಂದು ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಅಂದರೆ ತನಿಖೆಯ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಾಗಿದ್ದ ಹಲವಾರು ಪೊಲೀಸರನ್ನು ಇಲ್ಲಿ ಅನಗತ್ಯ ಸಮಾವೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲೆಂದು ನಿಯೋಜಿಸಿ ಅವರ ಮಾನವಗಂಟೆಗಳನ್ನು ಕೊಲ್ಲಲಾಯಿತು. ಮತ್ತು ಅದೇ ಸಮಾವೇಶದಲ್ಲಿ, ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿಲ್ಲ; ಅಥವಾ ಅವರು ಕೆಲಸ ಮಾಡುವಂತೆ ಉಳಿದವರು ಬಿಡುತ್ತಿಲ್ಲ; ಅದೆಲ್ಲ ಏನೇ ಅಡೆತಡೆ ಇದ್ದರೂ ಪೊಲೀಸರು ಅವೆಲ್ಲವನ್ನು ಮೀರಿಬಂದು ಕೊಲೆಗಾರರನ್ನು ಹಿಡಿಯಲೇಬೇಕು ಎಂದು ಹಕ್ಕೊತ್ತಾಯ ಮಾಡಲಾಯಿತು! ಇದಕ್ಕಿಂತ ಐರನಿ ಬೇಕೆ?

ಮಳೆಮೋಡಗಳು ಕಾಣಿಸಿಕೊಂಡೊಡನೆ ಊರೆಲ್ಲ ವಟರ್ ವಟರ್ ಎನ್ನುತ್ತ ಕುಪ್ಪಳಿಸುವ ಕಪ್ಪೆಗಳಂತೆ ಪ್ರಗತಿಪರರ ಗ್ಯಾಂಗಿನಲ್ಲಿ ಒಂದು ಹೆಣ ಬಿದ್ದರೆ ಸಾಕು, ಪ್ರಗತಿಪರರ ಇಡೀ ತಂಡವೇ ಮೈ ಕೊಡವಿ ಎದ್ದುನಿಲ್ಲುತ್ತದೆ. ಗೌರಿ ಸತ್ತು ಅರ್ಧ ತಾಸೂ ಆಗಿರಲಿಲ್ಲ, ಪ್ರಗತಿಪರರು ಬ್ಯಾನರ್ ತಯಾರು ಮಾಡಿ ಟೌನ್‍ಹಾಲ್ ಎದುರು ಜಮಾಯಿಸಿ ಘೋಷಣೆ ಕೂಗಲು ಪ್ರಾರಂಭಿಸಿಯಾಗಿತ್ತು! ಗೌರಿಯನ್ನು ಜೀವನದಲ್ಲಿ ಒಮ್ಮೆಯೂ ನೋಡದ, ಮಾತಾಡಿಸದ, ಆಕೆಯ ಇಂಗ್ಲೀಷ್ ಬರಹಗಳನ್ನು ಕೂಡ ನೋಡಿರದೆ ಇದ್ದ ಬರ್ಖಾ ದತ್, ರಾಜದೀಪ್ ಸರದೇಸಾಯಿ, ಸಾಗರಿಕಾ ಘೋಷ್, ಶೇಖರ್ ಗುಪ್ತ, ವೀರ್ ಸಾಂಘ್ವಿ ಮೊದಲಾದವರೆಲ್ಲ ಮೆಷಿನ್ ಗನ್ ಹಿಡಿದು ಫೈರ್ ಮಾಡುತ್ತಿದ್ದವರಂತೆ ಪುಂಖಾನುಪುಂಖವಾಗಿ ಟ್ವೀಟ್ ಮಾಡಲು ಕೂತುಬಿಟ್ಟಿದ್ದರು. ಗೌರಿ, ಹಿಂದೂ ಮೂಲಭೂತವಾದಕ್ಕೆ ತಕ್ಕ ಉತ್ತರ ಕೊಟ್ಟ ದಿಟ್ಟೆ, ಬಿಜೆಪಿ ಸರಕಾರಗಳನ್ನು ಪತರಗುಟ್ಟಿಸಿದ ಧೀಮಂತೆ, ಪ್ರಧಾನಿ ನರೇಂದ್ರ ಮೋದಿಯವರ ನಿದ್ದೆಗೆಡಿಸಿದ್ದ ಪತ್ರಕರ್ತೆ….! ಅಬ್ಬಬ್ಬಾ ಆ ಟ್ವೀಟ್‍ಗಳಲ್ಲಿದ್ದ ಹಾಸ್ಯರಸದ ಎದುರು ನಯಾಗಾರ ಜಲಪಾತವೂ ಸಪ್ಪೆ! ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಘಂಡಿ ಅಂತೂ “ಗೌರಿ ನನ್ನ ಹೃದಯದಲ್ಲಿ ನೆಲೆಸಿದ್ದಾರೆ” ಎಂದುಬಿಟ್ಟರು! ಬಹುಶಃ ಅದಕ್ಕಿಂತ ಭಾವನಾತ್ಮಕವಾಗಿ ಯಾರನ್ನಾದರೂ ಫೂಲ್ ಮಾಡುವುದು ಸಾಧ್ಯವೇ ಇಲ್ಲವೇನೋ! ದೇಶವನ್ನು ಎಪ್ಪತ್ತು ವರ್ಷಗಳಿಂದ ಫೂಲ್ ಮಾಡುತ್ತ ಬಂದವರಿಗೆ ಸತ್ತವರ ಹೆಸರಿನಲ್ಲಿ ಜನರನ್ನು ಫೂಲ್ ಮಾಡಲು ನಾರ್ವೇ ಅಥವಾ ಥೈಲ್ಯಾಂಡಿನ ಕೋಚಿಂಗ್ ಬೇಕಾಗಿಲ್ಲ ತಾನೆ! ಟ್ವಿಟ್ಟರ್‍ನಲ್ಲಿ ದೇಶದ ಇಡೀ ಗಂಜಿಪಡೆ ಜೋರಾಗಿ ಗ್ಲಿಸರಿನ್ ಹಾಕಿಕೊಂಡು ಕೊಳಗಗಟ್ಟಲೆ ಕಣ್ಣೀರು ಹರಿಸುವುದಕ್ಕೆ ಕೂತಿತ್ತಷ್ಟೇ, ಅಷ್ಟರಲ್ಲಿ ಟಿವಿ ಸುದ್ದಿವಾಹಿನಿಗಳು ಗೌರಿಯ ಕೊಲೆಯನ್ನು ಈ ಶತಮಾನದ ದುರಂತ ಎಂದು ಬಣ್ಣಿಸತೊಡಗಿದವು! ಪ್ರಗತಿಪರ ಗಂಜಿಗಿರಾಕಿಗಳು ಹುಟ್ಟಿಸಿದ ಹಿಸ್ಟೀರಿಯಾ ಯಾವ ಮಟ್ಟದಲ್ಲಿತ್ತೆಂದರೆ ಮರುದಿನವೇ ಗೌರಿ ಬಿಬಿಸಿಯ ಪುಟಗಳಲ್ಲಿ ಕಾಣಿಸಿಕೊಂಡರು. ಥೈಲ್ಯಾಂಡಿನಲ್ಲಿ ಒಂದಷ್ಟು ಯುವಕರು ಗೌರಿಗಾಗಿ ಕಂಬನಿ ಮಿಡಿದಿದ್ದಾರೆಂಬ ಫೋಟೋ ಕೂಡ ಜಾಲತಾಣದಲ್ಲಿ ಬಂದದ್ದಾಯಿತು. ಒಟ್ಟಲ್ಲಿ ಒಂದು ಸಾವನ್ನು ಅದೆಷ್ಟು ಪ್ರಚಾರಕೊಟ್ಟು ಸಂಭ್ರಮಿಸಬೇಕಿತ್ತೋ ಅದಷ್ಟನ್ನೂ ಪ್ರಗತಿಪರ ಚಿಂತಕರು ಮಾಡಿದ್ದಾಯಿತು.

ಗೌರಿ ಅಂತಲ್ಲ, ಯಾರ ಕೊಲೆಯೂ ಅನಪೇಕ್ಷಿತ. ಈ ಜಗತ್ತಿನಲ್ಲಿ ಇನ್ನೊಬ್ಬರ ಗುಂಡು, ಚೂರಿ, ಬಾಂಬುಗಳಿಗೆ ಸಾಯುವಷ್ಟು ಯಾರೂ ಕೆಟ್ಟವರಲ್ಲ. ಹಾಗೆಯೇ ಇನ್ನೊಬ್ಬರ ಜೀವ ತೆಗೆಯುವ ಹಕ್ಕು ಕೂಡ ಯಾರಿಗೂ ಇಲ್ಲ. ಈ ಮಾತುಗಳನ್ನು ನೆನಪಲ್ಲಿ ಇಟ್ಟುಕೊಂಡೇ ಇನ್ನೊಂದು ಮಾತನ್ನೂ ಹೇಳಬೇಕಾಗಿದೆ – ಒಂದು ಹೆಣವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಎತ್ತುವ ಸ್ವಾತಂತ್ರ್ಯವನ್ನು ಕೂಡ ಯಾರೂ ಹುಟ್ಟುತ್ತ ಪಡೆದುಬಂದಿಲ್ಲ. ಒಬ್ಬನ ಜೀವ ತೆಗೆಯುವುದು ಹೇಗೆ ಕ್ರೌರ್ಯವೋ ಅಮಾನವೀಯವೋ ಹಾಗೆಯೇ ಸತ್ತವರ ಹೆಸರಲ್ಲಿ ರಾಜಕೀಯದ ಬೇಳೆಗಳನ್ನು ಬೇಯಿಸಿಕೊಳ್ಳುವುದು ಕೂಡ ಅಷ್ಟೇ ನಾಚಿಕೆಗೇಡಿನ ಸಂಗತಿ. ಗೌರಿ ಸತ್ತಾಗ ಇಡೀ ಪ್ರಗತಿಪರ ಬ್ರಿಗೇಡ್ ಮಾಡಿದ್ದೇನು? ಆಕೆಯ ಹೆಸರಲ್ಲಿ ತಮ್ಮ ತಮ್ಮ ಪ್ರಚಾರ ಮಾಡಿಕೊಂಡದ್ದು ಅಷ್ಟೇ! ಆಕೆ ಸತ್ತಾಗ ಕೆಲವರು ಉದ್ದುದ್ದ ಕವಿತೆಗಳನ್ನು ಬರೆದುಕೊಂಡರು. ಅದೇ ವ್ಯಕ್ತಿಗಳು ಆಕೆ ಸತ್ತ ದಿನ ರಾತ್ರಿ ಯಾವುದೋ ಪಬ್ಬಿನ ಮಬ್ಬು ಬೆಳಕಲ್ಲಿ ಬರ್ಫ ಕರಗಿಸುತ್ತಿದ್ದರು. ಅತ್ತ ಗೌರಿಯ ಮನೆಯ ಏಕೈಕ ಗಂಡು ಇಂದ್ರಜಿತ್ ಲಂಕೇಶ್ ಶವಸಂಸ್ಕಾರದ ಕುರಿತು ತಲೆಕೆಡಿಸಿಕೊಂಡು ಓಡಾಡುತ್ತಿದ್ದರೆ ಇತ್ತ ಒಂದಷ್ಟು ಜನ ಆಕೆಯ ಸಾವನ್ನು ರಾಜಕೀಯವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರು. ಗೌರಿ ಹೆಸರಲ್ಲಿ ಒಂದು ಸಮಾವೇಶ ಮಾಡೋಣ, ಆಕೆಯ ಹೆಸರಲ್ಲಿ ಒಂದು ಫೇಸ್‍ಬುಕ್ ಪೇಜ್ ಮಾಡೋಣ, ಗೌರಿ ಸಂತಾಪ ಅಂತ ನಾಲ್ಕು ವಾಟ್ಸಾಪ್ ಗ್ರೂಪ್ ಮಾಡಿದ್ದೇವೆ ಎನ್ನುವ ವಿವರಗಳನ್ನು ಪತ್ರಿಕೆಗಳಿಗೆ ಕೊಟ್ಟಾಯಿತೇ ಇಲ್ಲವೇ – ಮುಂತಾದ ಚರ್ಚೆಗಳು ಅಲ್ಲಿ ನಡೆಯುತ್ತಿದ್ದವು. ಈ ವಿಷಯವನ್ನು ಆದಷ್ಟು ಬೇಗ ಎನ್‍ಡಿಟಿವಿ ಕ್ಯಾರಿ ಮಾಡಬೇಕು ಎನ್ನುತ್ತ ಕೆಲವರು ಚಡಪಡಿಕೆಯಿಂದ ಓಡಾಡುತ್ತಿದ್ದರು. ಎಲ್ಲ ಪ್ರಗತಿಪರರೂ ಗೌರಿಯ ಹತ್ಯೆ ಮಾಡಿದ್ದು ಹಿಂದೂ ಉಗ್ರವಾದಿಗಳೇ ಎನ್ನುತ್ತ, ತಾವೇ ಕಣ್ಣಾರೆ ನೋಡಿದಂತೆ ವೀಕ್ಷಕ ವಿವರಣೆ ಒಪ್ಪಿಸುತ್ತಿದ್ದ ಸಮಯದಲ್ಲಿ ಮೈಸೂರಿನ ಓರ್ವ ಪತ್ರಕರ್ತರು ಗೌರಿಯನ್ನು ಕೊಂದದ್ದು ಡೀಮಾನಿಟೈಸೇಶನ್ ಎಂದು ಭಿನ್ನವಾಗಿ ಮಾತಾಡಿ ಪ್ರಚಾರ ಗಿಟ್ಟಿಸಿಕೊಂಡರು. ತಮಾಷೆಯೆಂದರೆ ಗೌರಿಯನ್ನು ಮಹಾ ವ್ಯಕ್ತಿತ್ವ ಎಂದು ಹೊಗಳಲು ಇವರ್ಯಾರಿಗೂ ಆಕೆ ಏನೆಲ್ಲ ಬರೆದಿದ್ದಳು ಎಂಬುದು ಗೊತ್ತಿರಲಿಲ್ಲ. ಆಕೆಯ ನಾಲ್ಕೇ ನಾಲ್ಕು ಕೊಟೇಬಲ್ ಕೋಟ್ಸ್ ಸಿಕ್ಕೀತೇ ಎಂದು ಆಕೆಯ ಫೇಸ್‍ಬುಕ್, ಟ್ವಿಟ್ಟರ್ ಹುಡುಕುತ್ತಿದ್ದವರು ನೂರಾರು ಮಂದಿ. ಪ್ರತಿ ಪೋಸ್ಟ್‍ನಲ್ಲೂ ಆಕೆ ಸಂಘಿಗಳನ್ನು, ಆರೆಸ್ಸೆಸ್ ಅನ್ನು, ಮೋದಿಯನ್ನು ವಾಚಾಮಗೋಚರ ಬೈದಾಡಿಕೊಂಡ ಬರಹಗಳು ಇದ್ದವೇ ಶಿವಾಯಿ ರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ತೋರಿಸುವಂಥ ನಾಲ್ಕು ಸಾಲು ಕೂಡ ಸಿಗಲಿಲ್ಲ. ಹಾಗಾಗಿ ಅವರೆಲ್ಲ ಆಕೆಗೆ “ನಿರ್ಭೀತ ಪತ್ರಕರ್ತೆ”, “ತನ್ನ ಮನಸ್ಸಿನ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡಾಕೆ”, “ಸತ್ಯದ ಪರವಿದ್ದಾಕೆ” ಎಂದು ಏನೇನೋ ವಿಶೇಷಣಗಳನ್ನು ಕೊಡತೊಡಗಿದರು. ಸನತ್ ಕುಮಾರ್ ಬೆಳಗಲಿ ಎಂಬ ಬರಹಗಾರನಂತೂ ಆಕೆಯನ್ನು ಈ ಜಗತ್ತಿನ ಸಕಲ ಮಹತ್ವದ ವ್ಯಕ್ತಿ-ಶಕ್ತಿಗಳಿಗೂ ಸಮೀಕರಿಸಿ ಒಂದು ರೀತಿಯಲ್ಲಿ ದೇವರೇ ಮಾಡಿಹಾಕಿದ್ದರು. ಆ ಎಲ್ಲ ಹೊಗಳಿಕೆಗಳನ್ನು ಸ್ವತಃ ಗೌರಿಯೇ ನೋಡಿದ್ದರೂ ಮೆಚ್ಚಿಕೊಳ್ಳುತ್ತಿರಲಿಲ್ಲ! ಒಟ್ಟಾರೆ ಹೇಳುವುದಾದರೆ ಬದುಕಿದ್ದಾಗ ಟೌನ್‍ಹಾಲ್ ಮೆಟ್ಟಿಲುಗಳ ಒಂದು ಖಾಯಂ ಗಿರಾಕಿಯಷ್ಟೇ ಆಗಿದ್ದ ಗೌರಿ ಸತ್ತ ಮೇಲೆ ಮಹಾತ್ಮರಾದರು, ದಂತಕತೆಯಾದರು. ಬಹುಶಃ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಇಷ್ಟು ಹೊತ್ತಿಗೆ ಆಕೆಗೊಂದು ಮರಣೋತ್ತರ ಭಾರತರತ್ನ ಬಂದಿರುತ್ತಿತ್ತು.

ಗೌರಿ ಬದುಕಿದ್ದು ಹೇಗೆ? ಯಾರೊಬ್ಬರೂ ಹೇಗೆ ಬದುಕಬಾರದೋ ಹಾಗೆ! ಸದಾ ಸ್ಮೋಕ್ ಮಾಡುತ್ತಿದ್ದ ಆಕೆಯನ್ನು ನಾನೇ ಆಕೆಯ ಪತ್ರಿಕೆಯ ಕ್ಯಾಬಿನ್‍ನಲ್ಲಿ ಭೇಟಿಯಾಗಿದ್ದೆ ಒಂದೆರಡು ಸಲ. ಅದಾಗಿ ಒಬ್ಬರು ಗೆಳೆಯರ ಪಾರ್ಟಿಯಲ್ಲಿ ಕೂಡ ಆಕೆಯನ್ನು ಕಂಡಿದ್ದೆ, ಮಾತಾಡಿಸಿದ್ದೆ. ಗೌರಿ ಚೈನ್ ಸ್ಮೋಕರ್ ಆಗಿದ್ದರು. ನಾನು ಹತ್ತು ವರ್ಷಗಳ ಹಿಂದೆ ನೋಡಿದ್ದ ಗೌರಿಗೂ ತೀರ ಇತ್ತೀಚೆಗೆ ಫೋಟೋಗಳಲ್ಲಿ ನೋಡುತ್ತಿದ್ದ ಆಕೆಯ ಚಹರೆಗೂ ಶ್ಯಾನೆ ವ್ಯತ್ಯಾಸವಿತ್ತು. ದೂಮಪಾನ ಮತ್ತು ಮದ್ಯಪಾನಗಳೆರಡಕ್ಕೂ ಅತಿಯಾಗಿ ಅಂಟಿಕೊಂಡಿದ್ದ ಆಕೆ ಯಾವ ಶಾಲಾಮಕ್ಕಳಿಗೂ ಮಾದರಿಯಾಗುವ ವ್ಯಕ್ತಿತ್ವವಲ್ಲ. ಇನ್ನು ಆಕೆಯ ಸೈದ್ಧಾಂತಿಕ ವಿಚಾರಗಳು? ಆಕೆಗೆ ನಿಜವಾಗಿಯೂ ಏನಾದರೂ ಸಿದ್ಧಾಂತ, ವಿಚಾರ ಇತ್ತೆ ಎಂಬುದೇ ಅನುಮಾನ! ಯಾಕೆಂದರೆ ಮಾತಿಗೆ ನಿಂತರೆ ತನ್ನ ಎರಡನೇ ವಾಕ್ಯದಲ್ಲೇ ಸಂಘ ಪರಿವಾರ, ಮೋದಿ, ಬಿಜೆಪಿ ಕಡೆ ಜಾರುತ್ತಿದ್ದ ಆಕೆಯ ಮಾತುಗಳು ಮತ್ತೆಂದೂ ವಾಪಸ್ಸು ವಿಷಯದ ಟ್ರ್ಯಾಕಿಗೆ ಬರುತ್ತಿರಲಿಲ್ಲ. ತನ್ನ ನೆತ್ತಿಯಿಂದ ಕಾಲ್ಬೆರಳವರೆಗೂ ಆಕೆ ತುಂಬಿಕೊಂಡಿದ್ದದ್ದು ಬಿಜೆಪಿ ಮೇಲಿನ ಅಕಾರಣ ದ್ವೇಷ. ಬಿಜೆಪಿಯಾಗಲೀ ಸಂಘ ಪರಿವಾರವಾಗಲೀ ಆಕೆಗೆ ಏನೊಂದೂ ಕೇಡು ಬಗೆದಿರಲಿಲ್ಲ. ಆದರೂ ಆಕೆ ಬಲಪಂಥ ಎಂದೊಡನೆ ಕೋಪಾವೇಶದಿಂದ ಹಾರಿಹಾರಿ ಬೀಳುತ್ತಿದ್ದರು! ಮೋದಿಯನ್ನಂತೂ ಕನಸಲ್ಲೂ ದ್ವೇಷಿಸುತ್ತಿದ್ದರು. ಮೋದಿಗೆ ಆಕೆ “ಯೂ ಈಡಿಯೆಟ್” ಎಂದು ನೇರಾನೇರ ಜಾಲತಾಣದಲ್ಲಿ ಹೀಯಾಳಿಸುತ್ತಿದ್ದರು. “ಮೋದಿಗೆ ನಮ್ಮ ಬಳಸಿದ ಸ್ಯಾನಿಟರಿ ಪ್ಯಾಡ್‍ಗಳನ್ನು ಕಳಿಸೋಣ” ಎಂದಿದ್ದ ಮಹಿಳೆ ಆಕೆ ಎಂದರೆ ನಂಬುತ್ತೀರಾ? “ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ. ಅದಕ್ಕೊಂದು ಪವಿತ್ರ ಗ್ರಂಥ ಇಲ್ಲ. ಅದನ್ನೂ ಒಂದು ಧರ್ಮ ಅಂತಾರೇನ್ರೀ?” ಎಂಬ ಆಕೆಯ ಮಾತುಗಳಲ್ಲೇ ಆಕೆಯ ವೈಚಾರಿಕತೆ ಎಷ್ಟಿತ್ತೆಂಬುದು ಬಟಾಬಯಲಾಗುತ್ತದೆ! ಧರ್ಮ, ಮತ, ರಿಲಿಜನ್ ಇತ್ಯಾದಿ ವಿಷಯಗಳ ಸೂಕ್ಷ್ಮಗಳೊಂದೂ ಆಕೆಗೆ ಗೊತ್ತಿರಲಿಲ್ಲ. ಗೊತ್ತುಮಾಡಿಕೊಳ್ಳುವ ಆಸ್ಥೆಯಾಗಲೀ ಕುತೂಹಲವಾಗಲೀ ಆಕೆಗಿರಲಿಲ್ಲ. ಕೆಲವೊಮ್ಮೆ ನಾವು ನಮ್ಮ ಶತ್ರುಗಳನ್ನು ಖಂಡಿಸಲಿಕ್ಕಾದರೂ ಅವರ ವಿಚಾರಗಳನ್ನು ಆಳವಾಗಿ ಅಭ್ಯಾಸ ಮಾಡುತ್ತೇವೆ. ಆದರೆ ಗೌರಿಗೆ ಅಂಥ ಆಸಕ್ತಿಯೂ ಇರಲಿಲ್ಲ. ತಾನು ಕಲಿತದ್ದೆಷ್ಟಿತ್ತೋ ಅಷ್ಟನ್ನೇ ಇಟ್ಟುಕೊಂಡು ಆಕೆ ಜೀವಮಾನವಿಡೀ ಶತ್ರುಗಳೊಂದಿಗೆ ಹೋರಾಡಿದರು. ಅಂದರೆ ಆಕೆಯ ಕೈಯಲ್ಲಿದ್ದ ಆಯುಧಗಳು ಕೆಲವೇ ಕೆಲವು. ಇನ್ನೂ ನೇರವಾಗಿ ಹೇಳಬೇಕೆಂದರೆ ಆಕೆಯ ಕೈಯಲ್ಲಿದ್ದ ಆಯುಧ ಒಂದು ಮೊಂಡು ಸುತ್ತಿಗೆ ಅಷ್ಟೇ. ಅದನ್ನೇ ಆಕೆ ತನ್ನ ಕಾಲಡಿಯಲ್ಲಿದ್ದ ಶತ್ರುಗಳಿಗೂ ದೂರದಲ್ಲಿ ಆನೆ ಮೇಲೆ ಕೂತ ಶತ್ರುಗಳಿಗೂ ಬಳಸುತ್ತಿದ್ದರು. ಆಕೆಯ ವಾದಗಳನ್ನು ಎಂಥ ಮೂರ್ಖರು ಬೇಕಾದರೂ ಸ್ವಲ್ಪ ಸಾಮಾನ್ಯಜ್ಞಾನ ಬಳಸಿ ಹೊಡೆದುಹಾಕಬಹುದಿತ್ತು. ಆದರೆ, ಎಡಪಂಥೀಯ ವೃತ್ತಗಳಲ್ಲಿ ಗುರುತಿಸಿಕೊಂಡರೆಂಬ ಏಕೈಕ ಕಾರಣಕ್ಕೆ ಆಕೆಯನ್ನು ದೈವತ್ವಕ್ಕೇರಿಸಲಾಯಿತು. ನಿಜಕ್ಕೂ ಇದು ದುರಂತ ಮತ್ತು ವಿಪರ್ಯಾಸ.

ಗೌರಿಯನ್ನು ಕೊಂದವರು ಯಾರು? ಯಾರಿಗೂ ಗೊತ್ತಿಲ್ಲ. ಎಡಪಂಥದ ಆಕೆಯ ಗೆಳೆಯ ಗೆಳತಿಯರಿಗಂತೂ ಸುತಾರಾಂ ಗೊತ್ತಿಲ್ಲ! ಆದರೂ ಅವರೆಲ್ಲ ಕೊಲೆಗಾರರು ಬಲಪಂಥೀಯರೇ ಎಂದು ಬಲವಾಗಿ ನಂಬಿದ್ದಾರೆ. ಬಲಪಂಥದ ವ್ಯಕ್ತಿಯೊಬ್ಬ ಕೊಲೆ ಮಾಡಿ ಓಡಿದ ಎಂದು ಹೇಳಲು ಯಾವ ಆಧಾರಗಳೂ ಇಲ್ಲ. ಆದರೂ ಅವರು ಹಾಗೆಯೇ ನಡೆದಿದೆ ಎಂದು ನಂಬಿದ್ದಾರೆ. ಪಾನ್ಸಾರೆ, ದಾಭೋಲ್ಕರ್, ಕಲಬುರ್ಗಿ ಸಾಲಲ್ಲಿ ಈಗ ಗೌರಿಯನ್ನೂ ಇಡಲಾಗಿದೆ. ಆ ಹಿಂದಿನ ಮೂರು ವ್ಯಕ್ತಿಗಳನ್ನು ಕೂಡ ಬಲಪಂಥೀಯರೇ ಕೊಂದಿದ್ದಾರೆಂಬ ಹುಸಿಸುದ್ದಿ ಹಬ್ಬಿಸಲಾಗಿದೆ. ಒಂದೇ ಸುಳ್ಳನ್ನು ನೂರು ಜನ ನೂರು ಸಲ ಹೇಳುತ್ತಲೇ ಇದ್ದರೆ ಕೊನೆಗೆ ಅದನ್ನು ನಿಜವೆಂದೇ ಬಿಂಬಿಸಬಹುದು ಎಂಬ ಗೊಬೆಲ್ಸ್ ತಂತ್ರವೇ ಇಲ್ಲಿ ಬಳಕೆಯಾಗುತ್ತಿದೆ. ಗೌರಿಯ ಕೊಲೆಯನ್ನು ಬಲಪಂಥೀಯರೇ ಮಾಡಬೇಕಾಗುವುದು ಎಡಪಂಥೀಯರ ಅನಿವಾರ್ಯತೆ. ಯಾಕೆಂದರೆ ಅಖ್ಲಾಕ್‍ನ ಕೊಲೆಯಾದಾಗ ಅದನ್ನು ಬಲಪಂಥದ ತಲೆಗೆ ಕಟ್ಟಿ ಬಿಹಾರ್ ಚುನಾವಣೆಯ ಫಲಿತಾಂಶಗಳು ಬಿಜೆಪಿಗೆ ವಿರುದ್ಧವಾಗಿರುವಂತೆ ನೋಡಿಕೊಳ್ಳಲಾಯಿತು. ಈಗ, ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಉಳಿದಿವೆ ಎಂಬ ಹಂತದಲ್ಲಿ ಕರ್ನಾಟಕದಲ್ಲಿ ಗೌರಿಯ ಕೊಲೆ ನಡೆದಿದೆ. ಈ ಹವೆಯನ್ನು ಕೂಡ ನಾಲ್ಕೈದು ತಿಂಗಳು ಕಾಪಿಟ್ಟುಕೊಳ್ಳಲು ಕಾಂಗ್ರೆಸ್ ಬಣ ಯಶಸ್ವಿಯಾಗಿದ್ದೇ ಆದರೆ ಇಲ್ಲೂ ಬಿಜೆಪಿಗೆ ಪ್ರತಿಕೂಲವಾಗುವಂಥ ಫಲಿತಾಂಶವನ್ನು ಪಡೆಯಬಹುದು. ತನ್ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳೇ ಅಧಿಕಾರ ಪಡೆಯಬಹುದು. ಅಂದರೆ ಗೌರಿಯ ಕೊಲೆಯನ್ನು ಬಲಪಂಥೀಯರೇ ಮಾಡಿದರೆಂದು ಬಿಂಬಿಸಿದರೆ ಅದು ಕಾಂಗ್ರೆಸ್ ಅನ್ನು ನೇರವಾಗಿ ಅಧಿಕಾರದಲ್ಲಿ ಕುಳ್ಳಿರಿಸಿಲು ಬೇಕಾದ ಅಗತ್ಯ ರಾಜಕೀಯ ವಿಷಯ ಕೂಡ ಆಗಬಹುದು. ಹಾಗಾಗಿ, ಸರಕಾರ ಅತ್ಯಂತ ಜಾಗ್ರತೆಯ ಹೆಜ್ಜೆಗಳನ್ನೇ ಇಡುತ್ತದೆ. ಬಲಪಂಥೀಯರ ಕೈವಾಡದ ಶಂಕೆ ಬಂದರೆ ತನಿಖೆಯನ್ನು ಅತ್ಯಂತ ಆಮೂಲಾಗ್ರವಾಗಿ ನಡೆಸಿ ಕೊನೆಗೆ ಸಿಬಿಐಗೆ ವಹಿಸುತ್ತದೆ. ಬಲಪಂಥೀಯರಲ್ಲ, ಇದು ನಕ್ಸಲರು ಮಾಡಿದ ಕೊಲೆ ಎಂಬುದೇನಾದರೂ ತನಿಖೆಯಲ್ಲಿ ಜಾಹೀರಾದರೆ ತನಿಖೆಯ ದಿಕ್ಕೇ ಬದಲಾಗುತ್ತದೆ; ಸಾಕ್ಷಿಗಳು ನಾಶವಾಗುತ್ತವೆ; ತನಿಖೆ ಅದೆಷ್ಟು ವಾರ-ತಿಂಗಳು ಮುಂದುವರೆದರೂ ಅತ್ತ ಕೇಂದ್ರಕ್ಕೂ ಹಸ್ತಾಂತರವಾಗುವುದಿಲ್ಲ; ಇತ್ತ ರಾಜ್ಯದ ಸುಪರ್ದಿಯಲ್ಲಿರುವ ಎಸ್‍ಐಟಿಯಲ್ಲೂ ಮುಂದೆ ಸಾಗುವುದಿಲ್ಲ.

ಕರ್ನಾಟಕದಲ್ಲಿ ಮೂರೂವರೆ ಸಾವಿರಕ್ಕೂ ಮಿಕ್ಕಿ ರೈತರ ಆತ್ಮಹತ್ಯೆಗಳಾಗಿವೆ. ಬುದ್ಧಿಜೀವಿಗಳು ಒಂದು – ಒಂದೇ ಒಂದು ಸಮಾವೇಶ ಮಾಡಿ ಕಣ್ಣೀರು ಹಾಕಿದ್ದನ್ನು ಕನ್ನಡಿಗರು ನೋಡಿದ್ದಾರಾ? ಸಮಾವೇಶ ಬಿಡಿ, ಒಂದು ಬಿಟ್ಟಿ ಜಾಲತಾಣದ ಪೋಸ್ಟ್ ಅನ್ನು ಕೂಡ ಬರೆಯದ ಮಂದಿ ಇವರು. ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ ಹನ್ನೆರಡಕ್ಕೂ ಹೆಚ್ಚು ಸಂಘ ಪರಿವಾರದ ಅಮಾಯಕ ಯುವಕರ ಬರ್ಬರ ಹತ್ಯೆಗಳಾದವು. ಜಾತ್ಯತೀತರು ಎಂದು ಹೇಳಿಕೊಳ್ಳುವ ಬಳಗಗಳಿಂದ ಒಬ್ಬನೇ ಒಬ್ಬ ಬುದ್ಧಿಜೀವಿ ನಾಲ್ಕು ವಿಷಾದದ ಮಾತುಗಳನ್ನು ಹೇಳಿದ್ದರೆ ದಯವಿಟ್ಟು ತೋರಿಸಿ. ಈ ರಾಜ್ಯದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ಕೊಲೆಗಳಾದವು. ಅಥವಾ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುವ ಯತ್ನಗಳಾದವು. ಬುದ್ಧ ಬಸವ ಅಂಬೇಡ್ಕರ್ ಹೆಸರುಗಳನ್ನೆತ್ತುವ ಒಬ್ಬನೇ ಒಬ್ಬ ಬುದ್ಧಿಜೀವಿ ಈ ಕೊಲೆಗಳ ವಿರುದ್ಧ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಉದಾಹರಣೆ ಇದೆಯಾ? ರಾಜ್ಯದಲ್ಲಿ ಇಂಥ ನೂರಾರು ಕೊಲೆಗಳು, ಆತ್ಮಹತ್ಯೆಗಳು, ಅತ್ಯಾಚಾರಗಳು ನಡೆದಾಗ ಎಡಪಂಥೀಯ ವಿಚಾರಧಾರೆಯ ಒಬ್ಬನೇ ಒಬ್ಬ ವ್ಯಕ್ತಿಯೂ ಒಂದೇ ಒಂದು ಸಂತಾಪವನ್ನು ದಾಖಲಿಸಿದ ಉದಾಹರಣೆ ಇಲ್ಲ. ಆದರೆ ಇವರು ಹಾರಾಡಿದ್ದು ಕೇವಲ ಎರಡು ಕೊಲೆಗಳ ವಿಷಯದಲ್ಲಿ ಮಾತ್ರ. ಒಂದು – ಡಾ. ಎಂ.ಎಂ. ಕಲಬುರ್ಗಿಯವರುದ್ದು; ಎರಡನೆಯದ್ದು ಗೌರಿ ಲಂಕೇಶ್ ಅವರದ್ದು. ಸ್ವಾರಸ್ಯವೆಂದರೆ ಕಲಬುರ್ಗಿಯವರು ಕೊಲೆಯಾಗಿ ಹೋಗುವವರೆಗೂ ಅಂಥ ಒಬ್ಬ ವಿದ್ವಾಂಸರು ಕರ್ನಾಟಕದಲ್ಲಿ ಇದ್ದಾರೆಂಬುದೇ ಬಹಳಷ್ಟು ಬುದ್ಧಿಜೀವಿಗಳಿಗೆ ಗೊತ್ತಿರಲಿಲ್ಲ. ಯಾಕೆಂದರೆ ಕಲಬುರ್ಗಿ ಯಾವತ್ತೂ ಟೌನ್‍ಹಾಲ್ ಗಂಜಿಗಿರಾಕಿಗಳ ಮಟ್ಟಕ್ಕೆ ಇಳಿದು ಹೋರಾಟ ಮಾಡುವವರಾಗಿರಲಿಲ್ಲ. ಅನಂತಮೂರ್ತಿಯವರ ಉಚ್ಚೆ ಪ್ರಕರಣದಲ್ಲಿ ಅಲ್ಪಸ್ವಲ್ಪ ಹೆಸರು ಮಾಡಿದ್ದು, ಕೆಡಿಸಿಕೊಂಡಿದ್ದು ಬಿಟ್ಟರೆ ಕಲಬುರ್ಗಿ ಎಂದೂ ಕನ್ನಡದ ಸಾಕ್ಷಿಪ್ರಜ್ಞೆಗಳ ಸಾಲಿನಲ್ಲಿ ಕಾಣಿಸಿಕೊಳ್ಳದ ವ್ಯಕ್ತಿತ್ವ. ಅವರ ಕೊಲೆಯಾದದ್ದು ಕೂಡ ಕುಟುಂಬದೊಳಗಿನ ಕಲಹದ ಸಂಬಂಧವಾಗಿ – ಎಂದು ಧಾರವಾಡದ ಗಲ್ಲಿಗಲ್ಲಿಗಳಲ್ಲಿ ಜನ ಲೋಕಾಭಿರಾಮ ಮಾತಾಡಿಕೊಳ್ಳುತ್ತಾರೆ. ಆದರೆ, ಅಂಥ ಕಲಬುರ್ಗಿ ಕೊಲೆಯನ್ನು ಬುದ್ಧಿಜೀವಿಗಳು ಮತ್ತು ಪ್ರಗತಿಪರರು ಬಲಪಂಥೀಯರ ತಲೆಗೆ ಕಟ್ಟಿದರು. ಸರಕಾರದೊಳಗಿರುವ ಕೆಲವು ಬುದ್ಧಿಜೀವಿಗಳು ಒಂದು ಹಿಟ್ ಲಿಸ್ಟ್ ಕೂಡ ರೆಡಿ ಮಾಡಿಕೊಂಡದ್ದುಂಟು. ಸರಕಾರ ಎರಡೂವರೆ ವರ್ಷಗಳಿಂದ ಕೊಲೆಯ ತನಿಖೆ ನಡೆಸುತ್ತಲೇ ಇದೆ! ಕೊಲೆಯಲ್ಲಿ ಬಲಪಂಥೀಯರ ಕೈವಾಡ ಇಲ್ಲವೆಂಬುದು ಖಚಿತವಾದ ಮೇಲೆ ಸರಕಾರಕ್ಕೆ ಆ ತನಿಖೆಯಲ್ಲಿ ಯಾವ ಆಸಕ್ತಿಯೂ ಇಲ್ಲವಾಗಿದೆ. ತನಿಖೆ ನಡೆಯುತ್ತಿದ್ದರೂ, ತನಿಖೆಯ ಸಂಪೂರ್ಣ ಜವಾಬ್ದಾರಿ ಕರ್ನಾಟಕ ಸರಕಾರದ್ದೇ ಆದರೂ, ಆರ್ಥಿಕ ಮುಗ್ಗಟ್ಟಿನಿಂದ ಆ ತನಿಖೆಯ ಕೆಲಸವನ್ನು ಸರಕಾರ ಕೆಲ ಸಮಯ ನಿಲ್ಲಿಸಿದ್ದಿದ್ದರೂ ಬುದ್ಧಿಜೀವಿಗಳ ಟೀಕೆಗಳೆಲ್ಲ ಕೇಂದ್ರ ಸರಕಾರದ ವಿರುದ್ಧ! ಮೋದಿಯ ವಿರುದ್ಧ! ಇದಕ್ಕೆಲ್ಲ ನೀವು ಲಾಜಿಕ್ ಹುಡುಕಬೇಕಾಗಿಲ್ಲ. ತರ್ಕರಹಿತವಾಗಿ ಮಾತಾಡುವುದೇ ಬುದ್ಧಿಜೀವಿಯಾಗಲು ಬೇಕಾದ ಮೊದಲ ಅರ್ಹತೆ.

ಇದೀಗ ಗೌರಿಯ ಹೆಸರಲ್ಲಿ ಹೋರಾಟವಂತೆ. ಗೌರಿ ಕೂಡ, ಕಲಬುರ್ಗಿವರಂತೆಯೇ ಬುದ್ಧಿಜೀವಿಗಳ ಜೊತೆಗಿದ್ದೂ ಪ್ರತ್ಯೇಕವಾಗಿ ನಿಲ್ಲುತ್ತಿದ್ದ ವ್ಯಕ್ತಿತ್ವ. ಬಹುಶಃ ಮೊಂಡುತನ ಇದ್ದರೂ ವಾದ-ವಾಗ್ವಾದ ಸಾಧ್ಯವಾಗುತ್ತಿದ್ದ ಏಕೈಕ ಎಡ ಬುದ್ಧಿಜೀವಿ ಆಕೆ. ಆಕೆಯದ್ದು ವಿಚಾರಮಂಥನ ಅಲ್ಲ; ಹೊಸದೊಂದಿಷ್ಟು ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕೆಂಬ ಸದಾಶಯ ಹೊತ್ತ ಚರ್ಚೆಯಲ್ಲ. ವಾದಕ್ಕಾಗಿ ವಾದ ಎಂಬ ಕೆಟಗರಿಯವರು ಗೌರಿ. ಹಾಗಾಗಿ ಆಕೆಯ ತರ್ಕ, ಸಂವಾದ ಯಾವುದೂ ಒಂದು ನಿರ್ದಿಷ್ಟ ಬೌದ್ಧಿಕ ಹಂತವನ್ನು ದಾಟಿ ಮೇಲೇರುತ್ತಿರಲಿಲ್ಲ. ಈಗ ಆಕೆಯ ಸಾವಿಗಾಗಿ ಉರುಳಾಡಿಕೊಂಡು ರೋದಿಸುತ್ತಿರುವ ಯಾವುದೇ ಗಂಜಿಪಿಪಾಸುಗಳೂ ಆಕೆ ಬದುಕಿದ್ದಾಗ ಆಕೆಯ ಸುಖಕಷ್ಟ ಕೇಳಲಿಲ್ಲ. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಆಕೆ ತನ್ನ ಜೀವನ ನಿರ್ವಹಣೆಗಾಗಿ ಪತ್ರಿಕೆಯ ಮೌಲ್ಯಗಳನ್ನು ಬದಲಾಯಿಸವುದಕ್ಕೂ ತಯಾರಾಗಿಬಿಟ್ಟಿದ್ದರು. ಪತ್ರಿಕೆಯಲ್ಲಿ ಜಾಹೀರಾತು ಹಾಕಿ ಅದರಿಂದಾದರೂ ನಷ್ಟ ತುಂಬಿಸಿಕೊಳ್ಳಬೇಕೆಂದು ಬಯಸಿದ್ದರು. ಲಂಕೇಶ್ ಜೀವಿತದ ಸಮಯದಲ್ಲಿ ಲಕ್ಷದಷ್ಟು ಪ್ರಸಾರಸಂಖ್ಯೆ ಇದ್ದ ಪತ್ರಿಕೆಯನ್ನು ಕೆಲವೇ ಕೆಲವು ನೂರುಗಳ ಮಟ್ಟಕ್ಕೆ ತಂದುನಿಲ್ಲಿಸಿದ್ದೇ ಗೌರಿಯ ಜೀವನದ ದೊಡ್ಡ ಸಾಧನೆ ಎನ್ನಬೇಕು. ಆಕೆ, ಈಗ ಗಂಜಿಗಳು ಹೇಳುವಂತೆ, ನಿಜವಾಗಿಯೂ ಈ ರಾಜ್ಯದ ಸಾಕ್ಷಿಪ್ರಜ್ಞೆಯಾಗಿದ್ದರೆ ಆಕೆಯ ಪತ್ರಿಕೆಯ ಪ್ರಸಾರ ಅಷ್ಟೊಂದು ಕುಸಿಯುವುದಕ್ಕೆ ಕಾರಣವಿತ್ತೇ? ಪ್ರಗತಿಪರರು ಆಕೆಯ ಜೀವನದ ಬಗ್ಗೆ ತಿಳಿದಿದ್ದರೆ, ಅಥವಾ ಆಕೆ ಪ್ರಗತಿಪರರ ಜೊತೆ ಆತ್ಮೀಯವಾಗಿದ್ದರೆ ಆಕೆಯ ಆರ್ಥಿಕ ಸಮಸ್ಯೆಗಳು, ಸಾಮಾಜಿಕ ಜಂಜಡಗಳು, ಕುಟುಂಬದೊಳಗಿನ ಕಲಹಗಳು ಇವೆಲ್ಲಕ್ಕೂ ಒಂದಿಲ್ಲೊಂದು ಪರಿಹಾರ ಸಿಗಬೇಕಿತ್ತಲ್ಲವೇ? ಗೌರಿಗೆ ತನ್ನ ಮೋದಿದ್ವೇಷದ ಕಾರಣಕ್ಕಾಗಿ ಎಡಪಂಥದ ಜೊತೆ ಅನಿವಾರ್ಯವಾಗಿ ಗುರುತಿಸಿಕೊಳ್ಳಬೇಕಾದ ಅಗತ್ಯವಿತ್ತೇ ಹೊರತು ಆಕೆ ಎಂದೂ ಪ್ರಗತಿಪರರಿಗೆ ಹತ್ತಿರವಾಗಲಿಲ್ಲ. ಆದರೆ, ಆಕೆ ಸತ್ತ ಮರುಕ್ಷಣವೇ ಎಡಪಂಥೀಯರು ತಾವೇ ಆಕೆಯನ್ನು ಹೆತ್ತು ಹೊತ್ತು ಸಾಕಿ ಸಲಹಿದಂತೆ ಪೋಸ್ ಕೊಡತೊಡಗಿದರು. ಗೌರಿಯ ಹತ್ಯೆಯನ್ನು ಖಂಡಿಸಿ ನಡೆಸಿದ ಸಮಾವೇಶದಲ್ಲಿ ಚಂದ್ರಶೇಖರ ಪಾಟೀಲ, ಗಿರೀಶ ಕಾರ್ನಾಡ್, ಕೆ.ಎಸ್. ಭಗವಾನ್, ಬರಗೂರು ರಾಮಚಂದ್ರಪ್ಪ, ಮೇಧಾ ಪಾಟ್ಕರ್, ಸೀತಾರಾಂ ಯೆಚೂರಿ ಮುಂತಾದ ಪ್ರಭೃತಿಗಳು ಧರಿಸಿದ್ದ ವಿಷಣ್ಣ ಮುಖವಾಡ ಕಂಡವರಿಗೆ ಎರಡು ದಿನ ಊಟವೇ ಸೇರಲಿಕ್ಕಿಲ್ಲ! ತಮ್ಮ ಜೀವನ ಮುಗಿದುಹೋದಂತೆ, ನಾಳೆಯೇ ಪ್ರಳಯ ಎಂಬ ಸುದ್ದಿ ಖಚಿತವಾದಂತೆ ಅವರೆಲ್ಲ ಜೋಲುಮುಖ ಹೊತ್ತು ಚಿಂತಾಕ್ರಾಂತರಾದಂತೆ ಕ್ಯಾಮರಾಗಳಿಗೆ ಪೋಸು ಕೊಟ್ಟು ಸಮಾವೇಶವನ್ನು ಅವರ ನೆಲೆಯಲ್ಲಿ ಯಶಸ್ವಿಗೊಳಿಸಿದರು!

ದೇಶದಲ್ಲಿ ಪ್ರತಿಯೊಂದು ಇಂಥ ಸಾವು ಸಂಭವಿಸಿದಾಗಲೂ ಈ ಗಂಜಿಪಡೆ ಹೇಗೆ ಕೆಲಸ ಮಾಡುತ್ತದೆಂಬುದು ಸದ್ಯಕ್ಕೆ ಗುಟ್ಟಾಗೇನೂ ಉಳಿದಿಲ್ಲ. ಮೊದಲಿಗೆ ಆಕಾಶವೇ ಕಳಚಿಬಿದ್ದಂತೆ ಒಂದು ವಾತಾವರಣ ಸೃಷ್ಟಿಸುವುದು, ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಮಾತಾಡಿ ರಾಡಿ ಎಬ್ಬಿಸುವುದು, ಪುಂಖಾನುಪುಂಖವಾಗಿ ತಮ್ಮವರ ಪರವಾಗಿ ಸುಳ್ಳುಗಳ ಸರಮಾಲೆ ಬರೆದುಕೊಳ್ಳುವುದು, ಜಾಲತಾಣದಲ್ಲಿ ಒಂದೇ ಸುಳ್ಳನ್ನು ನೂರು, ಸಾವಿರ ಸಲ ಹೇಳಿ ಅಮಾಯಕರು ಅವನ್ನೇ ನಂಬುವಂತೆ ಮಾಡುವುದು, ಸತ್ಯ ಏನು ಎಂದು ಸಾಮಾನ್ಯಜನರಿಗೆ ಗೊಂದಲವಾಗುವಂತೆ ನೋಡಿಕೊಳ್ಳುವುದು, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇದೊಂದು ದೊಡ್ಡ ದುರಂತ ಎಂಬಂತೆ ಸುದ್ದಿ ಹರಡುವುದು – ಇವರ ಕಾರ್ಯಾಚರಣೆಯ ಮೊದಲ ಭಾಗ. ಮಾಧ್ಯಮದಲ್ಲಿ ಇನ್ನೂ ಇವರದ್ದೇ ಪ್ರಾಬಲ್ಯವಿರುವುದರಿಂದ ಇದೆಲ್ಲ ಸಾಧ್ಯ. ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಕೆಟ್ಟ ಸುದ್ದಿಗೂ ಪ್ರಾಶಸ್ತ್ಯ ನೀಡುವ ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳು ಇಂಥ ಸುದ್ದಿಗಳನ್ನೆಲ್ಲ ಚಪ್ಪರಿಸಿ ಚಪ್ಪರಿಸಿ ತೀಟೆ ತೀರಿಸಿಕೊಳ್ಳುತ್ತವೆ. ಇನ್ನು ಎರಡನೆ ಹಂತವಾಗಿ ಗಂಜಿಪಡೆಯ ಸಮಾವೇಶಗಳು. ಪ್ರತಿಭಟನೆ, ಹೋರಾಟಗಳು. ಸತ್ತವರು ಯಾರೇ ಇರಲಿ, ಎಷ್ಟೇ ದೊಡ್ಡವರು ಅಥವಾ ಸಣ್ಣವರಿರಲಿ, ದೇಶದಲ್ಲಿರುವ ಗಂಜಿಪಡೆಯ ಒಬ್ಬೊಬ್ಬ ಸದಸ್ಯನೂ ಉಳಿದವರನ್ನು ತತ್‍ಕ್ಷಣ ಕೂಡಿಕೊಳ್ಳುತ್ತಾನೆ. ಇಂಥ ಸಮಾವೇಶಗಳಲ್ಲಿ ನಡೆಯುವುದೇನೆಂದರೆ ಮೋದಿಖಂಡನೆ, ಆರೆಸ್ಸೆಸ್, ಸಂಘ ಪರಿವಾರದ ಮೇಲೆ ಕೆಂಡ ಕಾರುವಿಕೆ, ಬಿಜೆಪಿಯ ಮೇಲೆ ವಾಚಾಮಗೋಚರ ಬಯ್ದಾಟ. ಇಂಥ ಹೋರಾಟ, ಹಾರಾಟ, ಎದೆ ಒಡೆದಾಟಗಳು ಇದ್ದಲ್ಲಿ ಮಾಧ್ಯಮಗಳಿಗೆ ಸುಗ್ಗಿ. ಕ್ಯಾಮರಾಗಳು ಇಡೀ ದಿನ ಚಕಚಕನೆ ಕಣ್ಣು ಹೊಡೆಯುತ್ತಲೇ ಇರುತ್ತವೆ. ಗಂಜಿಪಡೆಯ ಕಾರ್ಯಕ್ರಮವನ್ನು, ಟಿಆರ್‍ಪಿ ಸಿಗುವುದು ಖಾತರಿಯಾದರೆ, ಸುದ್ದಿವಾಹಿನಿಗಳು ನೇರಪ್ರಸಾರ ಮಾಡುವುದಕ್ಕೂ ಹಿಂದೇಟು ಹಾಕವೇನೋ. ಈ ಎರಡು ಕೆಲಸಗಳು ಇತ್ತ ನಡೆಯುತ್ತಿರುವಾಗಲೇ ಅತ್ತ ಗಂಜಿಪಡೆಯ ಇನ್ನೊಂದು ಕವಲು ಆಗಿರುವ ದುರಂತದಲ್ಲಿ ತಮ್ಮವರು ಯಾರೂ ಸಿಕ್ಕಿಕೊಳ್ಳದಂತೆ ಎಚ್ಚರಿಕೆವಹಿಸುವ ಕೆಲಸದಲ್ಲಿ ನಿರತವಾಗಿರುತ್ತದೆ. ಅದಕ್ಕಾಗಿ ಸಾಕ್ಷಿನಾಶ, ತನಿಖೆಯ ದಿಕ್ಕು ತಪ್ಪಿಸುವುದು, ತಾವೇ ತನಿಖೆಯನ್ನು ತಮಗೆ ಬೇಕಾದಂತೆ ನಿರ್ದೇಶಿಸುವುದು, ಅಗತ್ಯಬಿದ್ದರೆ ಸರಕಾರವನ್ನೂ ತಮಗೆ ಬೇಕಾದಂತೆ ಬಗ್ಗಿಸಿಕೊಳ್ಳುವುದು – ಇವೆಲ್ಲವೂ ತೆರೆಮರೆಯಲ್ಲಿ ನಡೆಯುತ್ತಿರುತ್ತವೆ. ಕಲಬುರ್ಗಿಯವರ ಕೊಲೆಯಾದ ಕೆಲವೇ ಗಂಟೆಗಳಲ್ಲಿ ಸರಕಾರದ ಆಯಕಟ್ಟಿನ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬ ಕೊಲೆಗೆ ಸಂಬಂಧಿಸಿದವರೊಡನೆ ಕೂತು, ತನಿಖೆಯನ್ನು ತಾವು ಯಾವ ರೀತಿಯಲ್ಲಿ ದಿಕ್ಕುತಪ್ಪಿಸಿ ಹಳ್ಳ ಹಿಡಿಸುತ್ತೇವೆ ಎಂದು ವಿವರಿಸಿ ಅಭಯ ನೀಡುತ್ತಿದ್ದ. ಆ ಯೋಜನೆಯ ಭಾಗವಾಗಿ ಒಂದಿಬ್ಬರು ಹಿಂದೂತ್ವವಾದಿಗಳನ್ನು ಬಂಧಿಸಿ ವಿಚಾರಿಸಲಾಯಿತು. ಹಿಟ್ ಲಿಸ್ಟ್ ತಯಾರಿಸಿ ಜಾಲತಾಣದಲ್ಲಿ ತೇಲಿಬಿಡಲಾಯಿತು. ಕಲಬುರ್ಗಿ ಕೊಲೆಯನ್ನು ಪಾನ್ಸಾರೆ, ದಾಭೋಲ್ಕರ್ ಕೊಲೆಗಳಿಗೆ ಸಮೀಕರಿಸಿಡಲಾಯಿತು. ಮಹಾರಾಷ್ಟ್ರದಲ್ಲಿದ್ದ ಯಾವುದೋ ಹಿಂದೂ ಸಂಘಟನೆಯೊಂದಿಗೆ ಕಲಬುರ್ಗಿ ಹತ್ಯೆಯನ್ನು ತಳುಕುಹಾಕಲಾಯಿತು. ಒಟ್ಟಲ್ಲಿ ಕುಟುಂಬದೊಳಗಿನ ಆಸ್ತಿವಿವಾದದ ಆಂಗಲ್ ಒಂದನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನೂ ಮಾಡಲಾಯಿತು! ಗೌರಿಯ ಹತ್ಯೆಯ ವಿಷಯದಲ್ಲೂ ಇದೇ ಪುನರಾವರ್ತನೆಯಾಗುವುದು ನೂರಕ್ಕೆ ನೂರು ಸಿದ್ಧ.

ಗೌರಿಯ ಕೊಲೆ ಬೇಕಾಗಿರುವುದು ಯಾರಿಗೆ? ಬಲಪಂಥೀಯರಿಗಂತೂ ಅಲ್ಲ. ಆಕೆಯನ್ನು ಬಲಪಂಥದ ಕಡೆಯ ಯಾವೊಬ್ಬ ವ್ಯಕ್ತಿಯೂ ವಿಚಾರವಾದಿ, ಚಿಂತಕಿ, ದೇಶದ ಬೌದ್ಧಿಕ ಆಸ್ತಿ ಎಂದು ಪರಿಗಣಿಸಿರಲಿಲ್ಲ. ಒಂದು ದಿವ್ಯ ನಿರ್ಲಕ್ಷ್ಯದ ಹೊರತಾಗಿ ಆಕೆ ಯಾವುದಕ್ಕೂ ಅರ್ಹಳಾಗಿರಲಿಲ್ಲ. ಆಕೆಯನ್ನು ಕೊಂದು ಮುಂದಿನ ಚುನಾವಣೆಯ ಫಲಿತಾಂಶದ ಮೇಲೆ ಚಪ್ಪಡಿಕಲ್ಲು ಎಳೆದುಕೊಳ್ಳಲು ಬಿಜೆಪಿ ಅಥವಾ ಅದರ ಅಂಗಪಕ್ಷಗಳು ಸಿದ್ಧವಿವೆ ಎಂದು ಯೋಚಿಸುವುದೇ ಮೂರ್ಖತನ. ಹಾಗಾದರೆ ಯಾರು ಕೊಂದಿರಬೇಕು? ಒಂದೋ ಕುಟುಂಬದೊಳಗಿನ ವೈಮನಸ್ಯ ಆಕೆಯನ್ನು ಮುಗಿಸಿರಬೇಕು. ಇಲ್ಲವೇ ನಕ್ಸಲ್ ಜಗಳಗಳು ಬೆಳೆದು ಆಕೆಯನ್ನು ಬಲಿಪಡೆದಿರಬೇಕು. ಕೇಂದ್ರದ ಸಿಬಿಐ ತನಿಖೆ ಆಗಲಿ ಎಂದು ಸೋದರ ಇಂದ್ರಜಿತ್ ಲಂಕೇಶ್ ವಾದಿಸಿದರೆ, ಸೋದರಿ ಕವಿತಾ ಆತನನ್ನು ಸುಮ್ಮನಿರಿಸಿ, “ಕರ್ನಾಟಕ ಸರಕಾರದ ವ್ಯಾಪ್ತಿಯಲ್ಲಿ ಬರುವ ಎಸ್‍ಐಟಿ ತನಿಖೆಯೇ ಮೊದಲು ಆಗಲಿ” ಎಂದು ಹೇಳುತ್ತಿದ್ದದ್ದು ನೋಡಿದರೆ ಈ ಕೊಲೆಗೆ ನಕ್ಸಲ್ ಸಂಬಂಧ ಇರುವುದು ಸೂರ್ಯಪ್ರಕಾಶದಷ್ಟು ಸ್ಪಷ್ಟ. ಇವೆರಡೂ ಅಲ್ಲವಾದರೆ ಮುಂದಿನ ಚುನಾವಣೆಗೊಂದು ವಿಷಯವಾಗಲಿ ಎಂದು ಗಂಜಿಪಡೆಯೇ ಒಟ್ಟಾಗಿ ತಮ್ಮಲ್ಲೊಬ್ಬರನ್ನು ಮುಗಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ! ಕರ್ನಾಟಕದಲ್ಲಿ 2018ರಲ್ಲಿ ನಡೆಯುವ ಚುನಾವಣೆಗಳು ರಾಜಕೀಯ ಪಕ್ಷಗಳಿಗೆ ಎಷ್ಟು ಮುಖ್ಯವೋ ಗೊತ್ತಿಲ್ಲ, ಆದರೆ ಗಂಜಿಗಿರಾಕಿಗಳ ಪಾಲಿಗಂತೂ ಮಾಡು ಇಲ್ಲವೇ ಮಡಿ ಪರಿಸ್ಥಿತಿಯನ್ನು ತಂದೊಡ್ಡಿದೆ. 2018ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಏನಾದರೂ ಸೋತುಸುಣ್ಣವಾದರೆ ಅಲ್ಲಿಗೆ ಐದು ವರ್ಷಗಳ ಕಾಲ ನಕ್ಸಲ್‍ವಾದಿ ಕಮ್ಯುನಿಸ್ಟ್‍ವಾದಿ ಗಂಜಿಪಡೆ ಬಾಯಿ ಬಾಯಿ ಬಡಿದುಕೊಳ್ಳಬೇಕಾದ ತುರ್ತುಪರಿಸ್ಥಿತಿ ಉದ್ಭವವಾಗಲಿದೆ. ಯಾವುದೇ ಕೊಲೆಗೆ ಪ್ರೇರಣೆಯೇ ಅತಿಮುಖ್ಯ ಅಂಶ ಎನ್ನುವುದು ನಿಜವಾದರೆ, ಗಂಜಿಗಿರಾಕಿಗಳ ಪ್ರೇರಣೆಯೇ ಅತಿಮುಖ್ಯವಾಗುತ್ತದೆ. ಗೌರಿಯನ್ನು ಪರಿಹರಿಸುವುದು ಸಂಘ ಪರಿವಾರ ಮತ್ತು ನಕ್ಸಲರಿಗಿಂತ ಹೆಚ್ಚು ಅಗತ್ಯವಾಗಿದ್ದದ್ದು ಆ ಶವವನ್ನು ಮುಂದಿಟ್ಟುಕೊಂಡು ಮುಂದಿನ ಐದು ವರ್ಷಗಳ ರಾಜಕೀಯ ಲಾಭವೆತ್ತಲು ನಿಂತಿದ್ದ ಗಂಜಿಪಡೆಗೇ ಅಲ್ಲವೆ? ಹಾಗಾದರೆ ಗೌರಿಯನ್ನು ಕೊಂದವರು ಯಾರು? ಗುಂಪಿನಲ್ಲಿ ಹುಸಿಶರ ಬಿಟ್ಟವನೇ ಎಲ್ಲರಿಗಿಂತ ಮೊದಲು ಮೂಗು ಮುಚ್ಚುವಂತೆ ಗೌರಿಯ ಶವ ನೆಲಕ್ಕುರುಳುವ ಸಮಯದಲ್ಲೇ ಅದನ್ನೊಂದು ರಾಷ್ಟ್ರೀಯ ದುರಂತವೆಂಬಂತೆ ಬಿಂಬಿಸಲು ಯತ್ನಿಸಿದ್ದು ಪ್ರಗತಿಪರ ಜೀವಪರ ಚಿಂತಕರಲ್ಲದೆ ಬೇರಾರೂ ಅಲ್ಲ. ಸಿದ್ದರಾಮಯ್ಯನವರ ಸರಕಾರ ಇರುವವರೆಗೆ ಈ ತನಿಖೆಯ ನಾಟಕ ಮುಂದುವರಿಯಲಿದೆ, ಗಂಜಿಗಳ ಹಾಹಾಕಾರ ಮುಗಿಲು ಮುಟ್ಟಲಿದೆ, ಬಲಪಂಥೀಯರ ಮೇಲೆ ಗೂಬೆ ಕೂರಿಸಲು ಹತ್ತುಹಲವು ತಂತ್ರಗಳನ್ನು ಹೆಣೆಯುತ್ತಾ ಹೋಗಲಾಗುತ್ತದೆ. ಅಂಥ ಒಂದೇ ಒಂದು ತಂತ್ರಕ್ಕೆ ಬಲಪಂಥೀಯರು ಬಲಿಬಿದ್ದರೂ ಅಖ್ಲಾಕ್, ಅವಾರ್ಡ್ ವಾಪಸಿಯಂಥ ಒಂದಿಲ್ಲೊಂದು ನಾಟಕದ ಮೂಲಕ 2018ರ ಚುನಾವಣೆಯಲ್ಲಿ ಪ್ರಗತಿಪರರು ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತಂದುಕೂರಿಸಲಿದ್ದಾರೆ. ಎಚ್ಚರಗೊಳ್ಳಬೇಕಾದ್ದು ನಮ್ಮನಿಮ್ಮಂಥ ಜನಸಾಮಾನ್ಯರು.

Comments

comments