ಪಾಕಿ ಉಗ್ರರಿಗೆ ಬೀಫ್ ಬಿರಿಯಾನಿ; ಅಮಾಯಕ ಹಿಂದೂಗಳಿಗೆ ಕಾಲಾಪಾನಿ! ಈ ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬೋದ್ಯಾವಾಗ?

ಭಾರತದ ವಿರುದ್ಧ ಹರಿಹಾಯಲು ಚೀನಾ ಸರ್ವಸನ್ನದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಹೊರಬಿದ್ದಾಗಲೇ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ತನ್ನ ಇಡೀ ಪರಿವಾರದ ಜೊತೆ ಚೀನಾದ ರಾಯಭಾರಿಯನ್ನು ಭೇಟಿಯಾಗುತ್ತಾರೆ. ನರೇಂದ್ರ ಮೋದಿ ಇನ್ನೇನು ಪ್ರಧಾನಿಯಾಗಿಯೇಬಿಡುತ್ತಾರೆ; ಅವರ ಗೆಲುವನ್ನು ತಡೆಯಲು ಸಾಧ್ಯವೇ ಇಲ್ಲವೆನ್ನುವ ಹಂತದಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಭೇಟಿಕೊಟ್ಟು ಅಲ್ಲಿಯ ರಾಜಕಾರಣಿಗಳಲ್ಲಿ ಹೇಳುತ್ತಾರೆ: ಬಿಜೆಪಿಯನ್ನು ಸೋಲಿಸಲು ನಮಗೆ ನಿಮ್ಮ ಸಹಾಯ ಬೇಕು! ನೀವು ನಮ್ಮ ಹೆಗಲೆಣೆಯಾಗಿ ನಿಂತರೆ ಮತ್ತೆ ಐದು ವರ್ಷ ಅಧಿಕಾರ ಹಿಡಿಯುವ ನಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು!

ಕಾಂಗ್ರೆಸ್ ಎಂಥ ಮನೆಹಾಳ ಪಕ್ಷ ಎಂಬುದನ್ನು ಸಾಬೀತುಪಡಿಸಲು ಹತ್ತಾರು ಉದಾಹರಣೆಗಳನ್ನೇನೂ ಕೊಡಬೇಕಿಲ್ಲ. ಒಂದು ದೃಷ್ಟಾಂತ ಕೊಡುತ್ತೇನೆ ನೋಡಿ. 2004ರಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ನಾಯಕತ್ವದ ಯುಪಿಎ ಸರಕಾರಕ್ಕೆ 2009ರಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆಯೇರುವ ಯಾವ ಭರವಸೆಯೂ ಇರಲಿಲ್ಲ. ಹಗರಣಗಳ ರಾಶಿ ರಾಶಿ ಮೈಮೇಲೆಳೆದುಕೊಂಡು ಅದು ಹೈರಾಣಾಗಿತ್ತು. ಆಗ, ಚುನಾವಣೆಗೆ ಒಂದು ವರ್ಷದ ಹಿಂದೆ ಆಗಿದ್ದೇ “ಕೇಸರಿ ಭಯೋತ್ಪಾದನೆ”ಯೆಂಬ ಹುಸಿಭೂತದ ಸೃಷ್ಟಿ. ಆಗ ನಡೆದುಹೋದ ನಾಲ್ಕು ಪ್ರಮುಖ ಭಯೋತ್ಪಾದಕ ಕೃತ್ಯಗಳು – ಮಾಲೇಗಾಂವ್ ಸ್ಫೋಟ, ಸಂಝೋತಾ ಎಕ್ಸ್‍ಪ್ರೆಸ್ ಸ್ಫೋಟ, ಮೆಕ್ಕಾ ಮಸೀದಿಯ ಮೇಲೆ ದಾಳಿ ಮತ್ತು ಅಜ್ಮೇರ್ ಶರೀಫ್ ಪ್ರಕರಣ. ಈ ನಾಲ್ಕು ಪ್ರಕರಣಗಳಲ್ಲಿ ಸತ್ತವರ ಒಟ್ಟು ಸಂಖ್ಯೆ 127. ಸಂಝೋತಾ ಎಕ್ಸ್‍ಪ್ರೆಸ್ ಸ್ಫೋಟ ಒಂದರಲ್ಲೇ ಹೆಣವಾಗಿ ಮಲಗಿದ ಅಮಾಯಕರ ಸಂಖ್ಯೆ 68. ಈ ದಾಳಿಗಳಾದ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಮಾಧ್ಯಮ ಎಂದು ಹೇಳಿಕೊಳ್ಳುವ ಇಂಗ್ಲೀಷ್ ಸುದ್ದಿವಾಹಿನಿಗಳು – ಮುಖ್ಯವಾಗಿ ಎನ್‍ಡಿಟಿವಿ ಮತ್ತು ಸಿಎನ್‍ಎನ್ ಐಬಿನ್ – ಮೇಲಿನ ನಾಲ್ಕು ದುರಂತಗಳನ್ನು ಹಿಂದೂ ಭಯೋತ್ಪಾದಕರ ಹಿಂಸಾಕೃತ್ಯಗಳು ಎಂದು ಬಿಂಬಿಸಿದವು. ಸ್ಯಾಫ್ರನ್ ಟೆರರ್ – ಕೇಸರಿ ಭಯೋತ್ಪಾದನೆ ಎಂಬ ಪದಪುಂಜ ಎಲ್ಲೆಲ್ಲೂ ಹಾರಾಡತೊಡಗಿತು. ಭಾರತದಲ್ಲಿ ನಡೆಯುತ್ತಿರುವ ಹಲವು ಬಾಂಬ್ ದಾಳಿ, ಸ್ಫೋಟ, ಅಮಾಯಕರ ಹತ್ಯೆಗಳಲ್ಲಿ ಕೇಸರಿ ಭಯೋತ್ಪಾದನೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎನ್ನುತ್ತ ಆ ಶಬ್ದಪುಂಜವನ್ನು ಮುನ್ನೆಲೆಗೆ ತಂದ ಮೊದಲಿಗ ಪಿ. ಚಿದಂಬರಮ್. ಗೃಹಖಾತೆ ನಿರ್ವಹಿಸುತ್ತಿದ್ದ ಸುಶೀಲ್‍ಕುಮಾರ್ ಶಿಂಧೆ ಇನ್ನಷ್ಟು ಮುಂದೆ ಹೋಗಿ, ದೇಶಾದ್ಯಂತ ಬಿಜೆಪಿ ಮತ್ತು ಆರೆಸ್ಸೆಸ್ ಟ್ರೈನಿಂಗ್ ಕ್ಯಾಂಪ್‍ಗಳಲ್ಲಿ ಭಯೋತ್ಪಾದನೆಯ ಪಾಠಗಳನ್ನು ಕಲಿಸಲಾಗುತ್ತಿದೆ ಎಂದುಬಿಟ್ಟರು! ಹಿಂದೂಗಳ ಮೇಲೆ ವಿಷಕಾರಲು ಸದಾ ತುದಿಗಾಲಲ್ಲಿ ನಿಂತಿರುವ, ಹಿಂದೂ ಹೆಸರಿನ ಮತಾಂತರಿತ ಕ್ರಿಶ್ಚಿಯನ್ ಆಗಿರುವ ದಿಗ್ವಿಜಯ ಸಿಂಗ್, “ಪ್ರತಿಯೊಬ್ಬ ಹಿಂದೂ ಭಯೋತ್ಪಾದಕ ಅಲ್ಲ ಎನ್ನುವುದನ್ನು ಒಪ್ಪೋಣ. ಆದರೆ ಸಿಕ್ಕಿಬೀಳುವ ಪ್ರತಿಯೊಬ್ಬ ಭಯೋತ್ಪಾದಕನೂ ಯಾಕೆ ಸಂಘಿಯೇ ಆಗಿರುತ್ತಾನೆ?” ಎಂದು ಕೇಳುವ ಮೂಲಕ ಶಿಷ್ಟಾಚಾರದ ಎಲ್ಲ ಎಲ್ಲೆಗಳನ್ನೂ ತಾನು ಮೀರಿಬಿಟ್ಟಿದ್ದೇನೆ ಎಂಬುದನ್ನು ಜಾಹೀರುಪಡಿಸಿದರು.

ಒಟ್ಟಿನಲ್ಲಿ ಇನ್ನೊಂದು ಅವಧಿಗೆ ಅಧಿಕಾರ ಹಿಡಿಯಲು ಸಾಧ್ಯವೇ ಇಲ್ಲ ಎನ್ನುವಂಥ ಸ್ಥಿತಿಯಲ್ಲಿದ್ದ ಯುಪಿಎಗೆ ಅತ್ಯಗತ್ಯವಾಗಿ ಪ್ರಾಣವಾಯು ಬೇಕಾಗಿತ್ತು. ಬೆಳೆಯುತ್ತಿದ್ದ ಬಿಜೆಪಿ ಜನಪ್ರಿಯತೆಯನ್ನು ಆರಂಭದಲ್ಲೇ ಬಗ್ಗುಬಡಿದು ಅದರ ಮುಖಕ್ಕೆ ಕಳಂಕ ಮೆತ್ತಬೇಕಾಗಿತ್ತು. ಜೊತೆಗೆ ಹಿಂದೂ ಎಂಬ ಧರ್ಮವೂ ಕಳಂಕಿತವೇ; ಅದೇನೂ ಹಿಂಸೆಯನ್ನು ಮೀರಿನಿಂತ ಧರ್ಮವಲ್ಲ; ಹೇಗೆ ಇಸ್ಲಾಂ ಜೊತೆ ಜೆಹಾದ್ ಎಂಬ ಪದ ಸಮೀಕರಿಸಲ್ಪಟ್ಟಿದೆಯೋ ಹಾಗೆಯೇ ಹಿಂದೂ ಧರ್ಮದಲ್ಲೂ ಭಯೋತ್ಪಾದನೆಯ ವಿಷಬೀಜವಿದೆ ಎಂಬುದನ್ನು ಸಾಬೀತುಪಡಿಸುವುದು ಕಾಂಗ್ರೆಸ್ ಪಾಲಿಗೆ ಅತ್ಯಗತ್ಯವಾಗಿತ್ತು. ಇಲ್ಲವಾದರೆ ತನ್ನ ಬಹುದೊಡ್ಡ ಅಲ್ಪಸಂಖ್ಯಾತ ಮತಬ್ಯಾಂಕ್ ಕೈ ಬಿಟ್ಟುಹೋಗುವ ಭಯ ಅದಕ್ಕಿತ್ತು. ಮಾಲೆಗಾಂವ್ ಸ್ಫೋಟದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನೂ ಸಂಝೋತಾ ರೈಲು ಸ್ಫೋಟದಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರನ್ನೂ ಫಿಕ್ಸ್ ಮಾಡಿದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ಕಾಂಗ್ರೆಸ್‍ನ ಕೆಲಸ ಸುಲಭ ಮಾಡಿದರು. ಇಬ್ಬರು ಹಿಂದೂಗಳಿಗೂ ಎಟಿಎಸ್ ಅಧಿಕಾರಿಗಳು ಕೊಟ್ಟಿರುವ ಚಿತ್ರಹಿಂಸೆಯನ್ನು ಕೇಳಿದರೆ ಯಾತನಾಶಿಬಿರಗಳನ್ನು ನಡೆಸಿದ ಹಿಟ್ಲರ್ ಕೂಡ ನಾಚಿಕೊಳ್ಳಬಹುದೇನೋ. ಕ್ಯಾನ್ಸರ್‍ನಿಂದ ನಲುಗುತ್ತಿದ್ದ ಪ್ರಜ್ಞಾ ಸಿಂಗ್ ಅವರಿಗೆ ಕೊಡಬಾರದ ಶಿಕ್ಷೆಯನ್ನೆಲ್ಲ ವಿಚಾರಣೆಯ ಹೆಸರಲ್ಲಿ ಕೊಟ್ಟು ಅರೆಜೀವ ಮಾಡಿದರೆ, ಅದಾಗಷ್ಟೇ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆ ಮಾಡಿಕೊಂಡು ಬಂದಿದ್ದ ಲೆಫ್ಟಿನೆಂಟ್ ಕರ್ನಲ್ ಅವರನ್ನು ವಿಚಾರಣೆಯ ಹೆಸರಲ್ಲಿ ಏರೋಪ್ಲೇನ್ ಹತ್ತಿಸಿದ ಅಧಿಕಾರಿಗಳು ಆಪರೇಶನ್‍ನಲ್ಲಿ ಹಾಕಿದ್ದ ಹೊಲಿಗೆ ಬಿಚ್ಚಿಕೊಳ್ಳುವಂತೆ ಮಾಡಿದ್ದರು!

ಅದಾಗಿ ಎಂಟು ವರ್ಷಗಳು ಕಳೆದಿವೆ. 2016ರ ಎಪ್ರೀಲ್‍ನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಮುಖ್ಯಸ್ಥ ಶರದ್ ಕುಮಾರ್ ಹೇಳಿದ್ದಾರೆ: ಸಂಝೋತಾ ಎಕ್ಸ್‍ಪ್ರೆಸ್ ಸ್ಫೋಟದ ಪ್ರಕರಣದಲ್ಲಿ ಪ್ರಸಾದ್ ಪುರೋಹಿತ್ ಅವರ ಯಾವ ಪಾತ್ರವೂ ಇರಲಿಲ್ಲ. ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಕೊಡಬಾರದ ಹಿಂಸೆಯನ್ನೆಲ್ಲ ಯಾಕೆ ಕೊಡಲಾಯಿತು ಎಂಬುದೇ ನಮಗೆ ಗೊತ್ತಿಲ್ಲ! ರೈಲುಸ್ಫೋಟದಲ್ಲಿ ನೇರವಾಗಿ ಭಾಗಿಯಾಗಿರುವವರು ಸಿಮಿ ಉಗ್ರರು ಎಂದು ವಿಶ್ವಸಂಸ್ಥೆಯ ತನಿಖಾ ವರದಿ ಹೇಳುತ್ತಿದೆ. ಇದರಲ್ಲಿ ಲಷ್ಕರೆ ತಯ್ಬಾ ಉಗ್ರರು ಕೂಡ ಕೈ ಜೋಡಿಸಿದ್ದರು ಎಂದು ಅಮೆರಿಕಾದ ಗುಪ್ತಚರ ವರದಿಯಲ್ಲಿ ಸಾಬೀತಾಗಿದೆ. ಒಟ್ಟಾರೆ ಹೇಳಬೇಕಾದರೆ ಈ ಸ್ಫೋಟದ ಹಿಂದಿನ ಪ್ರಮುಖ ರೂವಾರಿಗಳು ಪಾಕಿಸ್ತಾನದ ಭಯೋತ್ಪಾದಕರೇ ವಿನಾ ಪುರೋಹಿತ್ ಅಥವಾ ಯಾವ ಹಿಂದೂ ಅಧಿಕಾರಿ/ನಾಯಕ ಅಲ್ಲ. ಹಾಗಿರುವಾಗ ನಿಜವಾದ ಉಗ್ರರನ್ನು ಬೇಟೆಯಾಡುವುದನ್ನು ಬಿಟ್ಟು ಪುರೋಹಿತ್ ಮತ್ತಿತರರನ್ನು ಯಾಕೆ ಕಂಬಿಯ ಹಿಂದೆ ತಳ್ಳಲಾಯಿತು ಎಂಬುದು ಗೊತ್ತಾಗದ ವಿಷಯ!

ಇದಕ್ಕೆ ಮತ್ತಷ್ಟು ಪುಷ್ಟಿ ಕೊಡುವಂತೆ, ಪ್ರಕರಣದ ಪ್ರಮುಖ ರೂವಾರಿ ಎಂದು ಹೇಳಿ ಅಸೀಮಾನಂದ ಅವರನ್ನು ಎನ್‍ಐಎ ಅಧಿಕಾರಿಗಳು ಆರೇಳು ವರ್ಷಗಳ ಹಿಂದೆ ವಶಕ್ಕೆ ಪಡೆದಿದ್ದರು. ಅಸೀಮಾನಂದ ಅವರು ಒಂದು ಸಂದರ್ಶನ ಕೊಟ್ಟಿದ್ದಾರೆ. ಅದರಲ್ಲಿ, ಆರೆಸ್ಸೆಸ್ ನಾಯಕರಿಗೆ ಸ್ಫೋಟದ ಎಲ್ಲಾ ಮಾಹಿತಿ ಇತ್ತು; ಆರೆಸ್ಸೆಸ್‍ನ ಹಿರಿಯ ಮುಖಂಡರ ಅಪ್ಪಣೆ ಪಡೆದೇ ಸ್ಫೋಟ ನಡೆಸಲಾಗಿತ್ತು ಎಂಬ ಸತ್ಯವನ್ನು ಅಸೀಮಾನಂದ ಬಿಚ್ಚಿಟ್ಟಿದ್ದಾರೆ ಎಂದು ಹೇಳಲಾಗಿತ್ತು. 2010ರಲ್ಲಿ ನಡೆಯಿತೆನ್ನಲಾದ ಆ ಸಂದರ್ಶನವನ್ನು ಪತ್ರಿಕೆಯೊಂದು 2011ರಲ್ಲಿ ಪ್ರಕಟಿಸಿತ್ತು. ಆದರೆ ಅದಾಗಿ ಮೂರು ವರ್ಷಗಳ ನಂತರ, ಪತ್ರಿಕೆಯ ಆ ಸಂದರ್ಶನವೇ ಸುಳ್ಳು! ಸಂಪೂರ್ಣ ಕಪೋಲಕಲ್ಪಿತ ಕತೆ! 2010ರಲ್ಲಾಗಲೀ ಅದರ ಆಚೀಚಿನ ವರ್ಷಗಳಲ್ಲಾಗಲೀ ಯಾವ ಪತ್ರಕರ್ತರೂ ಅಸೀಮಾನಂದರನ್ನು ಭೇಟಿಯಾಗಿರಲಿಲ್ಲ; ಸಂದರ್ಶನ ಪಡೆಯುವುದಂತೂ ದೂರವೇ ಉಳಿಯಿತು. ಹಾಗಿರುವಾಗ ಅಸೀಮಾನಂದ ಅವರು ಸ್ಫೋಟವೆಲ್ಲವೂ ಆರೆಸ್ಸೆಸ್ ಸಂಚೇ ಆಗಿತ್ತು ಎಂದು ಹೇಳುವುದಾದರೂ ಹೇಗೆ? ಅಸೀಮಾನಂದ ಅವರಿಗೂ ಸ್ಫೋಟಕ್ಕೂ ಯಾವ ಸಂಬಂಧವೂ ಇಲ್ಲ ಎಂಬ ಸತ್ಯ ಹೊರಬಿತ್ತು.

2009ರಲ್ಲಿ, ಮಾಲೆಗಾಂವ್ ಮತ್ತು ಸಂಝೋತಾ ಸ್ಫೋಟಗಳು ನಡೆದ ಎರಡು ವರ್ಷಗಳ ತರುವಾಯ, ಅಮೆರಿಕಾದ ಟ್ರೆಷರಿ ಡಿಪಾರ್ಟ್‍ಮೆಂಟ್‍ನವರು ಒಂದು ತನಿಖಾ ವರದಿಯನ್ನು ಪ್ರಕಟಿಸಿದರು. ಆ ವರದಿಯ ಮುಖ್ಯಾಂಶ ಏನು ಗೊತ್ತೆ? ಆರಿಫ್ ಖಸ್ಮಾನಿ ಎಂಬಾತ ಪಾಕಿಸ್ತಾನದಲ್ಲಿದ್ದುಕೊಂಡು ಭಾರತದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳನ್ನು ನಿರ್ದೇಶಿಸುತ್ತಿದ್ದಾನೆ. ಅವನ ಕೈ ಕೆಳಗೆ ಅಮೀನ್ ಅಲ್ ಪೇಶಾವನಿ, ಯಾಹ್ಯಾ ಮುಜಾಹಿದ್ ಮತ್ತು ನಾಸಿರ್ ಜಾವೇದ್ ಎಂಬವರು ಕೆಲಸ ಮಾಡುತ್ತಿದ್ದಾರೆ. ಈ ಆರಿಫ್, ಅಲ್ ಖೈದಾ ಮತ್ತು ಲಷ್ಕರೆ ತಯ್ಬಾ ಎರಡೂ ಸಂಘಟನೆಗಳಿಗೆ ದುಡ್ಡು, ಶಸ್ತ್ರಾಸ್ತ್ರ ಮತ್ತು ಅಗತ್ಯವಾಗಿ ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸುತ್ತಿದ್ದಾನೆ. ಆ ಮೂಲಕ ಭಾರತದಲ್ಲಿ ನಡೆಯುವ ಎಲ್ಲ ಭಯೋತ್ಪಾದಕ ಕೃತ್ಯಗಳಿಗೂ ನೇರ ಕಾರಣನಾಗಿದ್ದಾನೆ. 2006ರಲ್ಲಿ 200 ಜನರನ್ನು ಬಲಿತೆಗೆದುಕೊಂಡ ಮುಂಬೈ ರೈಲುಸ್ಫೋಟದ ಪ್ರಮುಖ ರೂವಾರಿ ಈತನೇ – ಎಂದು ಆ ವರದಿ ಹೇಳಿತು. ಆರಿಫ್ ಕೆಳಗೆ ಕೆಲಸ ಮಾಡುತ್ತಿದ್ದ ಯಾಹ್ಯಾ, ಅಮೀನ್, ನಾಸಿರ್ ಏನೂ ಸಾಮಾನ್ಯದವರಲ್ಲ. ಯಾಹ್ಯಾ, ಲಷ್ಕರೆ ತಯ್ಬಾದ ವಕ್ತಾರನಾಗಿದ್ದವನು. ಲಷ್ಕರೆ ತಯ್ಬಾ ಮತ್ತು ಜಗತ್ತಿನ ಎಲ್ಲ ಸುದ್ದಿಮಾಧ್ಯಮಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದ್ದವನು ಈತ. 2001ರಲ್ಲಿ ಭಾರತದ ಪಾರ್ಲಿಮೆಂಟ್ ಮೇಲಿನ ದಾಳಿ ಮತ್ತು 2008ರಲ್ಲಿ ಮುಂಬೈ ದಾಳಿಯ ಸಂದರ್ಭದಲ್ಲಿ ಲಷ್ಕರೆ ತಯ್ಬಾ ಪರವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದವನು ಇವನೇ. ಇವನ ಜೊತೆ ಕೆಲಸ ಮಾಡುತ್ತಿದ್ದ ನಾಸಿರ್ ಲಷ್ಕರೆ ತಯ್ಬಾದ ಕಮಾಂಡರ್. ಪ್ರತಿ ವರ್ಷವೂ ನೂರಾರು ಭಯೋತ್ಪಾದಕರನ್ನು ತಯಾರಿಸಿ ಭಾರತದೊಳಕ್ಕೆ ನುಗ್ಗಿಸುತ್ತಿದ್ದವನು. ಭಾರತದಲ್ಲಿ ಹಲವು ವರ್ಷಗಳನ್ನು ಕಳೆದಿದ್ದ ಈತನಿಗೆ ಈ ದೇಶದ ಉದ್ದಗಲಗಳ ಪರಿಚಯ ಚೆನ್ನಾಗಿಯೇ ಇತ್ತು. ಇವರಿಷ್ಟೂ ಜನ ಸಂಝೋತಾ ರೈಲು ಸ್ಫೋಟದ ಹಿಂದಿದ್ದ ವಿಚ್ಛಿದ್ರ ಶಕ್ತಿಗಳು ಎಂದು ಅಮೆರಿಕಾದ ಆ ವರದಿ 2009ರಲ್ಲೇ ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ಹೇಳಿತ್ತು. ಆದರೆ ಭಾರತದ ಸರಕಾರ, ಭಾರತದ ಗುಪ್ತಚರ ಇಲಾಖೆ, ಭಾರತದ ಮಾಧ್ಯಮಗಳು, ಭಾರತದ ರಾಜಕಾರಣಿಗಳು ಎಲ್ಲರೂ ಈ ವರದಿಗೆ ಕುರುಡಾಗಿದ್ದರು. ಅಮೆರಿಕಾದ ಆ ವರದಿ ಪ್ರಕಟವಾಗಿ ಸಂಚಲನ ಎಬ್ಬಿಸಬೇಕಿದ್ದ ಹೊತ್ತಿನಲ್ಲಿ ಇಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಪಡಬಾರದ ಕಷ್ಟಗಳನ್ನೆಲ್ಲ ವಿಚಾರಣೆಯ ಹೆಸರಿನಲ್ಲಿ ಎದುರಿಸುತ್ತ ಜೀವಚ್ಛವವಾಗಿಹೋಗಿದ್ದರು.

ಈಗ ಕತೆಯ ಕ್ಲೈಮಾಕ್ಸ್ ಭಾಗಕ್ಕೆ ಬರೋಣ. ನಾಲ್ಕು ದಿನಗಳ ಹಿಂದೆಯಷ್ಟೇ ಇಂಗ್ಲೀಷ್ ಸುದ್ದಿವಾಹಿನಿಯೊಂದಕ್ಕೆ ಒಂದು ವಿಡಿಯೋ ದಾಖಲೆ ಸಿಕ್ಕಿದೆ. ಎಂಟು ವರ್ಷಗಳ ಹಿಂದೆಯೇ ಪಾಕಿಸ್ತಾನೀ ಭಯೋತ್ಪಾದಕನೊಬ್ಬನ ಮೇಲೆ ಎನ್‍ಐಎ ಅಧಿಕಾರಿಗಳು ಮಂಪರು ಪರೀಕ್ಷೆ ನಡೆಸಿದ್ದ ರಹಸ್ಯ ವಿಡಿಯೋ ಅದು. ಮಂಪರು ಪರೀಕ್ಷೆಗೆ ಗುರಿಯಾಗಿದ್ದವನು ಸಫ್ದರ್ ನಗೋರಿ ಎಂಬ ಖತರ್ನಾಕ್ ಭಯೋತ್ಪಾದಕ. ಭಾರತದಲ್ಲಿ ಮೂಲಭೂತವಾದಿ ಸಿಮಿ ಸಂಘಟನೆಯ ಮುಖ್ಯಸ್ಥನಾಗಿದ್ದವನು ಎಂದರೆ ಆತನ ಕರಾಳತೆಯ ಅಲ್ಪಸ್ವಲ್ಪ ಪರಿಚಯವಾದರೂ ಆದೀತು. ದೇಶದ ಅತ್ಯಂತ ಭದ್ರ ಕಾರಾಗೃಹಕ್ಕೆ ಹಾಕಿದಾಗ ಕೂಡ ಅಲ್ಲಿಂದಲೇ ಸುರಂಗ ಕೊರೆದು ಹೊರಹೋಗಲು ಪ್ರಯತ್ನಪಟ್ಟಿದ್ದ ಮಹಾಕಳ್ಳ ಈತ. ಸಂಝೋತಾ ಸ್ಫೋಟದಲ್ಲಿ ನೇರವಾಗಿ ಭಾಗಿಯಾಗಿದ್ದ ಈತನನ್ನು ಎನ್‍ಐಎ ಅಧಿಕಾರಿಗಳು ರಹಸ್ಯವಾಗಿ ಬಂಧಿಸಿದ್ದರು. ಸಂಝೋತಾ ಸ್ಫೋಟ ನಡೆದ ಕೆಲವೇ ತಿಂಗಳಲ್ಲಿ ನಡೆದಿರಬಹುದಾದ ಮಂಪರು ಪರೀಕ್ಷೆಯಲ್ಲಿ ಸಫ್ದರ್ ನಗೋರಿ, ಸಂಝೋತಾ ಸ್ಫೋಟ ನಡೆಸಿದ್ದು ಪಾಕಿಸ್ತಾನದಿಂದ ಅಪಾರ ಪ್ರಮಾಣದ ದುಡ್ಡು ಮತ್ತು ಶಸ್ತ್ರಾಸ್ತ್ರ ಸಹಾಯ ಪಡೆದ ಉಗ್ರರು. ಸ್ಫೋಟ ನಡೆಸಿದ ಪ್ರಮುಖ ವ್ಯಕ್ತಿ ಅಬ್ದುಲ್ ರಝಾಕ್. ಆತನೊಂದಿಗೆ ತನಗೆ ನಿಕಟ ಸಂಬಂಧ ಇತ್ತು. ತಾನು (ಅಂದರೆ ಸಫ್ದರ್) ಪಾಕಿಸ್ತಾನದಿಂದ ದುಡ್ಡು ಪಡೆದು ಆರಾಮಾಗಿದ್ದೇನೆ, ಸರಿಯಾಗಿ ಜೆಹಾದ್ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ ಎಂದು ರಝಾಕ್ ಆಗಾಗ ಆರೋಪ ಮಾಡುತ್ತಿದ್ದ. ನಿನಗೆ ಸಾಧ್ಯವಿಲ್ಲವಾದರೆ ನಾನೇ ನೇರವಾಗಿ ದೊಡ್ಡ ಕೃತ್ಯದಲ್ಲಿ ಭಾಗಿಯಾಗುತ್ತೇನೆ ಎನ್ನುತ್ತಿದ್ದ. ಸಂಝೋತಾ ಸ್ಫೋಟವನ್ನು ತಾನೂ ಆತನೂ ಸೇರಿಯೇ ರೂಪಿಸಿದೆವು. ರೈಲಿನ ಸ್ಫೋಟದಲ್ಲಿ ತಾನು ಕೂಡ ಕೈಗೆ ಏಟು ತಿಂದು ಆಸ್ಪತ್ರೆ ಸೇರಿದೆ. ಕಾಲುಗಳಿಗೆ ಕೂಡ ದೊಡ್ಡ ಮಟ್ಟದ ಗಾಯ ಆಗಿತ್ತು. ಅವುಗಳನ್ನು ಮಡಚಲು ಆಗುತ್ತಿರಲಿಲ್ಲ. ಟಾಯ್ಲೆಟ್‍ನ ಬಾಗಿಲು ಹಾಕದೆ ಕೂರುವಂತಾಗಿತ್ತು. ಒಟ್ಟಾರೆ ಸಂಝೋತಾ ಸ್ಫೋಟದ ಸಂಪೂರ್ಣ ಹೊಣೆಗಾರಿಕೆ ಅಬ್ದುಲ್ ರಝಾಕ್ ಮತ್ತು ಆತನ ಬೆನ್ನಿಗೆ ನಿಂತ ಲಷ್ಕರೆ ತಯ್ಬಾ, ಸಿಮಿ ಮುಂತಾದ ಸಂಘಟನೆಗಳದ್ದೇ – ಎಂದು ಒಪ್ಪಿಕೊಂಡಿದ್ದ.

ಈ ಸಫ್ದರ್ ನಗೋರಿಗೆ ಪಾಕಿಸ್ತಾನದಲ್ಲಿದ್ದು ಭಾರತಕ್ಕೆ ಭಯೋತ್ಪಾದಕರನ್ನು ರಫ್ತು ಮಾಡುತ್ತಿದ್ದ ನಾಸಿರ್ ಜೊತೆ ನಿಕಟ ಸಂಪರ್ಕ ಇತ್ತು. ಸಂಝೋತಾ ಸ್ಫೋಟವಾಗುವ ಕೆಲವೇ ದಿನಗಳ ಮುಂಚೆ ಸಫ್ದರ್‍ಗೆ ನಾಸಿರ್, ಎಕೆ 47 ಬಂದೂಕು ಬೇಕಾ? ಬೇಕಾದರೆ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದ! ಯುಪಿಎ ಸರಕಾರದ 2004-09 ಅವಧಿಯಲ್ಲೇ ನಡೆದಿರಬಹುದಾದ ಈ ಮಂಪರು ಪರೀಕ್ಷೆಯ ಸಂಪೂರ್ಣ ವಿವರಗಳು ಆ ಸರಕಾರದ ಉನ್ನತ ನಾಯಕರಿಗೆ ಇರಲಿಲ್ಲ ಎಂದು ನಂಬಲು ಕಾರಣಗಳೇ ಇಲ್ಲ! ಭಾರತದಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆಗಳನ್ನು ಭಾರತಕ್ಕಿಂತ ಹೆಚ್ಚು ಸೂಕ್ಷ್ಮವಾಗಿ ಮತ್ತು ಸಮಗ್ರವಾಗಿ ಗ್ರಹಿಸಬಲ್ಲ ಅಮೆರಿಕಾ ಸರಕಾರ ತಾನು ಕಂಡುಕೊಂಡ ಸತ್ಯಗಳನ್ನು ಭಾರತದ ಸರಕಾರದ ಜೊತೆ ಹಂಚಿಕೊಳ್ಳಲಿಲ್ಲ ಎನ್ನಬೇಕೆ? ಭಾರತ-ಅಮೆರಿಕಾ ಎರಡೂ ದೇಶಗಳ ಸಾಮಾನ್ಯ ಸಮಸ್ಯೆಯೇ ಭಯೋತ್ಪಾದನೆ ಆಗಿರುವಾಗ ಸಂಝೋತಾ ಸ್ಫೋಟದ ಪ್ರಮುಖ ರೂವಾರಿಗಳ ಹೆಸರನ್ನು ಅಮೆರಿಕಾ ನಮ್ಮ ದೇಶದ ಸರಕಾರದ ಜೊತೆ ಹಂಚಿಕೊಳ್ಳದೇ ಇದ್ದೀತೇ? ಬಿಡಿ, ಭಾರತದೊಳಗಿನ ಗುಪ್ತಚರ ಇಲಾಖೆ ಕೊಡುವ ಸತ್ಯನಿಷ್ಠ ವರದಿ ಗೃಹಸಚಿವರ ಟೇಬಲ್ಲಿಗೆ ಹೋಗೋದಿಲ್ಲವೆ? ಎಲ್ಲ ಗುಪ್ತಚರ ವರದಿಗಳೂ ಸಂಝೋತಾ ಸ್ಫೋಟದ ರೂವಾರಿಗಳು ಎಂದು ತೋರಿಸುತ್ತಿದ್ದದ್ದು ಲಷ್ಕರೆ ತಯ್ಬಾ, ಸಿಮಿ, ಅಲ್ ಖೈದಾ ಸಂಘಟನೆಗಳತ್ತ. ಅವುಗಳನ್ನು ಮುನ್ನಡೆಸುತ್ತಿದ್ದ ಆರಿಫ್, ಅಬ್ದುಲ್ ರಝಾಕ್ ಮುಂತಾದವರತ್ತ. ಭಾರತದಲ್ಲಿ ನಡೆದ ಹಲವು ಸ್ಫೋಟ ಪ್ರಕರಣಗಳಲ್ಲಿ ಆರಿಫ್, ದಾವೂದ್‍ನಿಂದ ದುಡ್ಡು ಪಡೆದಿದ್ದ ಎಂಬ ಮಾಹಿತಿಯನ್ನೂ ನಮ್ಮ ಗುಪ್ತಚರ ವರದಿ ಹೇಳುತ್ತಿತ್ತು. ಅಂಥ ದಾವೂದ್ ಬೆಂಬಲದ ಸ್ಫೋಟಗಳ ಪಟ್ಟಿಯಲ್ಲಿ ಸಂಝೋತಾ ಕೂಡ ಇತ್ತು!

ಈ ಎಲ್ಲ ಸತ್ಯಗಳು ಗೊತ್ತಿದ್ದೂ ಯುಪಿಎ ಸರಕಾರ ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ ಎಂಬ ಹೊಸ ಪದಪುಂಜಗಳನ್ನು ಸೃಷ್ಟಿಸುವ ಕೆಲಸಕ್ಕೆ ಕೂತುಬಿಟ್ಟಿತು! ಯಾಕೆಂದರೆ ಭಾರತದಲ್ಲಿ ತಮಗೆ ಮತ ಹಾಕುವ ಒಂದು ನಿರ್ದಿಷ್ಟ ಸಮುದಾಯವನ್ನು ಸಾಧ್ಯವಾದಷ್ಟೂ ಓಲೈಕೆ ಮಾಡಿ ತಮ್ಮ ಬುಟ್ಟಿಯಲ್ಲಿ ಉಳಿಸಿಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್‍ಗಿತ್ತು. ಅದೂ ಅಲ್ಲದೆ ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ತಾನು ಹಿಂದೂಗಳ ವಿರೋಧಿಯಾದರೂ ಪರವಾಯಿಲ್ಲ ಎಂಬ ದಿಟ್ಟ ಹೆಜ್ಜೆಯನ್ನು ಅದು ತೆಗೆದುಕೊಂಡಿತು. ನಿಮಗೆ ಆಶ್ಚರ್ಯವಾಗಬಹುದು; ಸಂಝೋತಾ ಮತ್ತು ಮಾಲೆಗಾಂವ್ ಪ್ರಕರಣಗಳಲ್ಲಿ ಹಿಂದೂ ನಾಯಕರ ಕೈವಾಡ ಇಲ್ಲ, ಅವೆರಡೂ ಸಂಪೂರ್ಣವಾಗಿ ಇಸ್ಲಾಮಿಕ್ ಮೂಲಭೂತವಾದಿಗಳ ಕೃತ್ಯ ಎಂಬುದು ಸಾಬೀತಾದ ಮೇಲೂ ಪಿ. ಚಿದಂಬರಂ, 2010ರಲ್ಲಿ ಭಾರತದಾದ್ಯಂತ ಕೇಸರಿ ಭಯೋತ್ಪಾದನೆ ತಾಂಡವವಾಡುತ್ತಿದೆ ಎಂಬ ಹೇಳಿಕೆ ಕೊಟ್ಟಿದ್ದರು. ಸಿಕ್ಕಿಬೀಳುವ ಪ್ರತಿಯೊಬ್ಬ ಭಯೋತ್ಪಾದಕನೂ ಸಂಘೀಯೇ ಯಾಕೆ ಎಂದು ದಿಗ್ವಿಜಯ ಸಿಂಗ್ ಪ್ರಶ್ನೆ ಕೇಳಿದ್ದು 2013ರ ಸೆಪ್ಟೆಂಬರ್‍ನಲ್ಲಿ! ಆರೆಸ್ಸೆಸ್ ಶಾಖೆಗಳಲ್ಲಿ ಭಯೋತ್ಪಾದಕರಿಗೆ ತರಬೇತಿ ಕೊಡಲಾಗುತ್ತಿದೆಯೆಂಬ ಮಾತನ್ನು ಶಿಂಧೆ ಹೇಳಿದ್ದು 2013ರ ಜನವರಿಯಲ್ಲಿ. ಅಂದರೆ ಅದಾಗಲೇ ಪ್ರಾರಂಭವಾಗಿದ್ದ ಮೋದಿ ಅಲೆಯನ್ನು ಹೇಗಾದರೂ ಮಾಡಿ ತಡೆದುನಿಲ್ಲಿಸುವುದಕ್ಕೆ ಕಾಂಗ್ರೆಸಿಗರಿಗೆ ಉಳಿದಿದ್ದ ಏಕೈಕ ಅಸ್ತ್ರ, ಕೇಸರಿ ಭಯೋತ್ಪಾದನೆ ಇದೆ ಎಂದು ಜನರನ್ನು ಭ್ರಮೆಗೊಳಿಸುವುದು ಮಾತ್ರ! ಒಂದಷ್ಟು ಹಿಂದೂ ನಾಯಕರನ್ನು ಬಂಧಿಸಿ, ಚಿತ್ರಹಿಂಸೆಗೆ ಗುರಿಪಡಿಸಿ, ವಿಚಾರಣೆಯ ಹೆಸರಲ್ಲಿ ಹಣ್ಣುಗಾಯಿ ನೀರುಗಾಯಿ ಮಾಡಿ, ಸಾಧ್ಯವಾದರೆ ಕೊಂದು ಕೇಸರಿ ಭಯೋತ್ಪಾದನೆಯ ಅಸ್ತಿತ್ವವನ್ನು ಸಾಬೀತುಪಡಿಸುವ ಅನಿವಾರ್ಯತೆಗೆ ಬಿದ್ದಿತ್ತು ಕಾಂಗ್ರೆಸ್. ಒಂದು ರಾಜಕೀಯ ಪಕ್ಷ ಇದಕ್ಕಿಂತ ಕೀಳುಮಟ್ಟಕ್ಕೆ, ಅಧರ್ಮದ ಪಾತಾಳಕ್ಕೆ ಇಳಿಯುವುದು ಸಾಧ್ಯವಿದೆಯೇ? ಸುಳ್ಳು ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ತಮ್ಮ ಜೀವನದ ಅಮೂಲ್ಯ ವರ್ಷಗಳನ್ನೇ ಹಾಳು ಮಾಡಿಕೊಂಡ ಪ್ರಜ್ಞಾ ಸಿಂಗ್, ಅಸೀಮಾನಂದ, ಪ್ರಸಾದ್ ಪುರೋಹಿತ್ ಮತ್ತು ಇನ್ನೂ ಹಲವಾರು ಜನರಿಗಾದ ಅನ್ಯಾಯವನ್ನು ಸರಿಪಡಿಸುವರು ಯಾರು? ಅವರು ಕಳೆದುಕೊಂಡ ಮಾನಸಿಕ ನೆಮ್ಮದಿಯನ್ನೂ ಆಯುಷ್ಯದ ಅಮೂಲ್ಯ ಸಮಯವನ್ನೂ ಬದುಕಿನ ಗೌರವವನ್ನೂ ಮರಳಿಕೊಡುವವರು ಯಾರು? ಅಧಿಕಾರದಲ್ಲಿ ಉಳಿಯಬೇಕೆಂಬ ಏಕೈಕ ಹಪಹಪಿಗೆ ಬಿದ್ದ ಪಕ್ಷವೊಂದು ತನ್ನದೇ ದೇಶದೊಳಗಿನ ಪ್ರಜೆಗಳನ್ನು ಭಯೋತ್ಪಾದಕರಾಗಿ ಬಿಂಬಿಸಿ, ನಿಜವಾದ ಭಯೋತ್ಪಾದಕರನ್ನು ಬಿರಿಯಾನಿ ಕೊಟ್ಟು ಸಲಹುತ್ತದೆ ಎಂದಾದರೆ ಆ ಪಕ್ಷಕ್ಕೂ ಭಯೋತ್ಪಾದಕ ಸಂಘಟನೆಗಳಿಗೂ ಏನು ವ್ಯತ್ಯಾಸ?!

Comments

comments