ಮತ್ತೊಂದು ಮೈಲಿಗಲ್ಲನ್ನು ತಲುಪಿದ ವೇದವತಿ ಪುನಶ್ಚೇತನ ಯೋಜನೆಯು ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿದ ಗುರುದೇವ್ ಶ್ರೀ ಶ್ರೀ ರವಿಶಂಕರ್

Chikmagalur, August 3rd: ಕರ್ನಾಟಕದ ಬಹುತೇಕ ಭಾಗ ನೀರಿನ ಅಭಾವದಿಂದ ಬಳಲುತ್ತಿರುವಾಗ ಮತ್ತು ಕಾವೇರಿ ಯು ವಿವಾದದಲ್ಲಿ ಸಿಲುಕಿರುವಾಗ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗದ ವೇದವತಿ ನದಿಯ ದಡದಲ್ಲಿ ಆಶಾಕಿರಣ ಮೂಡುತ್ತಿದೆ. ಆರ್ಟ್ ಆಫ್ ಲಿವಿಂಗ್ ನಡೆಸುತ್ತಿರುವ ಸತತ ಯತ್ನದಿಂದಾಗಿ , ನದಿಗಳನ್ನು ವೈಜ್ಞಾನಿಕವಾಗಿ ಪುನಶ್ಚೇತನ ಗೊಳಿಸಿ ಅಂತರ್ಜಲದ ನೀರಿನ ಮಟ್ಟ ಹೆಚ್ಚುವಂತೆ ಮಾಡಲಾಗುತ್ತಿರುವ ಕಾರ್ಯದಿಂದಾಗಿ ಈ ಮೂರು ಜಿಲ್ಲೆಗಳಲ್ಲಿ ನೀರಿನ ಕಥೆಯು ವಿಶಿಷ್ಟ ವಾಗಿ ರೂಪುಗೊಳ್ಳುತ್ತಿದೆ.

ಬುಧವಾರದಂದು ಗುರುದೇವ್ ಶ್ರೀ ಶ್ರೀ ರವಿಶಂಕರರು ಚಿಕ್ಕಮಗಳೂರಿನ ಸುತ್ತಮುತ್ತಲೂ ನಡೆಯುತ್ತಿರುವ ವೇದವತಿ ನದಿಯ ಪುನಶ್ಚೇತನ ಕಾರ್ಯಗಳನ್ನು ವೀಕ್ಷಿಸಲು ಬಂದಿದ್ದರು. ಈಗಾಗಲೇ ನಡೆಯುತ್ತಿರುವ ಯೋಜನೆಯ ಫಲಾನುಭವಿಗಳಾದ ರೈತರ, ಗ್ರಾಮಸ್ಥರನ್ನು ಭೇಟಿ ಮಾಡಿ ಅವರ ಸಂತೋಷವನ್ನು ಹಂಚಿಕೊಂಡರು.

6786 ರೀಚಾರ್ಜ್ ಕಟ್ಟಡಗಳ ಜಾಲವನ್ನು ಸಮುದಾಯದ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಯೋಜನೆಯ ಸಂಯೋಜಕರನ್ನು ಮತ್ತು ಸ್ವಯಂಸೇವಕರನ್ನು ಗುರುದೇವರು ಶ್ಲಾಘಿಸಿದರು.
ಚಿಕ್ಕಮಗಳೂರಿನ ಬಿರೇನಹಳ್ಳಿಯ ರೈತರಾದ ತಮ್ಮೇಗೌಡರ ಬೋರ್ವೆಲ್ ನಲ್ಲಿ ಹತ್ತು ವರ್ಷಗಳಿಂದ ನೀರಿರಲಿಲ್ಲ. ” ಆರ್ಟ್ ಆಫ್.ಲಿವಿಂಗ್ ನವರು ರೀಚಾರ್ಜ್ ಕಟ್ಟಡವನ್ನು ನನ್ನ ತೋಟದ ಬಳಿ ನಿರ್ಮಿಸಿದ್ದರಿಂದ 450ಅಡಿಗಳಿಗೆ ಸಿಗುತ್ತಿದ್ದ ನೀರು ಈಗ ಮೂವತ್ತು ಅಡಿಗಳಿಗೇ ಬರಲಾರಂಭಿಸಿದೆ. ಹಿಂದೆ ನನಗೆ 30,000 ದಿಂದ 40,000 ರೂಪಾಯಿ ಲಾಭ ಬರುತ್ತಿತ್ತು. ಈಗ ಒಂದುವರೆಯಿಂದ ಎರಡು ಲಕ್ಷಗಳವರೆಗೆ ಲಾಭ ಪಡೆಯುತ್ತಿದ್ದೇನೆ, ಏಕೆಂದರೆ ನಾನು ವಿಧವಿಧವಾದ ಬೆಳೆಗಳನ್ನು ಈಗ ಬೆಳೆಸುತ್ತಿದ್ದೇನೆ” ಎಂದು ಹಂಚಿಕೊಳ್ಳುತ್ತಾರೆ.

ರಙತರೊಡನೆ, ಸ್ಥಳೀಯ ಅಧಿಕಾರಿಗಳೊಡನೆ ಮತ್ತು ಮಾಧ್ಯಮದವರೊಡನೆ ಮಾತನಾಡಿದ ಗುರುದೇವರು, ಬೇವು, ಬಾಳೆಹಣ್ಣು, ಕದಂಬ, ಆಲದ ಮರಗಳಂತಹ ಮರಗಳನ್ನು ಬೆಳೆಸಿ ನೀರನ್ನು ಆಕರ್ಷಿಸಬೇಕು. ನೀಲಗಿರಿ ಮತ್ತು ಅಕೆಷಿಯ ಮರಗಳನ್ನು ಬೆಳೆಸಿದರೆ ಅದರಿಂದ ಅಂತರ್ಜಲದ ಮಟ್ಟ ತೀವ್ರವಾಗಿ ಕುಗ್ಗುತ್ತದೆಂದು ಹೇಳಿದರು. ಕೆರೆಗಳ ಡಿನೋಟಿಫಿಕೇಷನ್ ಅನ್ನು ತಾವು ಸಮ್ಮತಿಸುವುದಿಲ್ಲವೆಂದು ಹೇಳಿದ ಗುರುದೇವರು, ಅತಿ ಸಣ್ಣ ನೀರಿನ ಕುಂಟೆಯಾದರೂ ಅದನ್ನು ಸಂರಕ್ಷಿಸಬೇಕೆಂದರು.

ವೆದವತಿ ನದಿಯ ಪುನಶ್ಚೇತನಕ್ಕಾಗಿ ಮತ್ತು ಕಾಡನ್ನು ಪುನಃ ಬೆಳೆಸುವ ಸಲುವಾಗಿ ಸಮಗ್ರವಾದ ರೀತಿಯಲ್ಲಿ, ಜಿಯೊಹೈಡ್ರಾಲಜಿ ತಜ್ಞರೊಡನೆ, ಉಪಗ್ರಹದ ಚಿತ್ರಗಳನ್ನು ಅರಿರಬಲ್ಲ ತಜ್ಞರೊಡನೆ ಮತ್ತು ಅನೇಕ ಸಮೂದಾಯಗಳಿಗೆ ಸೇರಿದ ಸ್ವಯಂಸೇವಕರೊಡನೆ ಕೆಲಸವನ್ನು ನಿರ್ವಹಿಸಲಾಗುತ್ತಿದೆ.

ಚಿಕ್ಕಮಗಳೂರಿನ ಜಿಲ್ಲಾ ಪರಿಷತ್ತಿನ ಅಧ್ಯಕ್ಷೆಯಾದ ಶ್ರೀಮತಿ ಬಿ.ಚೈತ್ರಶ್ರೀಯವರು, ” ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರು ರೈತರ ಸಹಾಯಕ್ಕಾಗಿ ಕೈಗೊಂಡಿರುವ ಕಾರ್ಯದಿಂದ ನನಗೆ ಬಹಳ ಸಂತೋಷವಾಗಿದೆ. ಪುನಶ್ಚೇತನ ಕಾರ್ಯದಿಂದಾಗಿ ನೀರಿನ ಮಟ್ಟ ಏರುತ್ತಿರುವುದನ್ನು ನಾವು ಈಗಾಗಲೇ ಕಾಣುತ್ತಿದ್ದೇವೆ”ಎಂದರು.ಕಡೂರು ತಾಲ್ಲೂಕಿನ ಆಡಳಿತಾಧಿಕಾರಿಯಾದ ಶ್ರೀ ರೇವಣ್ಣರವರು ಆರ್ಟ್ ಆಫ್ ಲಿವಿಂಗ್ ನ ವೇದವತಿ ನದಿ ಪುನಶ್ಚೇತನ ಕಾರ್ಯವನ್ನು ಶ್ಲಾಘಿಸುತ್ತಾ, “”ಇದೊಂದು ಅತ್ಯುತ್ತಮವಾದ ಯೋಜನೆ ಮತ್ತು ಈಗ ಬಹಳ ಪ್ರಸಕ್ತವಾದದ್ದು, ಏಕೆಂದರೆ ಕಳೆದ ಮೂರು ವರ್ಷಗಳಿಂದ ಮಳೆಯಾಗಿಲ್ಲ. ಈ ಕೆಲಸವನ್ನು ಈಗ ಮಾಡದಿದ್ದರೆ, ಮುಂದಿನ ಪೀಳಿಗೆಗೆ ಜೀವನವೇ ಇಲ್ಲ”ಎಂದರು.

ಆರ್ಟ್ ಆಫ್ ಲಿವಿಂಗ್ ನ ನದಿಗಳ ಪುನಶ್ಚೇತನ ಯೋಜನೆಗಳ ಮುಖ್ಯಸ್ಥರಾದ ಡಾ. ಲಿಂಗರಾಜು ಯಾಳೆಯವರು, ವ್ಯಾಪಕವಾದ ವೈಜ್ಞಾನಿಕ ಯೋಜನೆಯಿಂದಾಗಿ ಪುನಶ್ಚೇತನದ ಕಾರ್ಯ ನಡೆಯುತ್ತಿದೆ ಎಂದು ಹೇಳಿ, ” ನದಿಯ ಮೂಲದಲೀ ಮಳೆನೀರಿನ ಹರಿತವನ್ನು ನಿಧಾನಿಸಿ, ಆ ನೀರು ಭೂಮಿಯೊಳಗೆ ನಮ್ಮ ಬೌಲ್ಡರ್ಇಂ ಚೆಕ್ಗು ಗಳ ಮೂಲಕ ಹಾಗೂ ರೀಚಾರ್ಜ್ ಬಾವಿಗಳ ಮೂವಕ ಭೂಮಿಯೊಳಗೆ ಇಂಗುವಂತೆ ಮಾಡುತ್ತೇವೆ. ಉಪಗ್ರಹದ ಸಹಾಯದಿಂದ ಭೂಮಿಯೊಳಗಿನ ಬಿರುಕುಗಳನ್ನು ಕಂಡುಹಿಡಿದು, ಇಂಜೆಕ್ಷನ್ ಬೋರ್ವೆಲ್ಗಳನ್ನು ನಿರ್ಮಿಸಿ ಅಂತರ್ಜಲದ ನೀರಿನ ಮಟ್ಟವನ್ನು ಏರಿಸುತ್ತಿದ್ದೇವೆ'” ಎಂದರು.

ಮಾಧ್ಯಮದವರೊಡನೆ ಚಿಕ್ಕಮಗಳೂರಿನಲ್ಲಿ ಮಾತನಾಡಿದಾಗ ಗುರುದೇವರು, “ಈ ತಂತ್ರಜ್ಞಾನವನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಕು. ಕಾವೇರಿ ನದಿ ವಿವಾದವನ್ನು ಬಗೆಹರಿಸಲು ತಮಿಳುನಾಡಿನ ನದಿಗಳ ಪುನಶ್ಚೇತನ ಆಗಬೇಕಿದೆ. ಆದ್ದರಿಂದ ನದಿ ಪುನಶ್ಚೇತನ ದ ಈ ತಂತ್ರಜ್ಞಾನವನ್ನು ತಮಿಳುನಾಡಿಗೂ ತೆಗೆದುಕೊಂಡು ಹೋಗಿದ್ದೇವೆ” ಎಂದರು. 2015ರಿಂದ ಆರ್ಟ್ ಆಫ್ ಲಿವಿಂಗ್ ತಮಿಳುನಾಡಿನ ನಾಗನದಿಯ ಪುನಶ್ಚೇತನ ಕಾರ್ಯವನ್ನು ಆರಂಭಿಸಿದ್ದು, ಈಗ ಫಲಿತಾಂಶ ಬರಲಲಾರಂಭಿಸಿದೆ.

ಗುರುದೇವರ ವೇದವತಿ ಪುನಶ್ಚೇತನ ಯೋಜನೆಯ ಸ್ಥಳಕ್ಕೆ ನೀಡಿರುವ ಭೇಟಿಯು ನಡೆಯುತ್ತಿರುವ ಕೆಲಸಗಳಿಗೆ ಮತ್ತಷ್ಟು ಉತ್ತೇಜನ ದೊರಕಲಿದೆ. ಈ ಯೋಜನೆಯಿಂದ 15 ಲಕ್ಷ ಜನರು ಲಾಭ ಪಡೆಯಲಿದ್ದಾರೆ. ಭೇಟಿಯ ಸಮಯದಲ್ಲಿ ಚಿಕ್ಕಮಗಳೂರಿನಲ್ಲಿ ” ನೀರಿನ ಯೋಧರ ನಡಿಗೆ”ಯನ್ನು ನಡೆಸಿಕೊಟ್ಟರು ಮತ್ತು ಇದರಲ್ಲಿ ಶಾಸಕರು, ರೈತರು ಮತ್ತು ಸ್ವಯಂಸೇವಕರು ಭಾಗವಹಿಸಿದರು. ಜಾಥಾದ ನಂತರ ಎಲ್ಲರೂ ನೀರಿನ ಸಂಪನ್ಮೂಲಗಳನ್ನು ಕಲುಷಿತಗೊಳಿಸುವುದಿಲ್ಲವೆಂದೂ, ನೀರಿನ ಸದ್ಬಳಕೆ ಮಾಡುತ್ತೇವೆಂದೂ, ಗಿಡಗಳನ್ನು ನೆಡುತ್ತೇವೆಂದೂ ಮತ್ತು ಮಳೆ ನೀರಿನ ಕೊಯ್ಲನ್ನು ಮಾಡುತ್ತೇವೆಂದು ಪ್ರಮಾಣ ಮಾಡಿದರು.

ವೇದವತಿ ನದಿಯ ಕೆಲಸಗಳ ಪರಿಶೀಲನೆಯ ನಂತರ ಗುರುದೇವರು ಕುಮುದ್ವತಿ ನದಿಯ ಪುನಶ್ಚೇತನ ಕಾರ್ಯಗಳನ್ನು ವೀಕ್ಷಿಸಲು ತೆರಳಿದರು. ಆರ್ಟ್ ಆಫ್ ಲಿವಿಂಗ್ ಈಗ ದೇಶಾದ್ಯಂತ ದ 30 ನದಿಗಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿದೆ.

Comments

comments